ಬೆಂಗಳೂರು:ವಿಧಾನಪರಿಷತ್​ ವಿರೋಧ ಪಕ್ಷದ ನಾಯಕನ ಸ್ಥಾನ ಕಾಂಗ್ರೆಸ್​ನ ಹಿರಿಯ ಮುಖಂಡ, ಹಿಂದುಳಿದ ವರ್ಗ‌ಮುಖಂಡ ಬಿ.ಕೆ.ಹರಿಪ್ರಸಾದ್​ ಅವರಿಗೆ ಒಲಿದಿದೆ.ಎಐಪಿಸಿ ಬುಧವಾರ ಈ ಘೋಷಣೆ ಮಾಡಿದ್ದು, ಇವರೊಂದಿಗೆ ಪ್ರಕಾಶ್​ ರಾಥೋಡ್​ ಅವರಿಗೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕೆ.ಗೋವಿಂದ ರಾಜ್​ ಅವರಿಗೆ ವಿಧಾನಪರಿಷತ್​ನಲ್ಲಿ ಪಕ್ಷದ ಉಪ ನಾಯಕನನ್ನಾಗಿ ನೇಮಕ ಮಾಡಿದೆ.ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರ ಪತನವಾದ ಬಳಿಕ ಎಸ್​.ಆರ್​.ಪಾಟೀಲ್​ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದಿತ್ತು. ಆದರೆ, ಜನವರಿ 5ರಂದು ಅವರ ವಿಧಾನಪರಿಷತ್​ ಸದಸ್ಯತ್ವದ ಅವಧಿ ಮುಕ್ತಾಯವಾಗಿತ್ತು. ಈ ಮುನ್ನ ನಡೆದಿದ್ದ ಚುನಾವಣೆಯಲ್ಲಿ ಮರುಸ್ಪರ್ಧೆಗೆ ಪಕ್ಷ ಅವಕಾಶ ಕೊಟ್ಟಿರಲಿಲ್ಲ. ಈ ಮೂಲಕ ಹೊಸ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಾಗಿತ್ತು.67ರ ಹರೆಯದ ಬಿ.ಕೆ.ಹರಿಪ್ರಸಾದ್​ ಬಿಕಾಂ ಪದವೀಧರರಾಗಿದ್ದಾರೆ. ಎನ್​ಎಸ್​ಯುಐ, ಸೇವಾದಳ, ಯುವ ಕಾಂಗ್ರೆಸ್​ ಮೂಲಕ ಪಕ್ಷದಲ್ಲಿ ತೊಡಗಿಕೊಂಡು ರಾಜ್ಯಸಭಾ ಸದಸ್ಯರೂ ಆಗಿದ್ದರು. ಹೈಕಮಾಂಡ್​ ಜತೆ ನಿಕಟ ಸಂಪರ್ಕಹೊಂದಿ ದೀರ್ಘಕಾಲ ದೆಹಲಿ ಮಟ್ಟದಲ್ಲಿ ಪ್ರಭಾವಿ ಎನಿಸಿಕೊಂಡಿದ್ದರು. ಬೆಂಗಳೂರು ದಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯಥಿರ್ಯಾಗಿ ಸೋಲುಂಡಿದ್ದರು. ಈ ನಡುವೆ ಪಕ್ಷ ಇವರನ್ನು ವಿಧಾನಪರಿಷತ್​ ಸದಸ್ಯರನ್ನಾಗಿ ಆಯ್ಕೆ ಮಾಡಿ ನೆಲೆ ಕಲ್ಪಿಸಿತು. ಇದೀಗ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದುಬಂದಿದೆ.
ರಾಜಕೀಯ ಲೆಕ್ಕಾಚಾರಹೇಗಿದ್ದರೂ ಮುಸ್ಲಿಂ ಸಮುದಾಯ ಕಾಂಗ್ರೆಸ್​ ಬಿಟ್ಟು ಹೋಗುವುದಿಲ್ಲ ಎಂದು ಕಾಂಗ್ರೆಸ್​ಗೆ ಖಾತ್ರಿಯಾಗಿದೆ, ಉಪ ಚುನಾವಣೆಯ ಕೆಲವು ತಾಜಾ ಉದಾಹರಣೆಯೂ ಎದುರಿಗಿದೆ. ಹೀಗಾಗಿ ಒಬಿಸಿ ವರ್ಗವನ್ನು ಓಲೈಸಿಕೊಳ್ಳಲು ಬಿ.ಕೆ.ಹರಿಪ್ರಸಾದ್​ಗೆ ಮಣೆಹಾಕಿದೆ. ಎರಡು ದಿನದ ಹಿಂದಷ್ಟೇ ಲಿಂಗಾಯತ ಸಮುದಾಯದ ಗಮನ ಸೆಳೆಯಲು ಶಾಸಕ ಎಂ.ಬಿ.ಪಾಟೀಲ್​ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿತ್ತು.ಮುಂಬರುವ ಚುನಾವಣೆ ದೃಷ್ಟಿಯಿಂದ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲು ಪಕ್ಷ ಪ್ರಯತ್ನ ಮಾಡುತ್ತಿದ್ದು, ಬಿ.ಕೆ.ಹರಿಪ್ರಸಾದ್​ ಆಯ್ಕೆ ಹಿಂದೆಯೂ ಇದೆ ಲೆಕ್ಕಾಚಾರ ಅಡಗಿದಂತೆ ಕಾಣಿಸುತ್ತಿದೆ.
ಹರಿಪ್ರಸಾದ್​ ಹಿರಿಮೆ:
ಇಬ್ರಾಹಿಂಗೆ ನಿರಾಸೆ:ವಿಧಾನ ಪರಿಷತ್​ ಪ್ರತಿಪಕ್ಷ ಸ್ಥಾನದ ಮೇಲೆ ಕೆ.ಸಿ.ಕೊಂಡಯ್ಯ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಾದರೂ, ಪರಿಷತ್​ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಹರಿಪ್ರಸಾದ್​ ದಾರಿ ಸಲೀಸಾಗಿತ್ತು. ಸಿ.ಎಂ.ಇಬ್ರಾಹಿಂ ಪ್ರಬಲ ಪೈಪೋಟಿ ನೀಡಿದ್ದರು. ಈ ಸ್ಥಾನ ಸಿಕ್ಕರಷ್ಟೇ ಕಾಂಗ್ರೆಸ್​ನಲ್ಲಿ ಮುಂದುವರಿಯುವುದಾಗಿ ಹೇಳಿಕೊಂಡು ಜೆಡಿಎಸ್​ ಸಂಪರ್ಕವನ್ನೂ ಸಾಧಿಸಿದ್ದರು.ಕಾಂಗ್ರೆಸ್​ನಲ್ಲಿ ಸಿ.ಎಂ.ಇಬ್ರಾಹಿಂಗೆ ಪ್ರತಿಪಕ್ಷ ನಾಯಕ ಸ್ಥಾನ ಕೊಡುವ ವಿಷಯದಲ್ಲಿ ಒಮ್ಮತ ಕಾಣಿಸಲಿಲ್ಲ. ಒಂದು ಬಣ ದೆಹಲಿಗೆ ತೆರಳಿ ಲಾಬಿ ಮಾಡಿತ್ತು. ಆದರೂ ಹೈಕಮಾಂಡ್​ ಹರಿಪ್ರಸಾದ್​ಗೆ ಅವಕಾಶ ಮಾಡಿಕೊಟ್ಟಿದೆ. ಸಹಜವಾಗಿ ಸಿ.ಎಂ.ಇಬ್ರಾಹಿಂಗೆ ನಿರಾಸೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 10 =
Remember me
