ಕೋಲಾರ:ರಾಜಕಾರಣಿಗಳ ಹುಟ್ಟುಹಬ್ಬ, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಂದರ್ಭ ಸೇರಿದಂತೆ ವಿಶೇಷ ದಿನಗಳಲ್ಲಿ ಆಯೋಜನೆ ಮಾಡುವ ಊಟಕ್ಕಾಗಿ ಸಂಬಂಧಿತ ಪಕ್ಷದ ಕಾರ್ಯಕರ್ತರು ಕಿತ್ತಾಡಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯ. ಅದರಲ್ಲಿಯೂ ಬಾಡೂಟ ಆಯೋಜನೆ ಮಾಡಿದರಂತೂ ನೋಡುಗರು ಅಹಸ್ಯ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ನೂಕು ನುಗ್ಗಲು ಉಂಟಾಗುತ್ತದೆ.
ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಕೊರಳನ್ನು ಸೇರಬೇಕಾಗಿದ್ದ ಸೇಬು ಹಣ್ಣಿನ ಹಾರದಲ್ಲಿನ ಸೇಬುಹಣ್ಣುಗಳನ್ನು ಕಿತ್ತಾಡಿಕೊಂಡು ತಿಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.
ಬಿಜೆಪಿಯಿಂದ ಆಯೋಜನೆ ಮಾಡಿದ್ದ ಜನೋತ್ಸವ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ ಭಾನುವಾರ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಭಿನಂದನಾ ಸಮಾರಂಭವನ್ನು ಕೋಲಾರದಲ್ಲಿ ಆಯೋಜನೆ ಮಾಡಲಾಗಿತ್ತು. ಕೋಲಾರ ತಾಲೂಕಿನ ಕೆಂದಟ್ಟಿ ಬಳಿ ಸುಮಾರು 1,500 ಜನ ಕಾರ್ಯಕರ್ತರಿಗೆ ಸಚಿವ ಮುನಿರತ್ನ ಬಿರಿಯಾನಿ ಬಾಡೂಟ ಹಾಕಿಸಿದರು. ಬಾಡೂಟ ಆಯೋಜನೆ ಮಾಡಿದ ಕಾರಣಕ್ಕೆ ಧನ್ಯವಾದ ಸಲ್ಲಿಸಲು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸಚಿವ ಮುನಿರತ್ನ ಅವರಿಗೆ ಬೃಹತ್​ ಸೇಬಿನ ಹಣ್ಣಿನ ಹಾರ ಹಾಕಲು ಸಿದ್ಧತೆ ನಡೆಸಿಕೊಂಡಿದ್ದರು.
ಆದರೆ ಕ್ರೇನ್​ನಲ್ಲಿದ್ದ ಬೃಹತ್​ ಸೇಬಿನ ಹಾರ ಮುನಿರತ್ನ ಅವರ ಫೋಟೋ ಸಮೀಪ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಕಾರ್ಯಕರ್ತರು ಮುಗಿಬಿದ್ದು ಅದನ್ನು ಕಿತ್ತುಕೊಂಡರು. ಕೆಲವೇ ಕ್ಷಣದಲ್ಲಿ ಹಾರದಲ್ಲಿನ ಸೇಬು ಸಚಿವರ ಕೊರಳಿಗೆ ಮೊದಲೇ ಕಾರ್ಯಕರ್ತರ ಹೊಟ್ಟೆ ಸೇರಿತು!(ದಿಗ್ವಿಜಯ ನ್ಯೂಸ್​)
VIDEO: ಹಿಜಾಬ್​ ಸುಟ್ಟರು, ಕೂದಲು ಕತ್ತರಿಸಿಕೊಂಡರು… ಮಹಿಳೆಯರ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ತತ್ತರ
VIDEO: ಬೆಂಗಳೂರಿನ ‘ಶ್ರೀಮಂತ’​ ಕಳ್ಳ-ಕಳ್ಳಿ; ಐಷಾರಾಮಿ ಕಾರಲ್ಲಿ ಮಧ್ಯರಾತ್ರಿ ಬಂದು ಮಾಡೋದೇನು ನೋಡಿ!
Sign in to your account
Please enter an answer in digits:fifteen + five =
Remember me
