ಬೆಂಗಳೂರು :ರಾಜ್ಯದಲ್ಲಿ ನಡೆದಂತ ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಹಾಗೂ ಎರಡು ಶಿಕ್ಷಕರ, ಎರಡು ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದೆ.
ಈ ಕುರಿತು ಟ್ವೀಟ್​ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಈ ಮೂಲಕ ರಾಜ್ಯದಲ್ಲಿ ಕ್ಲಾಸ್ ಮತ್ತು ಮಾಸ್ ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎಂದಿದ್ದಾರೆ.
ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೊಂದು ವಿಶಿಷ್ಟ ಫಲಿತಾಂಶ 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು, 2 ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆಗಳು, 2 ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಚುನಾವಣೆಗಳು. ಎಲ್ಲದರಲ್ಲಿಯೂ ಬಿಜೆಪಿ ಜಯ ಗಳಿಸಿದೆ ಅಂದರೆ Class & Mass ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.
ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೊಂದು ವಿಶಿಷ್ಟ ಫಲಿತಾಂಶ
2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು,2ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆಗಳು,2 ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಚುನಾವಣೆಗಳು.ಎಲ್ಲದರಲ್ಲಿಯೂ ಬಿಜೆಪಿ ಜಯ ಗಳಿಸಿದೆ
ಅಂದರೆ Class & Mass ಎರಡರಲ್ಲಿಯೂ ಬಿಜೆಪಿ ಜನಮನ್ನಣೆ ಗಳಿಸಿದೆ
— S.Suresh Kumar (@nimmasuresh)November 11, 2020

ಇದಕ್ಕೆ ಕಮೆಂಟಿಗರ ಪರ-ವಿರೋಧದ ಕಮೆಂಟ್​ಗಳು ಹರಿದುಬಂದಿವೆ. ಚಂದ್ರಕುಮಾರ್​ ಎನ್ನುವವರು, ಇದರಲ್ಲಿ ನಿಮ್ಮ ಪಕ್ಷದ್ದು ಅನ್ನೋದು ಏನಿದೆ? ಮೊದಲು ಯಾವ ಪಕ್ಷ ಇತ್ತೋ ಉಪ ಚುನಾವಣೆಯಲ್ಲಿಯೂ ಅದೇ ಪಕ್ಷ ಬರೋದು ಎಂದು ಟೀಕಿಸಿದ್ದಾರೆ. ಈ ಟೀಕೆಗೆ ಪ್ರತ್ಯುತ್ತರ ಕೊಟ್ಟಿರುವ ಬಸವರಾಜ ಎನ್ನುವವರು ಎರಡು ಸಲ‌ ಬಿ.ಜೆ.ಪಿ ಆಡಳಿತ ಪಕ್ಷ ಇಲ್ಲದೆ ಇದ್ದಾಗ್ಲೂ, ಲೋಕಸಭೆ ಚುನಾವಣೆಯಲ್ಲಿ ಭಾ.ಜ.ಪ ಅತೀ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಇದಕ್ಕೇನು ಅಂತೀರಾ ರಾಜ್ಯ ಬೇರೆ ರಾಷ್ಟ್ರದ ಚುನಾವಣೆ ಬೇರೆ ಅಂತೀರಾ ಎಂದು ತಿರುಗೇಟು ನೀಡಿದ್ದಾರೆ.
ಇದರಿಂದ ನಿಮ್ಮ ಪಕ್ಷದ ಸರಕಾರ ಜನರಿಗಾಗಿ ಉತ್ತಮ ಸೇವೆ ಮಾಡುವಲ್ಲಿ ಇನ್ನೂ ಹೆಚ್ಚು ಶ್ರಮಿಸಬೇಕು. ಉದಾ: ನಿಮ್ಮ ಇಲಾಖೆ ರಾಜ್ಯದ ಮೂಲೆ ಹಳ್ಳಿಯ ಮಕ್ಕಳಿಗೂ ಶಿಕ್ಷಣ ತಲುಪುವಂತೆ ಮಾಡುವ ಬಗ್ಗೆ ಸಮಗ್ರವಾದ ಪರಿಪೂರ್ಣವಾದ ಯೋಜನೆ ರೂಪಿಸಲು ಶಿಕ್ಷಕರ, ತಜ್ಞರ ಸಲಹೆ ಪಡೆಯಿರಿ. ಬಡ ಮಕ್ಕಳಿಗೆ ಸಹಾಯ ಮಾಡಲು ನಿಮಗೆ ಇದು ಸುವರ್ಣಾವಕಾಶ ಎಂದು ತೋಂಟದಾರ್ಯ ಸಂಪಿಗೆ ಎನ್ನುವವರು ಪ್ರತಿಕ್ರಿಯೆ ನೀಡಿದ್ದರೆ, ಈಗಲಾದರೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಕರ್ನಾಟಕದ ಯುವಕರಿಗೆ ಉದ್ಯೋಗದ ಹಾದಿ ಸುಗಮ ಗೊಳಿಸಿ.. ಯುವಕರು ಈ ಉದ್ದೇಶದಿಂದಲೇ ನಿಮ್ಮ ಪಾರ್ಟಿನ ಗೆಲ್ಲಿಸಿರೋದು ಎಂದು ಆರ್​ಕೆ ಎನ್ನುವವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.
ಕ್ಲಾಸ್ ,ಮಾಸ್ ಅನ್ನುವುದಕ್ಕೆ ಇದು ಫಿಲಂ ಅಲ್ಲ .ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ಲಾರು ಕ್ಲಾಸ್ . ನೀವು ಮತದಾರರಲ್ಲಿ ಇಂತಹ ಭಿನ್ನತೆ ತೋರುವುದು ಶೋಭೆಯಲ್ಲ.ಇಂತಹ ಫಿಲಂ ಡೈಲಾಗುಗಳು ಫಿಲಂಗೆ ಸೀಮಿತವಾಗಿರಲಿ ಎಂದು ಗೌತಮ್​ ಹೆಗ್ಡೆ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹಿಂದೊಮ್ಮೆ ಎರಡೇ ಸೀಟು ಬಂದಿತ್ತು- ನಂತರ ಸಿಎಂ, ಪಿಎಂ ಸ್ಥಾನ ಸಿಕ್ಕಿತು, ನಿರಾಶರಾಗಬೇಡಿ’

‘ಆರ್​ಆರ್​ನಗರದ್ದು ಆಘಾತ, ಶಿರಾ ರಿಸಲ್ಟಂತೂ ಅಚ್ಚರಿ- ಸೋಲಿನ ಹೊಣೆ ನಾನೇ ಹೊರುವೆ’

ಇವರೇ ಟಾಪ್​ ದಾನಶೂರರು: ಇವರು ಕೊಟ್ಟಿರುವ ದೇಣಿಗೆ ಕೇಳಿದರೆ ಶಾಕ್​ ಆಗ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
