ಬೆಂಗಳೂರು:ಆತ್ಮಹತ್ಯೆಗೆ ಯತ್ನಿಸಿದ್ದವನ ಬದುಕನ್ನು ಬದಲಾಯಿಸಿ ಮಾದರಿ ರೈತನನ್ನಾಗಿ ಮಾಡಿದ ಸಮಗ್ರ ಕೃಷಿ ಪದ್ಧತಿ. ಇಂತಹ ಮಾದರಿ ರೈತ ದುರ್ಗಪ್ಪ ಅಂಗಡಿಯವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ಕಚೇರಿಗೆ ಕರೆಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಿಮೆ ನೀರಿನಲ್ಲಿಯೂ ಕೃಷಿ ಸಾಧನೆ ಮಾಡುವ ಕೋಲಾರದ ರೈತರು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಎನ್ನುವುದು ರೈತರನ್ನು ಒಂದಲ್ಲ ಒಂದು ರೀತಿಯಲ್ಲಿ ಕೈಹಿಡಿದೇ ಹಿಡಿಯುತ್ತದೆ. ಸಾಲ ಮಾಡಿದೆನೆಂದು ಕೊರಗುವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲಾ ಅನ್ನದಾತರಿಗೂ ಸ್ಫೂರ್ತಿ ಎಂದು ಬಿ.ಸಿ.ಪಾಟೀಲ್ ಶ್ಲಾಘಿಸಿದರು.
ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿಯೇ “ರೈತರೊಂದಿಗೊಂದು ದಿನ”ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ರೈತನ ಸಾಧನೆ ಅವನಲ್ಲಿನ ಆತ್ಮಸ್ಥೈರ್ಯ ಹೇಗೆ ಪರಿಣಾಮಕಾರಿ ಮತ್ತು ಸ್ಫೂರ್ತಿದಾಯಕವೆನ್ನುವುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ ಹಾಗೂ ತೋರಿಸುತ್ತಿದ್ದಾರೆ. ಇಂತಹ ಗಟ್ಟಿಮನಸಿನ ರೈತರೇ ಇತರರಿಗೂ ಮಾದರಿಯಾಗಬಲ್ಲರೆಂಬುದನ್ನು ಇವರು ಹೇಳಿದ್ದಾರೆ. ಅಲ್ಲದೇ ಅನ್ನದಾತನ ಸ್ಫೂರ್ತಿದಾಯಕ ಬದುಕು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗುವುದೆಂದರೆ ಅದು ನಮ್ಮ ರಾಜ್ಯದ ಅನ್ನದಾತ ಎನ್ನುವುದು ಹೆಮ್ಮೆಯೇ ಸರಿ. ಸಾಧನೆಗೆ ಶೈಕ್ಷಣಿಕ ಅರ್ಹತೆಯೊಂದೇ ಮುಖ್ಯವಲ್ಲ. ಸಾಧಿಸುವ ಛಲ, ದಿಟ್ಟ ನಡೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿ ಇತರ ರೈತರಿಗೂ ಸ್ಫೂರ್ತಿದಾಯಕರಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಜಾಗೊಂಡ ಸಾರಿಗೆ ನೌಕರರ ಮರು ನೇಮಕಕ್ಕೆ ಚಾಲನೆ- 700 ಸಿಬ್ಬಂದಿ ಮೊಗದಲ್ಲಿ ನಗು

VIDEO: ಬುರ್ಕಾಧಾರಿ ಹಿಂದೆ ಹೋದ ಎಸ್‌ಪಿ ಕಾರ್ಯಕರ್ತ ಮಾಡಿದ್ದೇನು ನೋಡಿ! ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
