ಬೆಂಗಳೂರು:ವಿಧಾನ ಪರಿಷತ್​ಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಖುದ್ದು ಕಾಂಗ್ರೆಸ್​ ವಲಯದಲ್ಲಿಯೇ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಒಬ್ಬರೇ ಒಬ್ಬರು ಮಹಿಳೆಗೆ ಸ್ಥಾನ ಕೊಟ್ಟಿಲ್ಲ ಎನ್ನುವುದು ಹಲವರ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೇ ಇಟ್ಟುಕೊಂಡು ಇದೀಗ ಬಿಜೆಪಿ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿ ಟ್ವೀಟ್​ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣಕ್ಕೆ ಮಹಿಳಾ ಸಬಲೀಕರಣ ಅಂದ್ರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ. ಲಕ್ಷ್ಮಿ ಜಪ ಮಾಡುವುದೇ ಮಹಿಳಾ ಸಬಲೀಕರಣವೇ? ಎಂದು ಟ್ವೀಟ್​ನಲ್ಲಿ ಪ್ರಶ್ನಿಸಲಾಗಿದೆ. ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಅವರನ್ನು ಉದ್ದೇಶಿಸಿ ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೀ ಬೂಟಾಟಿಕೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಉತ್ತರಪ್ರದೇಶ – ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ. ಆದರೆ, ಕರ್ನಾಟಕದಲ್ಲಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನು ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೀ ಭಾಷಣಕ್ಕೆ ಸೀಮಿತವೇ? ಎಂದು ಪ್ರಶ್ನಿಸಿರುವ ಬಿಜೆಪಿ, ಕಲ್ಯಾಣ ಕರ್ನಾಟಕ ಭಾಗವಾದ ಕೊಪ್ಪಳ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್ ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿ ಮಾತಿನ ಘೋಷಣೆಯಲ್ಲ ಎಂದಿದೆ.
ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹೊಂದಿರುವ ನಾಯಕಿಯೇ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಮಹಿಳಾ ಕಾರ್ಯಕರ್ತರ ಪಾಡೇನು? ಎಂದು ಟೀಕಿಸಿದೆ.
ಡಿಕೆಶಿ ಬಣಕ್ಕೆ ಮಹಿಳಾ ಸಬಲೀಕರಣ ಅಂದರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ.ಮಾನ್ಯ@DKShivakumarಅವರೇ, ಲಕ್ಷ್ಮೀ ಜಪ ಮಾಡುವುದೇ ಮಹಿಳಾ ಸಬಲೀಕರಣವೇ?#CONgressAgainstWomenEmpowerment— BJP Karnataka (@BJP4Karnataka)May 25, 2022
ಡಿಕೆಶಿ ಬಣಕ್ಕೆ ಮಹಿಳಾ ಸಬಲೀಕರಣ ಅಂದರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ.ಮಾನ್ಯ@DKShivakumarಅವರೇ, ಲಕ್ಷ್ಮೀ ಜಪ ಮಾಡುವುದೇ ಮಹಿಳಾ ಸಬಲೀಕರಣವೇ?#CONgressAgainstWomenEmpowerment
ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ,ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ 'ಲಕ್ಷ್ಮಿ'ಗೆ ಮಾತ್ರ ಗೌರವ.ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು?#CONgressAgainstWomenEmpowerment— BJP Karnataka (@BJP4Karnataka)May 25, 2022
ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ,ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ 'ಲಕ್ಷ್ಮಿ'ಗೆ ಮಾತ್ರ ಗೌರವ.ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು?#CONgressAgainstWomenEmpowerment
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
