ಉಡುಪಿ:ಬೆಂಗಳೂರಿನ ಪ್ರೇಮಿಗಳು ಉಡುಪಿಯಲ್ಲಿ ಕಾರಿಗೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿ ಭಯಾನಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದ ಯಶವಂತ ಯಾದವ್ ಹಾಗೂ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಇವರಿಬ್ಬರ ಪ್ರೀತಿಗೆ ಪಾಲಕರ ವಿರೋಧವಿತ್ತು ಎಂದೇ ಪರಿಗಣಿಸಲಾಗಿತ್ತು.
ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೂ, ಇವರ ಪ್ರೀತಿಗೆ ಪಾಲಕರು ನಿರಾಕರಿಸಿದ್ದಾರೆ ಎಂಬ ಸುದ್ದಿಗೂ ಸಂಬಂಧ ಇಲ್ಲ ಎನ್ನಲಾಗಿದೆ. ಏಕೆಂದರೆ ಈ ಹುಡುಗ ಯಾರು? ತಮ್ಮ ಮಗಳು ಈತನನ್ನು ಪ್ರೀತಿಸುತ್ತಿದ್ದಳು ಎಂಬ ವಿಷಯ ಪಾಲಕರಿಗೆ ತಿಳಿದೇ ಇಲ್ಲ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಜ್ಯೋತಿಯ ತಾಯಿ ರತ್ನಮ್ಮಾ ಆ ಹುಡುಗ ಯಾರು ಎಂದೇ ನಮಗೆ ತಿಳಿದಿಲ್ಲ. ನಮಗೆ ಒಂದು ಫೋನ್​ನಿಂದ ಮಮ್ಮಿ ಡ್ಯಾಡಿ ಕ್ಷಮಿಸಿಬಿಡಿ ಎಂಬ ಮೆಸೇಜ್​ ಬಂತು. ಇದು ಯಾರ ಫೋನ್​, ಯಾರು ಮಾಡಿದ್ದು ಎಂದು ತಿಳಿಯಲಿಲ್ಲ. ಆದರೆ ಮಗಳೇ ಆತನ ಫೋನ್​ನಿಂದ ಮೆಸೇಜ್​ ಕಳಿಸಿದ್ದಾಳೆ ಎಂದು ನಂತರ ಅಂದುಕೊಂಡೆವು. 23 ವರ್ಷ ಬೆಳೆಸಿದ ಮಗಳು ಈ ತರ ಹೋಗ್ತಾಳೆ ಅಂತ ಕನಸಲ್ಲೂ ಯೋಚಿಸಿರಲಿಲ್ಲ. ಇಂಟರ್‌ವ್ಯೂ ಇದೆ ಅಂತ ಹೋಗಿದ್ಲು. ನಮಗೆ ಅನುಮಾನ ಕೂಡ ಇರಲಿಲ್ಲ. ಬುಧವಾರ 11 ಗಂಟೆಗೆ ಹೋಗಿದ್ಲು. ಸಂಜೆ ದೂರು ಕೊಟ್ಟಿದ್ವಿ. ಅವನು ಯಾರು ಅನ್ನೋದೇ ನಮಗೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಯುವಕನ ಪಾಲಕರ ಕಣ್ಣೀರೂ ನೋಡಲಾಗುತ್ತಿಲ್ಲ. ಹೆತ್ತವರು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈಕೆಗೆ ಮೋಸ ಮಾಡಿ ವಾಪಸ್ ಬರುವುದೂ ನನ್ನಿಂದ ಅಸಾಧ್ಯ. ನನಗೆ ಬಾಡಿಗೆ ಮನೆ ಸಿಕ್ಕಿದೆ. ಉದ್ಯೋಗವೂ ಸಿಕ್ಕಿದೆ. ಆದರೂ ನಾವಿಬ್ಬರು ಸಂತೋಷವಾಗಿಲ್ಲ. ನಾವು ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ. ನನ್ನನ್ನು ಕ್ಷಮಿಸಿಬಿಡಿ ಎಂದು ಸಂದೇಶ ಕಳುಹಿಸಿದ್ದ ಆತ.
ಹುಸೇನ್ ಎಂಬುವರಿಂದ ಸ್ವಿಫ್ಟ್​ ಕಾರು ಬಾಡಿಗೆ ಪಡೆದಿದ್ದ ಈ ಜೋಡಿ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದು ನಿಜಕ್ಕೂ ಆತ್ಮಹತ್ಯೆಯೆ? ಅಥವಾ ಇನ್ನೇನಾದರೂ ಇದೆಯೆ? ಮನೆಯವರಿಗೂ ಪ್ರೀತಿಯ ಬಗ್ಗೆ ತಿಳಿಸದೇ ಇಂಥದ್ದೊಂದು ಕೆಟ್ಟ ನಿರ್ಧಾರಕ್ಕೆ ಬರಲು ಕಾರಣವೇನು ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಅವಳು ನನ್ನನ್ನು ಬೆತ್ತಲೆ ನೋಡಿದ್ರೆ ಈ ಪ್ರಶ್ನೆಗೆ ಉತ್ತರಿಸಲಿ ನೋಡೋಣ: ವಿಶ್ವದ ನಂ.1 ಶ್ರೀಮಂತನ ಚಾಲೆಂಜ್​​!

ತಾಳಿ ಕಟ್ಟಿಸಿಕೊಳ್ಳದೇ ವಧುವಿನ ಹೈಡ್ರಾಮಾ: ಇವ್ನು ಬೇಡ, ಅವ್ನೇ ಬೇಕು ಎಂದು ಕುಸಿದುಬಿದ್ದ ಮೈಸೂರಿನ ವಧು

ಟ್ರೋಲ್​ ಆಗಲೆಂದೇ ಅರ್ಧಂಬರ್ಧ ಬಟ್ಟೆ ತೊಡುವ ಉರ್ಫಿಯ ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
