ಕಲಬುರಗಿ:ಕರೊನಾ ಎರಡನೆಯ ಅಲೆಯ ಕರಾಳ ಮುಖ ದಿನ ದಿನಕ್ಕೂ ವಿಸ್ತಾರವಾಗುತ್ತಲೇ ಸಾಗಿದೆ. ಪಾಲಕರನ್ನು ಕಳೆದುಕೊಂಡು ತಬ್ಬಲಿಗಳಾಗುತ್ತಿರುವ ಕಂದಮ್ಮಗಳು ಒಂದೆಡೆಯಾದರೆ, ಕಣ್ಣೆದುರಿಗೇ ಮಕ್ಕಳನ್ನು, ಪತಿ/ಪತ್ನಿ, ಪಾಲಕರನ್ನು ಕಳೆದುಕೊಂಡವರ ಗೋಳು ಹೇಳತೀರದಾಗಿದೆ.
ಇದೀಗ ಅಂಥದ್ದೇ ಒಂದು ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ. ಒಂದೆಡೆ ತಾಯಿ ಕಂದನಿಗೆ ಜನ್ಮ ನೀಡುತ್ತಿದ್ದಂತೆಯೇ ಇತ್ತ ಆಕೆಯ ಪತಿ ಕರೊನಾಗೆ ಬಲಿಯಾಗಿರುವ ಘಟನೆ ಇದಾಗಿದೆ.
ಸುಭಾಷ್ ತಾವರಖೇಡ (32) ಕರೊನಾ ಸೊಂಕಿಗೆ ಬಲಿಯಾದವರು. ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ನಿವಾಸಿ. ಕಳೆದ 15 ದಿನಗಳಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸುಭಾಷ್‌ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸುಭಾಷ್‌ ಅವರ ಪತ್ನಿ ಮಗುವಿನ ಜನ್ಮ ನೀಡಿದ್ದಾರೆ. ಮಗುವಿನ ಜನನದ ಸುದ್ದಿ ಕೇಳೊ ಮುಂಚೆಯೇ ಕರೊನಾಗೆ ತಂದೆ ಬಲಿಯಾಗಿರುವ ದುರಂತ ಘಟನೆ ಇದಾಗಿದೆ.
ನಬಾರ್ಡ್​ನಲ್ಲಿ ಕನ್ಸಲ್ಟಂಟ್​ಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ: 1.50 ಲಕ್ಷ ರೂ.ವರೆಗೆ ಸಂಬಳ

ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?

ನನ್ನ ಗಂಡನನ್ನು ಕಂಡರೆ ತಂಗಿಗೆ ಆಗುವುದಿಲ್ಲ, ಆದರೆ ಇವರಿಗೆ ಅವಳು ಬೇಕಂತೆ- ನಾನೇನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + four =
Remember me
