ಬೆಂಗಳೂರು:ಅಪಾರ್ಟ್​ಮೆಂಟ್​ ಒಳಗೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವ್ಯಕ್ತಿ ಕಳ್ಳನೆಂದು ಭಾವಿಸಿ ಸೆಕ್ಯುರಿಟಿ ಗಾರ್ಡ್​ ತಲೆಗೆ ಬಲವಾಗಿ ಹೊಡೆದ ಕಾರಣಕ್ಕೆ ಬ್ಯಾಂಕ್​ ಉದ್ಯೋಗಿಯೊಬ್ಬ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದೇ 5ರಂದು ಮಾರತ್ತಹಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಸುಮಾರು ಎರಡು ಗಂಟೆ ವೇಳೆ ಬ್ಯಾಂಕ್​ ಉದ್ಯೋಗಿ ಅಭಿಷೇಕ್​, ಪಾರ್ಟಿ ಮಾಡಿ ಬಂದು ಕಾಂಪೌಂಡ್ ಹಾರಿ ಬಂದಿದ್ದರು. ಅಪರಿಚಿತ ವ್ಯಕ್ತಿ ಅಪಾರ್ಟ್‌ಮೆಂಟ್ ಒಳಗೆ ಬರುತ್ತಿರುವುದನ್ನು ಗಮನಿಸಿದ ಸೆಕ್ಯುರಿಟಿ ಶ್ಯಾಮನಾಥ್ ನೀವು ಯಾರು ಎಂದು ಪ್ರಶ್ನಿಸಿದ್ದಾರೆ.
ಸೆಕ್ಯುರಿಟಿ ಎಷ್ಟೇ ಕೇಳಿದರೂ ಪಾರ್ಟಿ ಮಾಡಿದ ಭಯದಿಂದಲೋ ಏನೋ ಅಭಿಷೇಕ್​ ಬಾಯಿ ಬಿಟ್ಟಿಲ್ಲ. ಅದರ ಬದಲು ಒಳಗೆ ರಭಸದಿಂದ ಹೋಗತೊಡಗಿದ್ದಾರೆ. ಇದನ್ನು ಗಮನಿಸಿದ ಸೆಕ್ಯುರಿಟಿ ಆತ ಕಳ್ಳನೆಂದು ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅಲ್ಲಿಯೇ ಜಿಮ್‌ನಲ್ಲಿದ್ದ ರಾಡ್‌ನಿಂದ ಅಭಿಷೇಕ್ ತಲೆಗೆ ಹೊಡೆದುಬಿಟ್ಟಿದ್ದಾರೆ.
ಅಭಿಷೇಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಕಳ್ಳತನ ಮಾಡಿದರೆ ತನ್ನ ಕೆಲಸ ಹೋಗುತ್ತದೆ ಎಂದು ಸೆಕ್ಯುರಿಟಿ ಗಾರ್ಡ್ ಹೀಗೆ ಮಾಡಿದ್ದಾರೆ. ಆದರೆ ಆಮೇಲೆ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ. ಛತ್ತೀಸ್‌ಗಢ ಮೂಲದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದು, ಮಧ್ಯರಾತ್ರಿ ಪಾರ್ಟಿ ಮುಗಿಸಿ ಅಪಾರ್ಟ್​ಮೆಂಟ್​ ಒಳಗೆ ಬರುತ್ತಿರುವ ವಿಷಯ ತಿಳಿದಿದೆ. ಸದ್ಯ ಸೆಕ್ಯುರಿಟಿಯನ್ನು ಅರೆಸ್ಟ್​ ಮಾಡಲಾಗಿದೆ.
ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

VIDEO- ವರದಕ್ಷಿಣೆ ಕಾಲ ಇದಲ್ಲಾರಿ… ಮದ್ವೆ ಬೇಕೆಂದ್ರೆ ಒಪ್ಪಂದಕ್ಕೆ ಸಹಿ ಹಾಕಿ: ಯುವತಿಯರಿಂದ ಹೊಸ ಟ್ರೆಂಡ್

ಅಭಿಮಾನಿಗಳು ತಂದಿಟ್ಟ ಸಂಕಷ್ಟ: ಹುಟ್ಟುಹಬ್ಬದಂದೇ ಜೈಲುಪಾಲಾದ ಖ್ಯಾತ ಯೂಟ್ಯೂಬರ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + 19 =
Remember me
