ಕೇಂದ್ರ ಸರ್ಕಾರದಸ್ವಾಮ್ಯಕ್ಕೆ ಒಳಪಟ್ಟಿರುವ ದೇಶದ ಅತಿ ದೊಡ್ಡ ಇಂಜಿನಿಯರಿಂಗ್​ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​ ಲಿಮಿಟೆಡ್​(ಬಿಎಚ್​ಇಎಲ್​) 83ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ಬಿಎಚ್​ಇಎಲ್​, ಇದೀಗ ಇಂಜಿನಿಯರಿಂಗ್​ ಟ್ರೇನಿ ಮತ್ತು ಎಕ್ಸಿಕ್ಯೂಟಿವ್​ ಟ್ರೇನಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬಿಎಚ್​ಇಎಲ್​ ಕುಟುಂಬದಲ್ಲಿ ಸದಸ್ಯರಾಗುವ ಅವಕಾಶವನ್ನು ಯುವ ಪ್ರತಿಭಾವಂತ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು.
ವಿಭಾಗವಾರು ಹುದ್ದೆಗಳ ವಿವರ* ಸಿವಿಲ್​ ಇಂಜಿನಿಯರಿಂಗ್​ -40 *ಮೆಕಾನಿಕಲ್​- 30 * ಐಟಿ/ಕಂಪ್ಯೂಟರ್​ ಸೈನ್ಸ್​ – 20 * ಎಲೆಕ್ಟ್ರಿಕಲ್​- 15 * ಕೆಮಿಕಲ್​-10 * ಮೆಟಲರ್ಜಿ – 5 * ಫೈನಾನ್ಸ್​- 20 * ಎಚ್​ಆರ್​ -10(150 ಹುದ್ದೆಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 61 ಸ್ಥಾನ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 15, ಇತರ ಅಭ್ಯರ್ಥಿಗಳಿಗೆ 41, ಎಸ್ಸಿಗೆ 22, ಎಸ್ಟಿಗೆ 11 ಸ್ಥಾನ ಮೀಸಲಿರಿಸಲಾಗಿದೆ. ಕೆಮಿಕಲ್​ ಹಾಗೂ ಮೆಟಲರ್ಜಿ ವಿಭಾಗ ಹೊರತು ಪಡಿಸಿ ಉಳಿದ ವಿಭಾಗಗಳಲ್ಲಿ ಶೇ.4 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ)
ವಿದ್ಯಾರ್ಹತೆ: ಮಾನ್ಯತೆ ಪಡೆದ ಇಂಜಿನಿಯರಿಂಗ್​ ಶೈಕ್ಷಣಿಕ ಸಂಸ್ಥೆಗಳಿಂದ ಮೆಕಾನಿಕಲ್​, ಇಲೆಕ್ಟ್ರಿಕಲ್​, ಸಿವಿಲ್​, ಕೆಮಿಕಲ್​, ಮೆಟಲರ್ಜಿ, ಕಂಪ್ಯೂಟರ್​ ಸೈನ್ಸ್​ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು, ಡಿಪ್ಲೊಮಾ ಇನ್​ ಹ್ಯೂಮನ್​ ರಿಸೋರ್ಸ್​ ಮ್ಯಾನೇಜ್​ಮೆಂಟ್​, ಪಸೋರ್ನಲ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಲೇಷನ್ಸ್​, ಸೋಷಿಯಲ್​ ವರ್ಕ್ಸ್​, ಬ್ಯುಸಿನೆಸ್​ ಅಡ್ಮಿನಿಸ್ಟ್ರೆಷನ್​, ವಿಷಯಗಳಲ್ಲಿ ಶೇ.60 ಅಂಕಗಳೊಂದಿಗೆ 2 ವರ್ಷಗಳ ಡಿಪ್ಲೊಮಾ ಕೋರ್ಸ್​ ಮಾಡಿರುವವರು, ಹಾಗೂ ಸಿಎ, ಐಸಿಡಬ್ಲುಎ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: 1.9.2022ಕ್ಕೆ ಅನ್ವಯವಾಗುವಂತೆ ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​, ಕೆಮಿಕಲ್​, ಮೆಟಲರ್ಜಿ ವಿಭಾಗದ ಇಂಜಿನಿಯರಿಂಗ್​ ಟ್ರೇನಿ ಅಭ್ಯರ್ಥಿಗಳಿಗೆ ಬ್ಯಾಚುಲರ್​ ಡಿಗ್ರಿ ಪಡೆದಿರುವವರಿಗೆ 27 ವರ್ಷ, ಸ್ನಾತಕೋತ್ತರ ಪದವಿ ಪಡೆದವರಿಗೆ 29 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಎಕ್ಸಿಕ್ಯೂಟಿವ್​ ಟ್ರೇನಿ ಹುದ್ದೆಗಳಿಗೆ ಗರಿಷ್ಠ 29 ವರ್ಷ ವಯೋಮಿತಿ ಇದೆ. ಕೇಂದ್ರ ಸರ್ಕಾರದ ನಿಯಮಗಳನ್ವಯ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.
ನೇಮಕಾತಿ ವಿಧಾನ: ಕಂಪ್ಯೂಟರ್​ ಆಧಾರಿತ ಆನ್​ಲೈನ್​ ಪರೀಕ್ಷೆ ನಡೆಸಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಜೇಷ್ಠತಾ ಪಟ್ಟಿ ತಯಾರಿಸಿ 1:5ರ ಅನುಪಾತದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗುತ್ತದೆ. ಸಂದರ್ಶನದಲ್ಲಿ ಉತ್ತಮ ಸಾಧನೆ ತೋರಿದವರನ್ನು ಟ್ರೇನಿಯಾಗಿ ನೇಮಿಸಿಕೊಳ್ಳಲಾಗುತ್ತದೆ.
ತರಬೇತಿ ಮತ್ತು ಸ್ಟೆ$ಪೆಂಡ್​: ಬಿಎಚ್​ಇಎಲ್​ಗೆ ಇಂಜಿನಿಯರ್​/ಟ್ರೇನಿ ಇಂಜಿನಿಯರ್​ ಆಗಿ ಆಯ್ಕೆಯಾದವರಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಮಾಸಿಕ < 50,000 ರೂ ಇದ್ದು, ತರಬೇತಿ ಪೂರ್ಣಗೊಂಡು ಉದ್ಯೋಗಿಯಾಗಿ ಆಯ್ಕೆಯಾದಾಗ ಮಾಸಿಕ 60,000-1,80,000 ರೂ. ವೇತನ ಇರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ: ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದು, ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ಹಾಗೂ ಒಬಿಸಿ ಅಭ್ಯರ್ಥಿಗಳು 800 ರೂ. ಅರ್ಜಿ ಶುಲ್ಕದೊಂದಿಗೆ ಬಿಎಚ್​ಇಎಲ್​ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಮೀಸಲಾತಿ ಅಭ್ಯರ್ಥಿಗಳು ಪ್ರೊಸೆಸಿಂಗ್​ ಶುಲ್ಕ 300 ರೂ. ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕಡೇ ದಿನ: 4.10.2022ಪರೀಕ್ಷೆ ನಡೆಯುವ ದಿನಾಂಕ: 2022ರ ಅ.31 ಹಾಗೂ ನ.1 ಮತ್ತು 2ಅಧಿಸೂಚನೆಗೆ:https://bit.ly/3UfQglt
ಮಾಹಿತಿಗೆ:https://careers.bhel.in.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿವೆ ಬೋಧಕೇತರ ಹುದ್ದೆಗಳು: ಅರ್ಜಿ ಆಹ್ವಾನ- ಲಕ್ಷ ರೂ.ವರೆಗೆ ಸಂಬಳ
ವಿವಿಧ ಪದವಿ, ವಿಧವಿಧ ಉದ್ಯೋಗ: ನೀತಿ ಆಯೋಗದಿಂದ ಅರ್ಜಿ ಆಹ್ವಾನ- 1.45 ಲಕ್ಷ ರೂ.ವರೆಗೆ ಸಂಬಳ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten − eight =
Remember me
