ಬೆಂಗಳೂರು:ಕರೊನಾ ಸಂಕಷ್ಟದಲ್ಲಿ ಎದುರಾಗುತ್ತಿರುವ ದಿನಸಿ, ಊಟ ಮತ್ತು ಆಮ್ಲಜನಕ ಕೊರತೆ ನೀಗಿಸಲು ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಮುಂದಾಗಿದ್ದಾರೆ. ಭುವನಂ ಫೌಂಡೇಷನ್ ಮೂಲಕ ಅಗತ್ಯವಾಗಿ ಬೇಕಾದ ದಿನಸಿ, ಊಟ ಮತ್ತು ಆಮ್ಲಜನಕವನ್ನು ಉಚಿತವಾಗಿ ನೀಡುತ್ತಿದ್ದಾರೆ.
ಫೀಡ್ ಕರ್ನಾಟಕ ಮೂಲಕ ದಿನಸಿ, ಭಾಂಧವ ಮೂಲಕ ಔಷಧಿ, ಊಟ ಮತ್ತು ಶ್ವಾಸದ ಮೂಲಕ ಆಮ್ಲಜನಕವನ್ನು ನೀಡಲು ಕೆಲಸಕ್ಕೆ ಮುಂದಾಗಿದ್ದಾರೆ. ಈ ಉಚಿತ ಸೌಲಭ್ಯಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶುಕ್ರವಾರ ಫ್ರೀಡಂ ಪಾರ್ಕ್ ಬಳಿ ಚಾಲನೆ ನೀಡಿದರು.
ನಂತರ ಮಾತನಾಡಿ ಸಚಿವ ಸುಧಾಕರ್, ಕರೊನಾದ ಸಂಕಷ್ಟ ಕಾಲದಲ್ಲಿ ಸಂಘ-ಸಂಸ್ಥೆಗಳು ಮುಂದೆ ಬಂದು ಈ ರೀತಿ ಉಚಿತವಾಗಿ ಸೇವೆಗಳನ್ನು ನೀಡುತ್ತಿರುವುದು ಖುಷಿಯ ವಿಚಾರವಾಗಿದೆ. ಶ್ವಾಸ ಎಂಬ ಯೋಜನೆ ಅಡಿ ಎರಡು ಬಸ್‍ಗಳಲ್ಲಿ ಆಕ್ಸಿಜನ್ ಸೌಲಭ್ಯ ಅಳವಡಿಕೆ ಮಾಡಿ ಅಗತ್ಯ ಇರುವ ರೋಗಿಗಳಿಗೆ ಇದರ ಬಳಕೆಗೆ ಅವಕಾಶ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ನಟಿ ಹರ್ಷಿಕಾ ಪೂಣಚ್ಚ, ನಾವು ಭುವನಂ ಫೌಂಡೇಷನ್ ಈಗಾಗಲೇ ಬಡವರಿಗೆ ಈ ದಿನಸಿ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಹೊಸದಾಗಿ ಔಷಧಿ ಹಂಚಿಕೆ ಮಾಡುವುದು ಹಾಗೂ ಆಮ್ಲಜನಕ ನೀಡುವ ಸೇವೆ ಆರಂಭಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳ ಮುಂದೆ ಈ ಎರಡು ಬಸ್ ಇರಲಿದೆ. ಬೆಡ್ ಸಿಗುವವರೆಗೂ ರೋಗಿಗಳು ಈ ಬಸ್‍ನಲ್ಲಿ ಆಮ್ಲಜನಕ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಬಸ್ ಸಂಖ್ಯೆ ಹೆಚ್ಚು ಮಾಡುವುದಾಗಿ ತಿಳಿಸಿದರು.
ನಟ ಭೂವನ್ ಪೊನ್ನಣ್ಣ, ತುಂಬಾ ಜನರು ಆಮ್ಲಜನಕ ಸಿಗದೆಯೇ ಸಾಯುತ್ತಿದ್ದಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ನಾವು ಶ್ವಾಸ ಎಂಬ ಸೇವೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಸ್‍ಗಳ ಸಂಖ್ಯೆಯನ್ನು 50ಕ್ಕೆ ಏರಿಕೆ ಮಾಡುವ ಯೋಜನೆ ಇದೆ. ಇನ್ನೂ ಕರೊನಾ ಸೋಂಕಿತರಿಗೆ ಊಟ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲು ಆಟೋ ಸೇವೆ ಆರಂಭಿಸಿದ್ದೇವೆ. ಅವಶ್ಯಕವಾಗಿ ಬೇಕಾದವರು ಈ ಸೇವೆಗಳನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸೇವೆಗಳಿಗಾಗಿ- 7676629211, 6362437686, 9945008004 ಸಂಪರ್ಕಿಸಬಹುದು.
ಆಸ್ಪತ್ರೆಗಳಿಗೆ ಸೂಚನೆ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ. ದುರುಪಯೋಗ ಮಾಡಿಕೊಳ್ಳದೇ ಅಗತ್ಯಕ್ಕನುಸಾರವಾಗಿ ಬಳಕೆ ಮಾಡಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ಆಕ್ಸಿಜನ್ ಬಸ್‍ಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 1075 ಮೆಟ್ರಿಕ್ ಟನ್ ಆಕ್ಸಿಜನ್ ನೀಡಿದೆ. ಇನ್ನೂ ಕೆಲವು ಕಡೆಗಳಿಂದ ಆಕ್ಸಿಜನ್ ಬರುವುದಿದೆ. ಅಗತ್ಯಕ್ಕೆ ಅನುಸಾರವಾಗಿ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ದುರುಪಯೋಗ ಪಡಿಸಿಕೊಂಡ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಒಂದು ಸಾವಿನ ನೋವು ಮರೆಯುವ ಮುನ್ನವೇ ಡಿಸಿಎಂ ಸವದಿ ಕುಟುಂಬಕ್ಕೆ ಮತ್ತೊಂದು ಆಘಾತ

ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
