ಬೆಂಗಳೂರು:ಈ ಬಾರಿ ವರುಣದ ರೌದ್ರಾವತಾರಕ್ಕೆ ದೇಶ-ವಿದೇಶಗಳ ಹಲವು ಪ್ರದೇಶಗಳು ನಲುಗಿ ಹೋಗಿವೆ. ಕರ್ನಾಟಕದಲ್ಲಿಯೂ ಈ ಬಾರಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲಿಯೂ ಬೆಂಗಳೂರು ಕೂಡ ಈ ಹಿಂದೆ ಕಾಣದಷ್ಟು ಭೀಕರ ಪರಿಣಾಮವನ್ನು ಈ ಬಾರಿ ಕಂಡಿದೆ. ಇದಕ್ಕೆ ಮೂಲ ಕಾರಣ ಬೆನ್ನತ್ತಿ ಹೋದಾಗ ಸಿಕ್ಕಿದ್ದು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಹಲವು ಬಹುಮಹಡಿ ಕಟ್ಟಡ ನಿರ್ಮಾಣವಾದದ್ದು.
ಈ ಹಿಂದೆ ಕೂಡ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆದಿದ್ದರೂ, ಒತ್ತುವರಿ ತೆರವುಗೊಳಿಸುವಂತೆ ಖುದ್ದು ನ್ಯಾಯಾಲಯವೇ ಸೂಚಿಸಿದ್ದರೂ ಆ ಬಗ್ಗೆ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ಮಾತ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ಕಟ್ಟಡಗಳ ತೆರವಿನ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಕಟ್ಟಡ ತೆರವುಗೊಳಿಸುವಂತೆ ಇದಾಗಲೇ ನೋಟಿಸ್​ ನೀಡಲಾಗಿದೆ. ಇದರಿಂದ ಹೌಹಾರಿಹೋಗಿರುವ ಕಟ್ಟಡಗಳ ಮಾಲೀಕರು ಅತ್ತು-ಕರೆದು ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಕಟ್ಟಡ ನೆಲಸಮ ಕಾರ್ಯದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿನ ಕಟ್ಟಡ ತೆರವು ಕಾರ್ಯಾಚರಣೆ ಕುರಿತು ‘ದಿಗ್ವಿಜಯ ನ್ಯೂಸ್​’ ಜತೆ ಮಾತನಾಡಿರುವ ಮುಖ್ಯಮಂತ್ರಿಗಳು, ‘ಮಳೆಯಿಂದ ವಿಪರೀತ ತೊಂದರೆ ಆಗಿದೆ. ಆದ್ದರಿಂದ ಇನ್ನು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಎಷ್ಟೇ ದೊಡ್ಡವರಿದ್ದರೂ ಯಾವ ಮಾತನ್ನೂ ಕೇಳಿಸಿಕೊಳ್ಳದೇ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತೇವೆ. ಇದಾಗಲೇ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದಿದ್ದಾರೆ.
‘ಒತ್ತುವರಿಗೆ ಸಂಬಂಧಿಸಿದಂತೆ ಕೋರ್ಟ್​ಗಳಲ್ಲಿ ಕೆಲವು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಆದರೆ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಇದಾಗಲೇ ಖುದ್ದು ಕೋರ್ಟ್​ ಆದೇಶಿಸಿದೆ. ಆದ್ದರಿಂದ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವವರ ಪರವಾಗಿ ಕೋರ್ಟ್​ ಆದೇಶ ಹೊರಡಿಸುವುದಿಲ್ಲ, ನಾವು ತೆರವು ಕಾರ್ಯವನ್ನು ಮುಂದುವರೆಸುತ್ತೇವೆ’ ಎಂದಿದ್ದಾರೆ.
ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಸಚಿವ ಆರ್​. ಅಶೋಕ್​ ಕೂಡ ಮಾತನಾಡಿದ್ದಾರೆ. ‘ಜನಸಾಮಾನ್ಯವರು ಮಾತ್ರವಲ್ಲದೇ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವ 30 ಐಟಿ-ಬಿಟಿ ಕಂಪೆನಿಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ. ಅವರ ಲಿಸ್ಟ್​ ನಮ್ಮ ಬಳಿ ಇದೆ. ಅವುಗಳನ್ನು ಕೂಡ ಶೀಘ್ರವೇ ತೆರವುಗೊಳಿಸಲಾಗುವುದು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದರು.
BREAKING: ಜ್ಞಾನವಾಪಿ ಮಸೀದಿಯಲ್ಲಿನ ಶೃಂಗಾರ ಗೌರಿ, ಶಿವಲಿಂಗದ ಪೂಜೆ: ವಿಚಾರಣೆಗೆ ಸಿಕ್ಕಿತು ಅನುಮತಿ- ಕೋರ್ಟ್​ನಿಂದ ಮಹತ್ವದ ತೀರ್ಪು

ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಏಳು ಮಂದಿ ಬಲಿ- ಹಲವರಿಗೆ ಗಾಯ

‘ಭಾರತ ಐಕ್ಯತಾ ಯಾತ್ರೆ’ಯ ಸಭೆಯ ಬ್ಯಾನರ್​ನಲ್ಲಿ ಸಿದ್ದು ಮಿಸ್ಸಿಂಗ್​! ಅಭಿಮಾನಿಗಳಿಗೆ ತಳಮಳ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight + 7 =
Remember me
