ಬೆಂಗಳೂರು:ಮದುವೆಯಾಗುವುದಾಗಿ ಹೇಳಿ ಪ್ರಿಯತಮನನ್ನು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಹೋದ ಪ್ರೇಯಸಿ ಕೊನೆ ಗಳಿಗೆಯಲ್ಲಿ ಮನಸ್ಸು ಬದಲಿಸಿದ್ದರಿಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಾಮುಂಡೇಶ್ವರಿ ಲೇಔಟ್ ನಲ್ಲಿ ನಡೆದಿದೆ.
25 ವರ್ಷದ ಚರಣ್​ ಮನನೊಂದು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಯುವಕ ತನ್ನ ಜತೆ ಕೆಲಸ ಮಾಡುವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಕೂಡ ಪ್ರೀತಿಸುತ್ತಿದ್ದಳು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದ್ದರಿಂದ ಧರ್ಮಸ್ಥಳಕ್ಕೂ ಹೋಗಿದ್ದರು. ಆದರೆ ಅಲ್ಲಿಗೆ ಹೋದ ಮೇಲೆ ಯುವತಿ ಮನಸ್ಸು ಬದಲಾಯಿಸಿ ಮದುವೆಗೆ ಒಲ್ಲೆ ಎಂದಿದ್ದಾಳೆ.
ಇದರಿಂದ ನೊಂದುಕೊಂಡ ಚರಣ್​, ವಾಪಸ್ ಬೆಂಗಳೂರಿಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ವರ್ಷಗಳ ಹಿಂದೆ ಕೂಡ ಈತ ರೈಲ್ವೆ ಟ್ರಾಕ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಕಾರಣ ತಿಳಿದುಬಂದಿಲ್ಲ. ಆಗ ಈತನ ಸ್ನೇಹಿತರು ನೋಡಿ ಆತನನ್ನು ಕಾಪಾಡಿದ್ದರು.
ವಿಚಿತ್ರ ಎಂದರೆ ಚರಣ್​ ಸಹೋದರಿ ಕೂಡ ಇದೇ ರೀತಿ ಪ್ರೀತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಉಗ್ರನ ಸಂಸಾರ: ಹಿಂದೂಗಳ ಹತ್ಯೆಗೆ ಸಂಚು- ಯುವಕರೇ ಟಾರ್ಗೆಟ್​! ಸಿಎಂ ಹೇಳಿದ್ದೇನು?

ಮದುವೆಗೆ ಹೊರಟ ಕಾರು ಅಪಘಾತ: ಒಂದೇ ಕುಟುಂಬದ ಎಂಟು ಮಂದಿ ದಾರುಣ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 4 =
Remember me
