ಬೆಂಗಳೂರು:ಗಂಡ ಹಾಗೂ ಅತ್ತೆ ಮನೆಯವರು ನೀಡುವ ಕಿರುಕುಳದಿಂದಾಗಿ ಅದೆಷ್ಟೋ ಮಹಿಳೆಯರು ಅತ್ತೆ ಮನೆಯವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿರುವುದನ್ನು ಕೇಳಿದ್ದೇವೆ. ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಪತ್ನಿ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದಾರೆ.
ಇದು ನಡೆದಿರುವುದು ಬೆಂಗಳೂರಿನ ಬಾಣಸವಾಡಿಯಲ್ಲಿ. ಅಮಿತ್‌ ಬೆಹೇತಿ ಎನ್ನುವ ವ್ಯಕ್ತಿಯೊಬ್ಬರು ಪತ್ನ ಇಶಾ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ನನ್ನ ವಿವಾಹ ಇಶಾಳೊಂದಿಗೆ ಎರಡೂವರೆ ವರ್ಷಗಳ ಹಿಂದೆ ಅಂದರೆ 2018ರಲ್ಲಿ ನಡೆದಿದೆ. ಮದುವೆಯ ಆರಂಭದ ದಿನಗಳಿಂದಲೇ ಆಕೆ ಸಿಕ್ಕಾಪಟ್ಟೆ ಹಣದ ಬೇಡಿಕೆ ಶುರು ಮಾಡಿದ್ದಳು. ಮಾತ್ರವಲ್ಲದೇ ಚಿನ್ನಾಭರಣ ನೀಡುವಂತೆಯೂ ಪೀಡಿಸುತ್ತಿದ್ದಳು. ಕೋಟಿ ಕೋಟಿ ರೂಪಾಯಿ ಬೇಡಿಕೆಯನ್ನೂ ಇಡುತ್ತಿದ್ದಾಳೆ. ಇಷ್ಟೆಲ್ಲಾ ಹಣ ನೀಡಲು ನಾನು ಒಪ್ಪದಿದ್ದ ಕಾರಣ, ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಅಮಿತ್‌ ದೂರಿದ್ದಾರೆ.
ಇತ್ತೀಚೆಗೆ ಪದೇ ಪದೇ ಒಂದು ಕೋಟಿ ರೂಪಾಯಿ ನೀಡುವಂತೆ ಪತ್ನಿ ಹಿಂಸಿಸುತ್ತಿದ್ದಾಳೆ. ಒಂದು ವೇಳೆ ನಾನು ಹಣ ಕೊಡದೇ ಹೋದರೆ ವರದಕ್ಷಿಣೆ ಕಿರುಕುಳ ಕೇಸ್‌ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದಿರುವ ಅಮಿತ್‌, ಆಕೆ ಏನಾದರೂ ಕೇಸ್‌ ಹಾಕಿ ತಮಗೆ ತೊಂದರೆ ಬರಬಹುದು ಎನ್ನುವ ಉದ್ದೇಶದಿಂದ ಈಗ ಪತ್ನಿಯ ವಿರುದ್ಧವೇ ದೂರು ದಾಖಲು ಮಾಡಿದ್ದಾರೆ. ಇಷ್ಟೇ ಅಲ್ಲ, ಇದಾಗಲೇ ತಮ್ಮ ಪತ್ನಿ ಮೂರು ಮದುವೆಯಾಗಿದ್ದು, ಎಲ್ಲರನ್ನೂ ವಂಚಿಸಿದ್ದಾಳೆ ಎಂದೂ ದೂರಿದ್ದಾರೆ.
ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸ್ತಾರಂತೆ ಸಿಎಂ: ಏನು ಹೇಳಿದ್ದಾರೆ ಕೇಳಿ…

ಇಂದಿನಿಂದಲೇ ಜಾರಿ ಗೋಹತ್ಯಾ ನಿಷೇಧ ಕಾಯ್ದೆ- ಏನೇನು ನಿಯಮಗಳು ಕಡ್ಡಾಯವಿದೆ ಇಲ್ಲಿ ನೋಡಿ…

ಇಲ್ಲೊಬ್ಬಳು ಸುಂದರಿ ಗಂಡನ ವಿರುದ್ಧ ಹೇಳಿದ್ದನ್ನೇ ಹೇಳ್ತಾ ಇರ್ತಾಳೆ- ಅವಳನ್ನು ನಿಭಾಯಿಸೋದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
