ಬೆಂಗಳೂರು:ಬಿಗ್​ಬಾಸ್ ಓಟಿಟಿ ಸೀಸನ್​-1 ಶುರುವಾಗಿ ಎರಡು ವಾರಗಳೇ ಕಳೆಯುತ್ತಾ ಬಂದಿವೆ. ಪ್ರತಿವಾರ ಒಬ್ಬೊಬ್ಬರು ಎಲಿಮಿನೇಟ್​ ಆಗುವುದು ಇದರ ನಿಯಮ. ಆದರೆ ಮೊದಲ ವಾರದಂತೆ ಎರಡನೆಯ ವಾರವೂ ಇಬ್ಬರು ಎಲಿಮಿನೇಟ್​ ಆಗಿದ್ದಾರೆ.
ಒಟ್ಟು 9 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು. ಅವರೆಂದರೆ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ ಮತ್ತು ಆರ್ಯವರ್ಧನ್ ಗುರೂಜಿ.
ಈ ಪೈಕಿ ಅತ್ಯಂತ ಕಡಿಮೆ ಮತ ಗಳಿಸಿರುವ ಸ್ಫೂರ್ತಿ ಗೌಡ ಎಲಿಮಿನೇಟ್​ ಆಗಿದ್ದಾರೆ. ಸ್ಫೂರ್ತಿ ಗೌಡ ಅವರು ಈ ವಾರದ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ತೋರಿಸಿಲ್ಲ. ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಕೂಗಾಡಿದ್ದರು. ಆದ್ದರಿಂದ ಅವರಿಗೆ ಕಡಿಮೆ ಮತ ಬಿದ್ದಿದ್ದರಿಂದ ಎಲಿಮಿನೇಟ್​ ಆಗಿದ್ದಾರೆ. ಅಷ್ಟೇ ಅಲ್ಲದೇ, ‘ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ನನಗೆ ಆಸಕ್ತಿ ಇಲ್ಲ’ ಎಂಬುದನ್ನು ಪದೇಪದೇ ಹೇಳುತ್ತಿದ್ದೂದು ಎಲಿಮಿನೇಟ್​ಗೆ ಕಾರಣವಾಗಿದೆ. ಇದರಿಂದ ಇವರ ಅಭಿಮಾನಿಗಳಿಗೆ ಭಾರಿ ಶಾಕ್​ ಆಗಿದೆ.
ಕುತೂಹಲ ಎಂದರೆ ಮೊದಲನೆಯ ವಾರದಂತೆ ಎರಡನೆಯ ವಾರವೂ ಇಬ್ಬರು ಎಲಿಮಿನೇಟ್​ ಆಗಿದ್ದಾರೆ. ಕಾರಣವೂ ಸೇಮ್​ ಟು ಸೇಮ್​. ಮೊದಲ ವಾರದಲ್ಲಿ ಕಿರಣ್​ ಕಡಿಮೆ ಮತ ಪಡೆದು ಎಲಿಮಿನೇಟ್ ಆದರೆ, ಲೋಕೇಶ್ ಗಾಯಗೊಂಡು ಹೊರ ನಡೆದಿದ್ದರು. ಎರಡನೆಯ ವಾರದಲ್ಲಿ ಕಡಿಮೆ ಮತ ಬಿದ್ದುದಕ್ಕೆ ಸ್ಫೂರ್ತಿ ಗೌಡ ಎಲಿಮಿನೇಟ್​ ಆದರೆ, ಗಾಯದ ಸಮಸ್ಯೆಯಿಂದ ಅರ್ಜುನ್ ರಮೇಶ್ ಹೊರ ಹೋಗಿದ್ದಾರೆ.
ಕೆಲವು ಟಾಸ್ಕ್‌ಗಳಲ್ಲಿ ಸ್ಫೂರ್ತಿ ಗೌಡ ಉತ್ಸಾಹ ತೋರಲಿಲ್ಲ. ಅವಕಾಶ ಸಿಕ್ಕರೂ ಸ್ಫೂರ್ತಿ ಗೌಡ ಅದನ್ನ ಸದುಪಯೋಗ ಪಡಿಸಿಕೊಳ್ಳಲಿಲ್ಲ. ತಾವು ಪ್ರಬಲ ಸ್ಪರ್ಧಿ ಎಂಬುದನ್ನ ಪ್ರೂವ್ ಮಾಡುವಲ್ಲಿ ಸ್ಫೂರ್ತಿ ಗೌಡ ಹಿಂದೆಬಿದ್ದರು. ವೀಕ್ಷಕರನ್ನ ಸೆಳೆಯುವಲ್ಲಿ ಸ್ಫೂರ್ತಿ ಗೌಡ ಯಶಸ್ವಿಯಾಗಲಿಲ್ಲ. ಇದೇ ಕಾರಣಕ್ಕೆ ಸ್ಫೂರ್ತಿ ಗೌಡ ಅವರಿಗೆ ಕಳಪೆ ಹಣೆಪಟ್ಟಿ ಸಿಕ್ಕಿತ್ತು. ಟಾಸ್ಕ್‌ಗಳಲ್ಲಿ ಸರಿಯಾಗಿ ಪರ್ಫಾಮ್ ಮಾಡದ ಕಾರಣ ಸ್ಫೂರ್ತಿ ಗೌಡ ಅವರನ್ನು ಇತರೆ ಸ್ಪರ್ಧಿಗಳು ಜೈಲಿಗೆ ಕಳುಹಿಸಿದ್ದರು. ಈ ಕಾರಣದಿಂದ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ.
ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!

ಚಿರು ಸರ್ಜಾ ಸಾವಿನ ನಂತರ 2ನೇ ಮದುವೆ ಆಗ್ತಿದ್ದಾರಾ ನಟಿ ಮೇಘನಾ ರಾಜ್? ಸಂದರ್ಶನದಲ್ಲಿ ಅವರು ಹೇಳಿದ್ದೇನು ಕೇಳಿ…​

ಮೊಟ್ಟೆ ಆಯ್ತು, ಈಗ ನಾಟಿಕೋಳಿ ವಾರ್​: ಸಿದ್ದುಗೆ ಶುರುವಾಯ್ತು ಚಿಕನ್​ ಸಂಕಟ- ಧರ್ಮಸ್ಥಳದ ನಂತರ ಮಡಿಕೇರಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
