ಬೆಂಗಳೂರು:ಕಳೆದ ನಾಲ್ಕು ವರ್ಷಗಳಿಂದ ಈತ ಮಾಡಿರುವ ಅಪರಾಧಿಯ ಕೃತ್ಯಗಳಿಗೆ ಲೆಕ್ಕವೇ ಇಲ್ಲ. ಮನೆಗಳ್ಳತನ, ಸರಗಳ್ಳತನ, ಸುಲಿಗೆ ಸೇರಿದಂತೆ 30ಕ್ಕೂ ಅಧಿಕ ಅಪರಾಧಿಕ ಕೃತ್ಯಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವ. ಆದರೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸೋದ್ರಲ್ಲಿ ಈತ ಎಕ್ಸ್​ಪರ್ಟ್​.
ಇಂಥದ್ದೊಂದು ಖತರ್ನಾಕ ಕಳ್ಳನ ಹೆಸರು ಆಸೀಫ್. ಪೊಲೀಸರಿಗೆ ತಲೆನೋವಾಗಿದ್ದ ಈತನಿಗೆ ಪತ್ನಿಯ ಜತೆ ಜಗಳವಾಡಿದ್ದೇ ದೊಡ್ಡ ಮುಳುವಾಗಿ ಹೋಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆಸೀಫ್​, ಪತ್ನಿಯ ಜತೆ ಜಗಳವಾಡಿರುವ ಕಾರಣದಿಂದ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಗಿದ್ದೇನೆಂದರೆ, ಆಸೀಫ್​ ತನ್ನ ಪತ್ನಿ ಜತೆ ಜಗಳವಾಡಿಕೊಂಡು ಮನೆಯಿಂದ ದೂರವಾಗಿದ್ದ. ಈತನಿಗೊಬ್ಬ ಮಗಳಿದ್ದು, ಆಕೆ ಶಾಲೆಯಲ್ಲಿ ಓದುತ್ತಿದ್ದಾಳೆ. ಮಗಳನ್ನು ಪತ್ನಿ ತೋರಿಸುತ್ತಿರಲಿಲ್ಲ. ಈ ಕಾರಣದಿಂದ ಈತ ಮಗಳನ್ನು ನೋಡಲು ಆಕೆ ಓದುತ್ತಿರುವ ಶಾಲೆಗೆ ಹೋಗುತ್ತಿದ್ದ. ಅಲ್ಲಿ ಮಗಳನ್ನು ಗುಟ್ಟಾಗಿ ಭೇಟಿಯಾಗಿ ಬರುತ್ತಿದ್ದ.
ಈ ವಿಷಯ ಪೊಲೀಸರಿಗೆ ತಿಳಿದಿದೆ. ಆತ ಬರುವುದನ್ನೇ ಕಾದು ಮಗಳ ಶಾಲಾ ವಾಹನದಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಬಂಧಿತ ಆರೋಪಿಯಿಂದ ಪೊಲೀಸರು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.(ಏಜೆನ್ಸೀಸ್​)
ಸ್ವಲ್ಪ ದಿನಗಳ ಬಿಡುವಿನ ನಂತರ ಪುನಃ ರಾಜ್ಯದಲ್ಲಿ ವರುಣನ ಆರ್ಭಟ: ಮೂರು ದಿನ ಭಾರಿ ಮಳೆ
VIDEO: ಭಯೋತ್ಪಾದನೆ ನಂಟು; ಮೂರನೇ ಮದರಸಾವೂ ನೆಲಸಮ- ಎಂಟು ಬುಲ್ಡೋಜರ್​ ಬಳಸಿ ಧ್ವಂಸ ಕಾರ್ಯಾಚರಣೆ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − 17 =
Remember me
