ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ಉದ್ಯಮಿಗಳನ್ನ ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಮಂಗಳೂರು ಪೊಲೀಸರು ಎದುರಿಸುತ್ತಿದ್ದಾರೆ.
ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಪಡೆದ ಆರೋಪ ಇವರ ಮೇಲಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.ಉದ್ಯಮಿ ಕರುಣಾಕರ ಭಂಡಾರಿ ಎಂಬುವವವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ದಾಳಿ ಮಾಡಿದ್ದರು. ಆಗ ಅವರಿಂದ ಸಿಸಿಬಿ ಪಿಎಎಸ್‌ಐ ಕಬ್ಬಾಳ್ ರಾಜ್ 55 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವಿದೆ.
ಈ ಕುರಿತು ‘ವಿಜಯವಾಣಿಗೆ‘ ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿಕೆ ನೀಡಿದ್ದಾರೆ. ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಲವೇ. ನನ್ನ ಮುಂಬೈ ಗೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಅವರ ಆರೋಪಿಸಿದ್ದಾರೆ.
ಈ ವೇಳೆಯೂ ಸುಳ್ಳು ಕೇಸ್ ಹಾಕಿ ಮಾನ ಮರ್ಯಾದೆ ತೆಗೆಯೋದಾಗಿ ಬೆದರಿಸಿ ಒಬ್ಬರಿಂದ 35 ಲಕ್ಷ ಮತ್ತು ಇನ್ನೊಬ್ಬರಿಂದ 25 ಲಕ್ಷ ಪಡೆದಿದ್ದಾರೆ, ಜತೆಗೆ ಹರೀಶ್ ಮತ್ತು ವಿಶ್ವಾಸ್ ಎಂಬವರಿಂದಲೂ ಬೆದರಿಸಿ ಲಕ್ಷ ಲಕ್ಷ ಪಡೆದಿದ್ದಾರೆ ಎಂದು ಲಕ್ಷ್ಮೀಶ್ ಮಾಹಿತಿ ನೀಡಿದ್ದಾರೆ.
ಇವರೆಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದಾರೆ. ಸದ್ಯ ಇವರೆಲ್ಲರೂ ಬಂದು ಸಿಐಡಿ ಪೊಲೀಸರ ಎದುರು ಮಾಹಿತಿ ಕೊಡಲು ತಯಾರಿದ್ದಾರೆ ಎಂದು ತಿಳಿದುಬಂದಿದೆ.
ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಯುವತಿಯರ ನೋಡಿ ಮದುವೆ ಪ್ರಪೋಸಲ್‌ ಇಡೋ ಯುವಕರೇ… ಎಚ್ಚರ ಎಚ್ಚರ…

VIDEO: ಸಿಎಂ ನಿವಾಸದ ಮುಂದೆ ಘರ್ಜಿಸುತ್ತಿದೆ ಸಿಂಹ: ಇದು ಮೇಕ್‌ ಇನ್‌ ಇಂಡಿಯಾದ ಹೆಮ್ಮೆ

ಇವರಿಗೆ ತೆಳ್ಳಗೆ, ಬೆಳ್ಳಗೆ ಲುಕ್ ಇರೋ ಯುವತಿಯರೇ ‌ ಇರಬೇಕಂತೆ- ಮೂಗು, ಕೂದಲು ಉದ್ದವಿರಬೇಕಂತೆ!

ಕರ್ನಾಟಕ ವೆಡ್ಸ್‌ ಕೇರಳ- ಮದುವೆಗೆ ಅಡ್ಡಿಬಂತು ಕರೊನಾ ರಿಪೋರ್ಟ್‌: ಮದುಮಕ್ಕಳು ಹೈರಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + three =
Remember me
