ಬೆಂಗಳೂರು:ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸುತ್ತಿದ್ದ ಪತಿಯನ್ನೇ ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ಪತ್ನಿ ಮತ್ತು ಪ್ರಿಯಕರನ ಗ್ಯಾಂಗ್ ಅನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ರಫಿ ಮೃತ ವ್ಯಕ್ತಿ. ತಸ್ಮಿನ್ ಬಾನು ಮೃತನ ಪತ್ನಿ. ಈಕೆಯ ಪ್ರಿಯಕರ ಅಪ್ಸರ್ ಖಾನ್. ಈ ಇಬ್ಬರಿಗೂ ಎರಡು ವರ್ಷಗಳ ಹಿಂದೆ ಮದುವೆ ಸಮಾರಂಭದಲ್ಲಿ ಪರಿಚಯವಾಗಿತ್ತು. ಸುಂದರಿಯಾಗಿದ್ದ ತಸ್ಮಿನ್‌ಗೆ ಮನಸೋತಿದ್ದ ಅಪ್ಸರ್‌ ಆಕೆಯನ್ನು ಮಾತಿನಲ್ಲಿ ಮರುಳು ಮಾಡಿದ್ದ. ನಂತರ ಇಬ್ಬರಲ್ಲಿಯೂ ಪ್ರೀತಿ ಚಿಗುರಿತ್ತು.
ಈ ನಡುವೆ ಮಹಮ್ಮದ್ ರಫಿ‌ ಮೂಲಕ ಮೈಸೂರಿನಲ್ಲಿ 75 ಲಕ್ಷ ರೂ. ಅನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರೋಪಿ ಹೂಡಿಕೆ ಮಾಡಿಸಿದ್ದ. ಅದರಲ್ಲಿ ಐದು ಲಕ್ಷ ಕಮಿಷನ್ ಕೊಡುವುದಾಗಿ ಹೇಳಿದ್ದ. ಇದರ ಉದ್ದೇಶವೆಂದರೆ ಆತನ ಜತೆ ಸಂಪರ್ಕದಲ್ಲಿ ಇದ್ದರೆ, ಆತನ ಪತ್ನಿ ಜತೆ ಅಕ್ರಮ ಸಂಬಂಧ ನಿರಾತಂಕವಾಗಿ ಮುಂದುವರೆಸಬಹುದು ಎಂದು ಸ್ಕೆಚ್‌ ಹಾಕಿದ್ದ.

ಅದರಂತೆ ಇತ್ತ ಕಮಿಷನ್‌ ಬರುತ್ತದೆ ಎಂದು ಮಹಮ್ಮದ್‌ ಅವರು ಕಾದು ಕುಳಿತರೆ, ಅಪ್ಸರ್‌ ಖಾನ್‌, ನಿರಾತಂಕವಾಗಿ ತಸ್ಮಿನ್‌ ಜತೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಕೊನೆಗೆ ಇಬ್ಬರೂ ಸೇರಿ ಮಹಮ್ಮದ್‌ನನ್ನು ಕೊಲೆ ಮಾಡುವ ಸಂಚು ರೂಪಿಸಿದರು.
ಅಂದರೆ ತಸ್ಮಿನಾ ಬಾನು ತನ್ನ ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು. ಕಮಿಷನ್‌ ಕೊಡುವ ನೆಪದಲ್ಲಿ ಕರೆಸಿಕೊಂಡಿದ್ದ ಅಪ್ಸರ್‌ ಸಹಚರರು ಅಲ್ಲಿ ಕೊಲೆ ಮಾಡಿದ್ದರು. ಮಾರಕಾಸ್ತ್ರಗಳಿಂದ ಕೊಚ್ಚ ಕೊಚ್ಚಿ ಕೊಲೆ ಮಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪತ್ನಿ, ಪ್ರಿಯಕರ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ತಿಂಗಳು ಎಚ್ಚರ… ಎಚ್ಚರ : ನಿಯಮ ಉಲ್ಲಂಘಿಸಿದರೆ 10 ಸಾವಿರ ರೂವರೆಗೂ ದಂಡ

ಸಹೋದರರ ಗಲಾಟೆ ಬಗೆಹರಿಸಲು ಹೋಗಿ ಹೆಣವಾದ ಸಬ್‌ ಇನ್ಸ್‌ಪೆಕ್ಟರ್‌! ಗುಂಡುಹೊಡೆದು ಸಾಯಿಸಿದ ಅಣ್ಣ

ಕೂದಲು ನೇರಮಾಡಲು ಯೂಟ್ಯೂಬ್‌ ಮೊರೆ ಹೋಗಿ ಬೆಂಕಿಯಲ್ಲಿ ಬೆಂದು ಹೋದ ಬಾಲಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
