ಬೆಳಗಾವಿ:ಕರೊನಾ ಎರಡನೆಯ ಅಲೆ ಭೀಕರ ರೂಪ ತಳೆಯುತ್ತಿರುವ ನಡುವೆಯೇ ಬ್ಲ್ಯಾಕ್‌ ಫಂಗಸ್‌ ಜನರ ನಿದ್ದೆಗೆಡಿಸಿದೆ. ಇದರ ಮಧ್ಯೆಯೇ ಈಗ ವೈಟ್‌ ಫಂಗಸ್‌ ಮಹಾಮಾರಿ ಕಾಲಿಟ್ಟುಬಿಟ್ಟಿದೆ.
ಬೆಳಗಾವಿಯ ಇಬ್ಬರು ಕರೊನಾ ಸೋಂಕಿತರಲ್ಲಿ ವೈಟ್‌ ಫಂಗಸ್‌ ಪತ್ತೆಯಾಗಿದ್ದು, ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದೆ. ಈ ಕುರಿತು ಮಾಹಿತಿ ಮಾಡಿರುವ ಡಿಹೆಚ್‌ಒ ಡಾ.ಎಸ್.ವಿ‌.ಮುನ್ಯಾಳ್, ಇದಾಗಲೇ ಬ್ಲ್ಯಾಕ್‌ ಫಂಗಸ್‌ ನಿದ್ದೆಗೆಡಿಸಿದೆ. ಇದರ ನಡುವೆ ಇಬ್ಬರು ವೈಟ್‌ ಫಂಗಸ್‌ ಕೂಡ ಪತ್ತೆಯಾಗಿದ್ದು, ಇದರ ಫಲಿತಾಂಶ ಬಂದ ಮೇಲೆ ನಿಖರವಾಗಿ ತಿಳಿಯಲಿದೆ. ಸದ್ಯ ಮಾದರಿಗಳನ್ನು ಬಯಾಪ್ಸಿ, ಪೊಟ್ಯಾಸಿಯಮ್‌ ಹೈಡ್ರಾಕ್ಸೈಡ್ ಟೆಸ್ಟ್‌ಗೆ ಕಳಿಸಿದ್ದೇವೆ ಎಂದಿದ್ದಾರೆ.
ಇದಾಗಲೇ ಬೆಳಗಾವಿಯಲ್ಲಿ 9 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ‘ಕೋವಿಡ್ ಚಿಕಿತ್ಸೆ ಉಪಚಾರದ ಅಡ್ಡ ಪರಿಣಾಮಗಳಲ್ಲಿ ಬ್ಲ್ಯಾಕ್ ಫಂಗಸ್ ಒಂದು. ಆಕ್ಸಿಜನ್‌ ಪೈಪ್‌, ಮಾಸ್ಕ್, ನೀರು ಕಾಲಕಾಲಕ್ಕೆ ಬದಲಾವಣೆ ಮಾಡಬೇಕು, ನಾವು ಬಳಸುವ ಮಾಸ್ಕ್ ಶುಚಿಯಾಗಿರಬೇಕು, ಪ್ರತಿದಿನ ಶುಚಿಗೊಳಿಸಿ, ಐರನ್ ಮಾಡಿ ಬಳಸುವುದು ಉತ್ತಮ ಎಂದು ಡಾ. ಮುನ್ಯಾಳ್ ಹೇಳಿದ್ದಾರೆ.
ಒಂದೇ ಮಾಸ್ಕ್ ಎರಡ್ಮೂರು ದಿನ ಬಳಸಿದ್ರೆ ಅದೂ ಫಂಗಸ್‌ಗೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಸಹ ಪತ್ತೆಯಾಗುತ್ತಿದೆ. ಗೋಕಾಕ್, ಅಥಣಿಯ ಇಬ್ಬರು ಬ್ಲ್ಯಾಕ್ ಫಂಗಸ್‌ನಿಂದ ಮೃತಪಟ್ಟಿದ್ದಾರೆ. ಉಳಿದ 7 ರೋಗಿಗಳಿಗೆ ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಪ್ರತ್ಯಕ್ಷವಾದ ‘ಮತ್ಸ್ಯಕನ್ಯೆ‘! ಜಾಲತಾಣದ ತುಂಬ ಈಕೆಯದ್ದೇ ಹವಾ..

ಭೌತಶಾಸ್ತ್ರಜ್ಞ ಐನ್‌ಸ್ಟೀನ್‌ನ ಈ ಪತ್ರ 10 ಕೋಟಿ ರೂ.ಗೆ ಹರಾಜು! ಅದರಲ್ಲೇನಿದೆ ಅಂಥ ವಿಶೇಷತೆ?

ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
