ಕಲಬುರಗಿ:ಚಿಂಚೋಳಿ ತಾಲ್ಲೂಕಿನ ಹೂವಿನಹಳ್ಳಿ ಬಳಿ ಎರಡು ಬೈಕ್​ಗಳು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ದುರ್ಮರಣಕ್ಕೀಡಾದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಶಿರೋಳ್ಳಿ ಗ್ರಾಮದ ಜಗನ್ನಾಥ್ ಚಕ್ಕುಲಿ (35) ಮೇಹಬೂಬ್ ಅಲಿ (45) ಹಾಗೂ ಚಿಂಚೋಳಿ ತಾಲ್ಲೂಕಿನ ಶಾದಿಪೂರ ಗ್ರಾಮದ ಶ್ರೀಕಾಂತ್ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅಮರ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದು ಬೈಕ್ ಚಿಂಚೋಳಿ ಕಡೆಗೆ ಹಾಗೂ ಇನ್ನೊಂದು ಬೈಕ್ ಸುಲೇಪೇಟ್ ಕಡೆಗೆ ಬರುವಾಗ ದುರ್ಘಟನೆ ನಡೆದಿದೆ. ಅತಿ ವೇಗದಿಂದ ಬೈಕ್​ ಓಡಿಸುತ್ತಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ‌ ಮಾಡಿದ್ದಾರೆ. ಈ ಕುರಿತು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಹೆಂಡಿರ ಗೌರಿಬಿದನೂರು ಗಂಡ! ವಿವಾಹಿತೆಗೂ ಮೋಸ ಮಾಡಿ ಮತ್ತೊಂದು ಮದ್ವೆ: ಪತಿಗಾಗಿ ಇಬ್ಬರ ಜಗಳ

ಕಾಂಗ್ರೆಸ್​ ಮುಖಂಡನ ಕೊಲೆ ಆರೋಪಿ ಮೇಲೆ ಫೈರಿಂಗ್​: ಲೇಡಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗ್ತಿದ್ದ ವೇಳೆ ಘಟನೆ

ಮಧ್ಯರಾತ್ರಿ ಮಾಡಿದ ತಪ್ಪನ್ನು ಬೆಳಗಾದ ಮೇಲೆ ತಿದ್ದಿಕೊಂಡ ಸರ್ಕಾರ: ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 3 =
Remember me
