ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​)ನ ಬೆಂಗಳೂರಿನ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಜೆಕ್ಟ್​ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂರು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ನಾಲ್ಕು ವರ್ಷದವರೆಗೆ ಅವಧಿ ವಿಸ್ತರಿಸಲಾಗುವುದು.
ಹುದ್ದೆಯ ವಿವರಪ್ರಾಜೆಕ್ಟ್​ ಇಂಜಿನಿಯರ್​ 43 ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 16 ಸ್ಥಾನ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 11, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗೆ 5, ಎಸ್ಸಿ 7 ಮತ್ತು ಎಸ್ಟಿ ಅಭ್ಯರ್ಥಿಗೆ 4 ಸ್ಥಾನ ಮೀಸಲಿರಿಸಲಾಗಿದೆ.
ಶೈಕ್ಷಣಿಕ ಅರ್ಹತೆಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಶೇ. 55 ಅಂಕದೊಂದಿಗೆ ಐಎಸ್​/ಸಿಎಸ್​ಇ/ಮೆಕ್ಯಾನಿಕಲ್​/ಎಸಿಇ ವಿಷಯದಲ್ಲಿ ಬಿಇ ಅಥವಾ ಬಿಟೆಕ್​ ಪದವಿ ಪಡೆದಿರಬೇಕು. ಕನಿಷ್ಠ 2 ವರ್ಷ ಸಂಬಂಧಪಟ್ಟ ಕ್ಷೇತ್ರದಲ್ಲಿ ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ1.6.022ಕ್ಕೆ ಅನ್ವಯವಾಗುವಂತೆ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇತರ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಇರಲಿದೆ.
ವೇತನಪ್ರಥಮ ವರ್ಷ 40,000, ದ್ವಿತೀಯ ವರ್ಷ 45,000, ತೃತೀಯ ವರ್ಷ 50,000 ಹಾಗೂ 4ನೇ ವರ್ಷ 55,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದಲ್ಲದೆ ಪ್ರತಿ ವರ್ಷ 12,000 ರೂ. ಇತರ ಭತ್ಯೆ ನೀಡಲಾಗುವುದು.
ಅರ್ಜಿ ಶುಲ್ಕ ಮತ್ತು ಸಲ್ಲಿಕೆ ವಿಧಾನಸಂಸ್ಥೆಯ ವೆಬ್​ಸೈಟ್​ನಲ್ಲಿ ಮೊದಲು ನೋಂದಣಿ ಮಾಡಿಕೊಂಡು ನಂತರ ಅಗತ್ಯ ದಾಖಲೆಗಳೊಂದಿಗೆ ನೀಡಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 400 ರೂ.ನೊಂದಿಗೆ 18% ಜಿಎಸ್​ಟಿ ಪಾವತಿಸಿ ಸಲ್ಲಿಸಬೇಕು. ಆನ್​ಲೈನ್​ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶವಿದೆ. ಅರ್ಜಿಯನ್ನು ಪೋಸ್ಟ್​ ಮೂಲಕ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ 1:5 ಅನುಪಾತದಲ್ಲಿ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು. ಸಂದರ್ಶನ ನಡೆಯುವ ದಿನಾಂಕವನ್ನು ಇ-ಮೇಲ್​ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ:Manager (HR/ES-SW), Barat Electronics Limited, Jalahalli Post, Bengaluru-560013
ಅರ್ಜಿ ಸಲ್ಲಿಸಲು ಕೊನೇ ದಿನ: 28.6.2022ಅಧಿಸೂಚನೆಗೆ:https://bit.ly/3moQyaf
ಮಾಹಿತಿಗೆ:https://bel-india.in/
ವಿಜ್ಞಾನದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ? ತುಮಕೂರು ವಿವಿಯಲ್ಲಿದೆ ಬೋಧಕರ ಹುದ್ದೆ

ಕನ್ನಡ ಬಲ್ಲಿರಾ? ಉಡುಪಿ ಪಂಚಾಯಿತಿಗಳಲ್ಲಿದೆ 41 ಹುದ್ದೆ: ವಿದ್ಯಾರ್ಹತೆ ಬೇಕಿಲ್ಲ- 29 ಸಾವಿರ ರೂ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
