ಬೆಂಗಳೂರು:ಬಿಗ್​​ಬಾಸ್​ ಓಟಿಟಿ ಶುರುವಾಗಿ ಒಂದು ವಾರದಲ್ಲಿಯೇ ಡ್ಯಾನ್ಸರ್​ ಕಮ್ ಮಾಡೆಲ್​,​ ಯೋಗಾ ಟೀಚರ್ ಕಿರಣ್​ ಯೋಗೇಶ್ವರ್ ಅವರು biggboss ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡೆಲಿಂಗ್​ ಹಾಗೂ ಸಿನಿ ಜಗತ್ತಿನ ಕೆಲವೊಂದು ಕರಾಳ ಮುಖವನ್ನು ‘ದಿಗ್ವಿಜಯ ನ್ಯೂಸ್’​ ಜತೆ ಹಂಚಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕಿರಣ್​ ಮಾಡೆಲಿಂಗ್​ ಕ್ಷೇತ್ರಕ್ಕೆ ಕಾಲಿಟ್ಟು, ನಂತರ ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ತಿಳಿಸಿದ್ದಾರೆ. ಈ ಕ್ಷೇತ್ರಗಳಿಗೆ ಹೊಸದಾಗಿ ಬರುವ ಹುಡುಗಿಯರು ಎಂಥ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬ ಕಹಿ ಸತ್ಯವನ್ನು ಅವರು ಬಹಿರಂಗಗೊಳಿಸಿದ್ದಾರೆ.
ಯಾರದ್ದೇ ಶಿಫಾರಸು ಇಲ್ಲದೇ ಬೇರೆ ರಾಜ್ಯಗಳಿಂದ ಹುಡುಗಿಯರು ಮಾಡೆಲಿಂಗ್​ ಕ್ಷೇತ್ರಕ್ಕೆ ಬರುವುದು ತುಂಬಾ ಕಷ್ಟ. ಒಂದು ವೇಳೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಬೇಕು ಎಂದುಕೊಂಡರೆ ಎಲ್ಲದ್ದಕ್ಕೂ ಸಿದ್ಧವಾಗಿರಲು ಹೋಗಬೇಡಿ, ಏಕೆಂದರೆ ಹೆಣ್ಣುಮಕ್ಕಳಿಗೆ ಮೊದಲಿಗೆ ಕೇಳುವ ವಿಷಯವೇ ಅದು. ನೀವು ಎಲ್ಲದಕ್ಕೂ ಕಾಂಪ್ರಮೈಸ್​ ಆಗಲು ರೆಡಿ ಇದ್ದೀರಾ ಎಂದು ಕೇಳುತ್ತಾರೆ. ಒಂದೇ ಸಲಕ್ಕೆ ಖ್ಯಾತ ಮಾಡೆಲ್​ ಎನಿಸಿಕೊಳ್ಳಲು ಹೋಗಿ ಎಲ್ಲದಕ್ಕೂ ಎಸ್​ ಎಸ್​ ಎಂದರೆ ನಿಮ್ಮತನವನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಕಿರಣ್​.
ಧೈರ್ಯವಾಗಿರಿ, ಈಗಲ್ಲದಿದ್ದರೆ ಮುಂದೆ ಅವಕಾಶಗಳು ಹುಡುಕಿ ಬರುತ್ತವೆ ಎಂದ ಅವರು, ತಾವು ಆರಂಭದಲ್ಲಿ ಮಾಡೆಲಿಂಗ್​ ಕ್ಷೇತ್ರಕ್ಕೆ ಬಂದಾಗ ಆದ ಕಹಿ ಅನುಭವವನ್ನು ಹಂಚಿಕೊಂಡರು. ನನಗೆ ಅವಕಾಶ ಕೊಡಲು ಒಬ್ಬರು ರೆಡಿ ಇದ್ದರು. ನಂತರ ಒಂದು ಶಾಟ್​ ತೆಗೆದುಕೊಳ್ಳುತ್ತೇನೆ, ಅದರಿಂದ ನೀವು ಪ್ರಸಿದ್ಧರಾಗಬಹುದು, ಓಕೆನಾ ಅಂದರು. ನನಗೆ ತುಂಬಾ ಖುಷಿಯಾಯಿತು. ಓಕೆ ಅಂದೆ. ತಕ್ಷಣ ಮತ್ತೊಂದು ಕರೆ ಬಂತು. ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ನೀವು ಆ ವ್ಯಕ್ತಿಯ ಜತೆ ಒಂದೇ ಒಂದು ದಿನ… ಎಂದು ಹೇಳಿದರು. ನನಗೆ ತುಂಬಾ ಶಾಕ್​ ಆಗಿ ಅಲ್ಲಿಗೇ ಮಾಡೆಲಿಂಗ್​ ನಿರ್ಧಾರ ಬಿಟ್ಟುಬಿಟ್ಟೆ ಎಂದರು. ನಾನು ಒಪ್ಪದ ಕಾರಣ, ನಿನ್ನ ಮೂಗು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಎನ್ನಲು ಶುರು ಮಾಡಿದರು. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಕ್ರಮೇಣ ಯಾವುದೇ ರೀತಿಯ ಕಾಂಪ್ರಮೈಸ್​ ಮಾಡಿಕೊಳ್ಳದೇ ಈ ಹಂತಕ್ಕೆ ಬಂದಿದ್ದೇನೆ. ಮಾಡೆಲಿಂಗ್​, ಸಿನಿಮಾದಲ್ಲಿ ವಿಪುಲ ಅವಕಾಶ ಸಿಗುತ್ತಿವೆ ಎಂದರು.
ಇದೇ ವೇಳೆ ಬಿಗ್​ಬಾಸ್​ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುರಿತೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಮ್ಮದು ರಾಜಸ್ಥಾನದ ಸಂಪ್ರದಾಯಸ್ಥ ಕುಟುಂಬ. ಏಳನೇ ಕ್ಲಾಸ್​ನಲ್ಲಿಯೇ ಮದುವೆ ಮಾಡಲು ನೋಡಿದ್ದರು. ಹಾಗೂ ಹೀಗೂ ಅದರಿಂದ ತಪ್ಪಿಸಿಕೊಂಡೆ. ಕಾಲೇಜಿಗೆ ಹೋಗುತ್ತಿದ್ದ ವೇಳೆ ಮೊಣಕಾಲುದ್ದದ ಒಂದು ಸ್ಕರ್ಟ್​ ಹಾಕಿಕೊಂಡಿದ್ದೆ. ನಮ್ಮ ಅಪ್ಪ ಅದನ್ನು ಸುಟ್ಟಿಯೇ ಬಿಟ್ಟರು. ಆದರೆ ನನಗೆ ಸಿಕ್ಕಾಪಟ್ಟೆ ಅಚ್ಚರಿಯಾಗಿದ್ದು ಏನೆಂದರೆ ಇದೇ ಅಪ್ಪ, ಬಿಗ್​ಬಾಸ್​ನಲ್ಲಿ ನನ್ನ ಬಿಕಿನಿ ಡ್ರೆಸ್​ ನೋಡಿ ಏನು ಹೇಳದೇ ಇದ್ದುದು.
ಅಷ್ಟೇ ಅಲ್ಲದೇ, ನೀನು ಇನ್ನುಮುಂದೆ ಇಂಥದ್ದೇ ಸೆಕ್ಸಿ ಡ್ರೆಸ್​ ಆಯ್ಕೆ ಮಾಡಿಕೋ ಎಂದರು. ಇವರು ನಿಜವಾಗಿಯೂ ನನ್ನ ಅಪ್ಪ ಹೌದಾ ಎನ್ನುವಷ್ಟರ ಮಟ್ಟಿಗೆ ಸಂದೇಹ ಶುರುವಾಯ್ತು. ನನ್ನ ಸಹೋದರಿನಿಗೂ ಕೇಳಿದೆ, ನಿಜವಾಗಿಯೂ ಅಪ್ಪನೇ ಹೀಗೆ ಹೇಳೋದಾ ಅಂತ. ಈಗ ಅವರಿಗೂ ಮಾಡೆಲಿಂಗ್​ ಕ್ಷೇತ್ರದ ಪರಿಚಯವಾಗಿದ್ದು, ಅವರು ಇದನ್ನು ಸಲೀಸಾಗಿ ಸ್ವೀಕರಿಸಿದ್ದಾರೆ ಎಂದು ಕಿರಣ್​ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕಿರಣ್​ ಅವರ ಸಂದರ್ಶನ ಇಲ್ಲಿದೆ ಕೇಳಿ


ಸೌದಿಗೆ ಹಾರಿದ 3 ಮಕ್ಕಳ ತಾಯಿ: ನೊಂದ ಪತಿಯಿಂದ ಘೋರ ಕೃತ್ಯ, ಕಂದಮ್ಮಗಳಿಗೆ ಇದೆಂಥ ಅನ್ಯಾಯ!

ರೇಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಾಜಿ ಸಚಿವನಿಗೆ ರಕ್ಷಣೆ? ಹೈಕೋರ್ಟ್​ ಗರಂ- ಎಫ್​ಐಆರ್​ ದಾಖಲಿಸಲು ಆದೇಶ

ಎರಡು ಸಾವಿರ ರೂ.ಗೆ ಯುವತಿಯ ಜತೆ ಮಂಚಕ್ಕೆ ಹೋದ ಇನ್ಸ್​ಪೆಕ್ಟರ್​: ಪೊಲೀಸರ ಬಲೆಗೆ ಗಂಡ-ಹೆಂಡ್ತಿ, ಅಪ್ಪ!

ಗಿಳಿ ಹುಡುಕಿದವರಿಗೆ 80 ಸಾವಿರ ರೂ. ಬಹುಮಾನ ನೀಡಿದ್ದ ತುಮಕೂರಿನ ದಂಪತಿಯಿಂದ ಮತ್ತೊಂದು ಮಹತ್ವದ ನಿರ್ಧಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − one =
Remember me
