ಬೆಳಗಾವಿ:ಪತಿ ಹಾಗೂ ಆತನ ಮನೆಯವರ ಕಣ್ಣುತಪ್ಪಿಸಿ ನಡುರಾತ್ರಿ ಪ್ರೇಮಿಯನ್ನು ಸಿಗಲು ಬಂದ ಯುವತಿಯೊಬ್ಬಳು ಕುಟುಂಬದವರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುರುಕಟನಾಳ ಗ್ರಾಮದಲ್ಲಿ ನಡೆದಿದೆ.
ಈ ವಿವಾಹಿತೆಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ. ಆದರೆ ಯುವತಿಯ ವಿವಾಹ ಬೇರೆಯವನ ಜತೆ ಆಗಿತ್ತು. ಆದರೆ ಮದುವೆಯ ನಂತರವೂ ಪ್ರೇಮವ್ಯವಹಾರ ಮುಂದುವರೆದಿತ್ತು.
ನಿನ್ನೆ ತಡರಾತ್ರಿ ಯುವತಿ, ಯಾರಿಗೂ ತಿಳಿಯದಂತೆ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಾಳೆ. ಪ್ರಿಯತಮೆಯನ್ನು ನೋಡಿದ ಪ್ರೇಮಿ ಖುಷಿಯಿಂದ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ.
ಆದರೆ ಯುವತಿಯ ಬಗ್ಗೆ ಮೊದಲೇ ಪತಿಗೆ ಅನುಮಾನ ಶುರುವಾಗಿತ್ತು. ನಡುರಾತ್ರಿ ಆಕೆ ಮನೆಯಲ್ಲಿ ಇಲ್ಲದ್ದನ್ನು ನೋಡಿ ಕುಟುಂಬದವರ ಜತೆ ಅವಳ ಅರಿವಿಗೆ ಬಾರದಂತೆ ಪತಿ ಹಿಂಬಾಲಿಸಿದ್ದಾನೆ. ಇತ್ತ ಪ್ರಿಯಕರನ ಜತೆ ಏಕಾಂತದಲ್ಲಿ ಇದ್ದಾಗ ಎಲ್ಲರೂ ದಿಢೀರ್‌ ದಾಳಿ ಮಾಡಿ ರೆಡ‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ನಂತರ ಇಬ್ಬರನ್ನೂ ಸಾರ್ವಜನಿಕವಾಗಿ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ.
ಸುಮಾರು ನಾಲ್ಕು ಗಂಟೆ ಇಬ್ಬರನ್ನೂ ಟ್ರ್ಯಾಕ್ಟರ್‌ಗೆ ಕಟ್ಟಿ ಹಾಕಿದ್ದಾರೆ. ನಂತರ ಆಕೆಯಿಂದ ದೂರ ಇರುವಂತೆ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ತ್ರಿಕೋನ ಪ್ರೇಮ ಕಥೆಯ ಭೀಕರ ಅಂತ್ಯ: ಕ್ಲಾಸ್‌ ಒಳಗೆ ನುಗ್ಗಿ ಗೆಳೆಯನ ಮೇಲೆ ಗುಂಡು- ಪ್ರೇಯಸಿಯ ಕೊಲೆ!

VIDEO- ಪತಿಯ ಮೇಲೆ ಈ ಟೈಂನಲ್ಲಿ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್‌ ಆದ್ಲು!

ಹೈಕೋರ್ಟ್‌ ನ್ಯಾಯಮೂರ್ತಿ ಮನೆಗೆ 150 ಕಾಂಡೋಂ ಕಳುಹಿಸಿ ಮಹಿಳೆ ಪ್ರತಿಭಟನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
