ಬೆಂಗಳೂರು:ಮಕ್ಕಳು ಹಠ ಮಾಡುತ್ತಾರೆ ಎಂಬ 2ನೇ ಪತ್ನಿಯ ಮಾತು ಕೇಳಿ ದೋಸೆ ಎತ್ತುವ ಮೊಗಚೆ ಕೈಯನ್ನು ಬೆಂಕಿಯಲ್ಲಿ ಸುಟ್ಟು ಅಪ್ರಾಪ್ತ ಮೂವರು ಮಕ್ಕಳ ಮೇಲೆ ಬರೆ ಎಳೆದು ಕ್ರೌರ್ಯ ಮೆರೆದ ತಂದೆ ಹಾಗೂ ಮಲತಾಯಿಯನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ.
ಜೆಪಿನಗರ ರಾಗಿಗುಡ್ಡ ಕೆಎಸ್‌ಆರ್‌ಟಿಸಿ ಲೇಔಟ್‌ನ ನಿವಾಸಿ ತಮಿಳ್ ಸೆಲ್ವನ್ (45), ಈತನ 2ನೇ ಪತ್ನಿ ಸತ್ಯಾ (35) ಬಂದಿತರು. ಗಾಯಗೊಂಡಿರುವ ತಮಿಳ್ ಸೆಲ್ವನ್ ಹಾಗೂ ಆತನ ಮೊದಲ ಪತ್ನಿ ಅಂಜಲಿಗೆ ಜನಿಸಿದ ಮಕ್ಕಳಾದ ಸೌಮ್ಯ(3), ರಾಘವನ್ (4), ನಿತೇಶ್(6) ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಶರೀರದ ಹಲವು ಭಾಗಗಳು ಸುಟ್ಟು ಹೋಗಿದ್ದು, ನೋಡಲು ಆಗದಷ್ಟು ಭಯಾನಕವಾಗಿದೆ.
ಕ್ರೂಸರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸೆಲ್ವನ್ ಕೆಲ ವರ್ಷಗಳ ಹಿಂದೆ ಅಂಜಲಿ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿಗೆ ಸೌಮ್ಯ, ರಾಘವನ್, ನಿತೇಶ್ ಎಂಬ ಮೂವರು ಮಕ್ಕಳಿದ್ದವು. ಮೂರು ತಿಂಗಳ ಹಿಂದೆಯಷ್ಟೆ ಅಂಜಲಿ ಮೃತಪಟ್ಟಿದ್ದರು. ಈ ನಡುವೆ ಸೆಲ್ವನ್ ಸತ್ಯಾ ಎಂಬಾಕೆಯನ್ನು ವಿವಾಹವಾಗಿ ಜೆಪಿನಗರದಲ್ಲಿ ವಾಸಿಸುತ್ತಿದ್ದ. ಬಳಿಕ ತನ್ನ ಮೊದಲ ಪತ್ನಿಯ ಮೂವರು ಮಕ್ಕಳನ್ನು 2ನೇ ಪತ್ನಿ ಸತ್ಯಾ ಮನೆಗೆ ಕರೆದುಕೊಂಡು ಬಂದಿದ್ದ. ಸೆಲ್ವನ್ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದಂತೆ ಸತ್ಯಾ ಮಕ್ಕಳ ಮೇಲೆ ಗಂಡನಿಗೆ ಚಾಡಿ ಹೇಳುತ್ತಿದ್ದಳು. ಈ ರೀತಿ ಮಲತಾಯಿಯ ಮಾತು ಕೇಳಿ ಸೆಲ್ವನ್ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಚಿತ್ರಹಿಂಸೆ ಕೊಡುತ್ತಿದ್ದ.
ಸ್ವಂತ ಮಕ್ಕಳು ಎನ್ನದೆ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಜೂ.21ರಂದು ರಾತ್ರಿ 8.30ರಲ್ಲಿ ದೋಸೆ ಎತ್ತುವ ಮೊಗಚೆ ಕೈನಿಂದ ಮೂವರು ಮಕ್ಕಳಿಗೆ ಬರೆ ಎಳೆದು ಕ್ರೌರ್ಯ ಮೆರೆದಿದ್ದ. ಈ ನೋವನ್ನು ಸಹಿಸಲಾಗದೇ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದವು. ಈ ವೇಳೆ ಅಕ್ಕಪಕ್ಕದ ನೆರೆಮನೆಯವರು ಬಂದು ನೋಡಿದಾಗ ನಿತೇಶ್ ಕಾಲಿನಲ್ಲಿ ರಕ್ತ ಸುರಿಯುತ್ತಿತ್ತು. ಆತನನ್ನು ಹಿಂಬಾಲಿಸಿಕೊಂಡು ಬಂದ ಸೆಲ್ವನ್ ಕೈನಲ್ಲಿ ಎಕ್ಸಾ ಬ್ಲೇಡ್ ಕಂಡು ಬಂದಿತ್ತು.
ನರೆ-ಹೊರೆಯವರು ಬಂದಾಗ ಕೃತ್ಯ ಬೆಳಕಿಗೆಅನುಮಾನಗೊಂಡ ಅಕ್ಕ-ಪಕ್ಕದ ನಿವಾಸಿಗಳು ನಿತೇಶ್‌ನ್ನು ವಿಚಾರಿಸಿದಾಗ ಆತನ ಪಾದ ಹಾಗೂ ಭುಜದ ಬಳಿ ಸುಟ್ಟ ಗಾಯಗಳಾಗಿದ್ದವು. ಮನೆಯ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ ಮತ್ತಿಬ್ಬರು ಮಕ್ಕಳ ತಲೆ, ಹೊಟ್ಟೆ, ಕಾಲು ಹಾಗೂ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತು. ಮನೆ ಬಳಿ ಜನ ಸೇರುತ್ತಿದ್ದಂತೆ ಸೆಲ್ವನ್ ಪರಾರಿಯಾಗಿದ್ದ. ನೆರೆ-ಹೊರೆಯವರು ಮೂವರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಟ್ಟ ಕಂದಮ್ಮಗಳ ಅಳಲು:ಕಣ್ಣೀರು ಹಾಕುತ್ತಿರುವ ಮಕ್ಕಳು ತಂದೆ- ಮಲತಾಯಿ ಕಿರುಕುಳದ ಬಗ್ಗೆ ಹೇಳಿಕೊಂಡಿವೆ. ಭಿಕ್ಷೆ ಎತ್ತಲು ಕಳುಹಿಸುತ್ತೇನೆ ಎಂದು ಹೇಳಿ ವಿನಾಕಾರಣ ಮಲತಾಯಿ ಹೊಡೀತಿದ್ದಳು. ಅಮ್ಮನ ಮಾತು ಕೇಳಿ ಅಪ್ಪಾನೂ ಹೊಡೆಯುತ್ತಿದ್ದರು. ನಮಗೆ ಮಲಗಲು ಜಾಗವನ್ನೂ ಕೊಡುತ್ತಿರಲಿಲ್ಲ. ಮಂಚದ ಕೆಳಗಿನ ಬಾಕ್ಸ್‌ನಲ್ಲಿ ಮಲಗುತ್ತಿದ್ದೆವು ಎಂದು ಪುಟ್ಟ ಕಂದಮ್ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಊಟ ಇದ್ದರೂ ಬೇರೆ ಮನೆಗೆ ಹೋಗಿ ಊಟ ಕೇಳುತ್ತಿದ್ದರು. ಕೆಟ್ಟ ಮಾತು ಮಾತನಾಡಿ ಹೆಚ್ಚು ಹೊರಗಡೆ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಬುದ್ದಿ ಕಲಿಯಲಿ ಎಂದು ಹೀಗೆ ಮಾಡುತ್ತಿದ್ದೆವು ಎಂದು ಸತ್ಯಾ ಪೊಲೀಸರ ಮುಂದೆ ಸಬೂಬು ಹೇಳಿದ್ದಾಳೆ ಎಂದು ತಿಳಿದು ಬಂದಿದೆ.
ಉಗ್ರ ಹಫೀಜ್‌ ಸಯೀದ್‌ ಮನೆ ಮುಂದೆ ಭಾರಿ ಸ್ಫೋಟ: ಇಬ್ಬರ ಸಾವು- 16 ಮಂದಿ ಸ್ಥಿತಿ ಗಂಭೀರ

ಪತಿ ಗುಟ್ಟಾಗಿ ಪರಸ್ತ್ರೀ ಜತೆ ಲೈಂಗಿಕ ಸಂಬಂಧ ಹೊಂದಿದಾಗ ಪತ್ನಿ ಕೇಸ್‌ ಹಾಕಿದ್ರೆ ಏನಾಗುತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
