ಬೆಂಗಳೂರು:ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಬಂದೋಬಸ್ತ್‌ ಇನ್ನೂ ಬಿಗಿಗೊಳಿಸಲಾಗುತ್ತಿದೆ. ಇದರಿಂದಾಗಿ ವಾಹನಗಳ ಮೇಲೆ ರಸ್ತೆಗಳಿದವರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸುಳ್ಳು ಸುಳ್ಳು ನೆಪ ಹೇಳಿ ಸುತ್ತಾಡುವವರು ಹೆಚ್ಚಾಗುತ್ತಿರುವ ಕಾರಣ, ತೀರಾ ಅಗತ್ಯವಾಗಿ ಹೋಗಲೇಬೇಕಾದ ಅನಿವಾರ್ಯತೆ ಇರುವವರೂ ಕೂಡ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುವ ಘಟನೆಗಳು ನಡೆಯುತ್ತಿವೆ. ಆದರೆ ಪೊಲೀಸರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯೂ ಇದೆ.
ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಎಂಟು ತಿಂಗಳ ಮಗುವನ್ನು ಕಾರಿನಲ್ಲಿ ಕರೆದುಕೊಂಡು ಬಂದು ಪೇಚಿಗೆ ದಂಪತಿ ಸಿಲುಕಿರುವ ಘಟನೆ ನಡೆದಿದೆ. ರಾಜಾಜಿನಗರದಿಂದ ಚಾಲುಕ್ಯ ವೃತ್ತದ ಬಳಿ ಬಂದಿದ್ದ ಕಾರಿನಲ್ಲಿ ದಂಪತಿ ಮತ್ತು ಮಗು ಇತ್ತು.
ಮಹಾರಾಷ್ಟ್ರ ನೊಂದಣಿ ಇರುವ ಕಾರನ್ನು ಪೊಲೀಸರು ಜಪ್ತಿ ಮಾಡಿದರು. ಜಯಮಹಲ್ ಬಳಿ ತೆರಳಬೇಕು ಕಾರು ಬಿಡಿ ಎಂದು ದಂಪತಿ ಮನವಿ ಸಲ್ಲಿಸಿದರೂ ಪೊಲೀಸರು ಕೇಳಲಿಲ್ಲ. ಸರ್ ಕಾರಿನಲ್ಲಿ ಪುಟ್ಟ ಮಗು ಇದೆ, ಪ್ಲೀಸ್‌ ಅರ್ಥ ಮಾಡಿಕೊಳ್ಳಿ, ನೀವು ನನ್ ಕಾರು ಜಪ್ತಿ ಮಾಡಿದ್ರೆ ಮಗುಗೆ ಸಮಸ್ಯೆ ಆಗುತ್ತೆ ಅಂತ ದಂಪತಿ ಮನವಿ ಮಾಡಿದರೂ ಪೊಲೀಸರು ಅದಕ್ಕೆ ಜಗ್ಗದೇ ಠಾಣೆಗೆ ಕರೆದೋಯ್ದು ಪ್ರಕರಣ ದಾಖಲು ಮಾಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಓಡಾಟ ಮಾಡುತ್ತಿದ್ದು, ಅವರ ಬೈಕ್‌ ಸೀಜ್‌ ಮಾಡಲಾಗಿದೆ. ಮಾಸ್ಕ್ ಸರಿಯಾಗಿ ಹಾಕದ ವ್ಯಕ್ತಿಗೆ ಪೊಲೀಸ್ ಆವಾಜ್‌ ಹಾಕಿದ್ದು, ಮನವಿ ಮಾಡಿಕೊಂಡರೂ ಕೇಳದೇ ಬೈಕ್‌ ಸೀಜ್‌ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ.
ಮಗು ಹುಟ್ಟಿದ ಸಂತಸದ ಸುದ್ದಿ ಕೇಳುವ ಮುನ್ನವೇ ಕರೊನಾಕ್ಕೆ ಬಲಿಯಾದ ತಂದೆ: ಕಲಬುರಗಿಯಲ್ಲೊಂದು ದುರಂತ ಘಟನೆ

ನಬಾರ್ಡ್​ನಲ್ಲಿ ಕನ್ಸಲ್ಟಂಟ್​ಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ: 1.50 ಲಕ್ಷ ರೂ.ವರೆಗೆ ಸಂಬಳ

ಫೇಸ್‌ಬುಕ್ ಫೇಕ್ ಅಕೌಂಟ್‌- ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷನ ಹೆಸರಲ್ಲಿ ಹಣ ವಸೂಲಿ

ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್‌ ಪೀಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
