ಹೊಸೂರು (ತಮಿಳುನಾಡು):ಯಾವುದೇ ಸ್ಥಳಗಳಿಗೆ ಹೋಗುವಾಗಲೂ ಗೂಗಲ್​ ಮ್ಯಾಪ್​ ಹಾಕಿಕೊಂಡು ದಾರಿ ಹುಡುಕುವವರೇ ಅನೇಕ ಮಂದಿ. ಆದರೆ ಈ ಕೆಲವರು ಗೂಗಪ್​ ಮ್ಯಾಪ್​ ಜಾಡು ಹಿಡಿದು ಹಾದಿ ತಪ್ಪುತ್ತಿದ್ದರೆ, ಇನ್ನು ಕೆಲವರ ಜೀವಕ್ಕೇ ಇದು ಅಪಾಯ ತಂದೊಡ್ಡುತ್ತಿದೆ.
ಇದಾಗಲೇ ಗೂಗಪ್​ಮ್ಯಾಪ್​ನಿಂದ ಅಡ್ಡದಾರಿ ಹಿಡಿದು ಜೀವ ಕಳೆದುಕೊಂಡಿರುವ ಘಟನೆಗಳ ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಬೆಂಗಳೂರಿನ ಸರ್ಜಾಪುರದ ಕುಟುಂಬವೊಂದು ಗೂಗಪ್​ಮ್ಯಾಪ್​ನಿಂದಾಗಿ ಜೀವ ಕಳೆದುಕೊಳ್ಳುವ ಮಟ್ಟಿಗೆ ಹೋಗಿ ಅದೃಷ್ಟವಶಾತ್​ ಪಾರಾಗಿದೆ.
ರಾಜೇಶ್​ ಅವರು ಹೊಸೂರಿಗೆ ಹೋಗಿ ಕುಟುಂಬ ಸಹಿತ ಕಾರಿನಲ್ಲಿ ವಾಪಸ್​ ಆಗುವ ವೇಳೆ ಈ ಅವಘಡ ಸಂಭವಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ರಸ್ತೆ ಜಲಾವೃತಗೊಂಡಿದೆ. ಅದರಲ್ಲೂ ಹೊಸೂರು ಬಳಿಯ ಬಾಗೇಪಲ್ಲಿ ಭೂಸೇತುವೆಯಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದೆ.
ಇದರಿಂದಾಗಿ ದಾರಿ ಹೇಗೆಂದು ರಾಜೇಶ್​ ಅವರಿಗೆ ತಿಳಿಯಲಿಲ್ಲ. ಆಗ ಅವರು ಗೂಗಲ್​ ಮ್ಯಾಪ್​ ಮೊರೆ ಹೋಗಿದ್ದಾರೆ. ಅದು ಮುಂದೆ ಹೋಗಿ ಎಂದು ಹೇಳಿದೆ. ನಿಜವಾಗಿ ಹೇಳಬೇಕೆಂದರೆ ಈ ಪ್ರಕರಣದಲ್ಲಿ ಗೂಗಲ್​ ಮ್ಯಾಪ್​ ಸರಿಯಾದ ದಾರಿಯನ್ನೇ ಹೇಳಿದೆ. ಏಕೆಂದರೆ ಅಲ್ಲಿ ಪ್ರವಾಹದ ನೀರು ತುಂಬಿ ಹರಿಯುತ್ತಿರುವುದು ಮ್ಯಾಪ್​ಗೆ ಹೇಗೆ ತಿಳಿಯಬೇಕು. ಆದರೆ ರಾಜೇಶ್​ ಅವರು ಕತ್ತಲಲ್ಲಿ ದಾರಿ ಗೊತ್ತಾಗದ ಕಾರಣ, ಮ್ಯಾಪ್​ ಹೇಳಿದಂತೆ ಹೋಗಿದ್ದಾರೆ. ಇದರಿಂದ ಅವರು ಪ್ರವಾಹದ ನೀರಿನಲ್ಲಿ ಸಿಲುಕಿದ್ದಾರೆ.
ಕಾರಿ ನೀರೊಳಗೆ ಬೀಳುತ್ತಿರುವುದು ಗೊತ್ತಾಗುತ್ತಲೇ ಅವರು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆ ಮಾಡಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡದಿಂದಾಗಿ ಅವರು ಜೀವಸಹಿತ ಪಾರಾಗಿದ್ದಾರೆ. ರಕ್ಷಣಾ ತಂಡವು ಭಾರಿ ವಾಹನಗಳ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರನ್ನೂ ಹೊರತೆಗೆದಿದ್ದಾರೆ.
ಇದು ಒಂದು ಘಟನೆಯಾದರೆ ಗೂಗಲ್​ ಮ್ಯಾಪ್​ ನಂಬಿ ನದಿಗೆ, ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡವರೂ ಅನೇಕ ಮಂದಿ ಇದ್ದಾರೆ. ಆದ್ದರಿಂದ ಮ್ಯಾಪ್​ ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರಿ. ಅದು ಹೇಳಿದಂತೆ ಎಡ,ಬಲ ಸಾಗಬೇಡಿ. ಟರ್ನ್​ ಮಾಡುವಾಗ ಮುಂದೆ ಏನು ಇದೆ ಎಂದು ತಿಳಿದುಕೊಂಡು ಹೆಜ್ಜೆ ಇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್​)
ಬೆತ್ತಲಾಗಿ ಪೊಲೀಸರ ಕೈಗೆ ಸಿಕ್ಕಿಕೊಂಡ ನಟ ರಣವೀರ್​: 2 ಗಂಟೆ ಪೊಲೀಸ್​ ಡ್ರಿಲ್- ನಟ ಹೇಳಿದ್ದೇನು ನೋಡಿ…

ಹುಬ್ಬಳ್ಳಿಯಲ್ಲಿ ಓಕೆ, ಬೆಂಗಳೂರಲ್ಲಿ ನಾಟ್​ ಓಕೆ: ಪುನಃ ಹೈಕೋರ್ಟ್​ ಮೆಟ್ಟಿಲೇರಿದ ಈದ್ಗಾ ಗಣೇಶೋತ್ಸವ ವಿವಾದ!

ಬೆಂಗಳೂರಿನ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವಕ್ಕೆ ಭಾರಿ ಹಿನ್ನಡೆ: ಎರಡೇ ಗಂಟೆಗಳಲ್ಲಿ ಸುಪ್ರೀಂನಿಂದ ಬಂತು ಈ ರೀತಿ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
