ಬೆಂಗಳೂರು:ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವು ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಹಾಕಲಾಗಿದೆ ಎಂದು ಬೆದರಿಕೆ ಇ-ಮೇಲ್‌ ಬಂದಿದ್ದವು. ನಿಮ್ಮ ಶಾಲೆಯಲ್ಲಿ ಅತ್ಯಂತ ಶಕ್ತಿಶಾಲಿಯುತ ಬಾಂಬ್ ಅಳವಡಿಸಲಾಗಿದೆ. ಇದು ಜೋಕ್ ಅಲ್ಲ. ಈ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ, ನೂರಾರು ಜೀವಗಳನ್ನು ಉಳಿಸಿ. ದಯವಿಟ್ಟು ತಡ ಮಾಡಬೇಡಿ. ಸದ್ಯ ಎಲ್ಲರ ಜೀವ ನಿಮ್ಮ ಕೈಯಲ್ಲಿದೆ ಎಂದು ಮೇಲ್ ನಲ್ಲಿ ಬರೆಯಲಾಗಿತ್ತು. ಇದು ಶಾಲೆಗಳ ಆಡಳಿತ ಮಂಡಳಿ ಮಾತ್ರವಲ್ಲದೇ ಪಾಲಕರು, ಶಿಕ್ಷಕರನ್ನು ಅಕ್ಷರಶಃ ಬೆದರುವಂತೆ ಮಾಡಿತ್ತು.
ಈ ಇ-ಮೇಲ್‌ ಕಳುಹಿಸಿದವರ ಬೆನ್ನತ್ತಿ ಹೋಗಿದ್ದ ಪೊಲೀಸರಿಗೆ ಇದೀಗ ಇದರ ಹಿಂದಿರುವ ಮಾಸ್ಟರ್‌ಮೈಂಡ್‌ ಯಾರು ಎಂಬ ಸುಳಿವು ಸಿಕ್ಕಿದೆ. ಅಚ್ಚರಿಯ ವಿಷಯ ಎಂದರೆ ಈತ ಓರ್ವ ಬಾಲಕ. 17 ವರ್ಷದ ಬಾಲಕನೇ ಇಂಥದ್ದೊಂದು ಇ-ಮೇಲ್‌ ಕಳುಹಿಸಿದ್ದಾನೆ ಎಂಬ ಐಎಎನ್​ಎಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಮಿಳುನಾಡು ಮೂಲದ ಸಲೀಂ‌ ಎಂಬ 17ರ ಬಾಲಕ ಇದರ ಹಿಂದೆ ಇದ್ದಾನೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈತ ಮಾಡಿರುವ ಕಾರ್ಯಗಳನ್ನು ಕೇಳಿದರೆ ಎಂಥವರೂ ಅಬ್ಬಬ್ಬಾ ಎನ್ನುವುದು ಗ್ಯಾರೆಂಟಿ. ಏಕೆಂದರೆ ಎಷ್ಟೋ ಕ್ರಿಮಿನಲ್‌ ಪ್ರಕರಣಗಳಲ್ಲಿ ಅಪರಾಧಿಗಳು/ ಆರೋಪಿಗಳು ಮಾಡಿರುವ ಕಾರ್ಯ ನೋಡಿದರೆ ಇಷ್ಟು ಒಳ್ಳೆಯ ಟ್ಯಾಲೆಂಟ್‌ ಒಳ್ಳೆಯದ್ದಕ್ಕೆ ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು ಎಂದು ಅನಿಸುವುದುಂಟು. ಅದು ಈ ಬಾಲಕನ ವಿಷಯಕ್ಕೂ ಅನ್ವಯ ಆಗುತ್ತದೆ.
ಏಕೆಂದರೆ, ಸಲೀಂ ಸಾಫ್ಟ್‌ವೇರ್‌ ಕಂಪನಿ ಮಾಡುವ ಕನಸು ಹೊಂದಿದ್ದ ಎನ್ನಲಾಗಿದೆ. ಒಂದೇ ಸಲಕ್ಕೆ ಬಹಳಷ್ಟು ಮೇಲ್‌ಗಳನ್ನು ಕಳುಹಿಸುವ ಬೋಟ್ ಸಾಫ್ಟ್‌ವೇರ್ ಪ್ರೋಗ್ರಾಮ್ ಈತ ಡೆವೆಲಪ್ ಮಾಡಿದ್ದ. ಇದನ್ನು ಟೆಲಿಗ್ರಾಂ ಆ್ಯಪ್ ಮೂಲಕ ವಿದೇಶಿಯರಿಗೆ ಕಳುಹಿಸಿರುವುದು ತಿಳಿದುಬಂದಿದೆ. ತಾನು ಸಿದ್ಧಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಂನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದ. ಇದನ್ನು ಬಳಸಿ ದುಷ್ಕರ್ಮಿಗಳು ಬೆಂಗಳೂರು ಮತ್ತು ಭೋಪಾಲ್ ಶಾಲೆಗಳಿಗೆ ಬೆದರಿಕೆಯ ಮೇಲ್ ಕಳುಹಿಸಿದ್ದರು ಎನ್ನಲಾಗುತ್ತಿದೆ.
ಇ-ಮೇಲ್‌ ಐಪಿ ವಿಳಾಸದ ಮೂಲಕ ಪೊಲೀಸರು ಈತನನ್ನು ಪತ್ತೆ ಹಚ್ಚಿದ್ದು, ತನಿಖೆ ಮುಂದುವರೆದಿದೆ. ಈತ ಯಾಕೆ ಹೀಗೆ ಮೇಲ್‌ ಕಳುಹಿಸಿದ್ದ ಎಂಬ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ.
ಡೆಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಬೆಂಗಳೂರು, ಸೋಫಿಯಾ ಹೈಸ್ಕೂಲ್, ಕ್ಯಾಂಡರ್ ಇಂಟರ್ ನ್ಯಾಷನಲ್ ಸ್ಕೂಲ್, ಟ್ರೀಯೋ ಇಂಟರ್‌ ನ್ಯಾಷನಲ್ ಸ್ಕೂಲ್, ರಾಡ್‌ಕ್ಲಿಫ್‌ ಇಂಟರ್ ನ್ಯಾಷನಲ್ ಸ್ಕೂಲ್, ಇಂಡಿಯನ್ ಪಬ್ಲಿಕ್ ಸ್ಕೂಲ್, ಗೋಪಾಲನ್ ಇಂಟರ್‌ ನ್ಯಾಷನಲ್ ಸ್ಕೂಲ್, ಪೂರ್ವ, ನ್ಯೂ ಅಕಾಡೆಮಿ ಸ್ಕೂಲ್, ವಿನ್ಸೆಂಟ್ ಪಲೋಟ್ಟಿ ಸ್ಕೂಲ್,ಸ್ಟೋನ್ ಹಿಲ್ ಇಂಟರ್‌ ನ್ಯಾಷನಲ್ ಸ್ಕೂಲ್, ವ್ಯಾಸ ಇಂಟರ್‌ ನ್ಯಾಷನಲ್ ಸ್ಕೂಲ್, ಕುನ್ಸ್ಕಾಪ್ಸ್ಕೊಲನ್ ಇಂಟರ್ ನ್ಯಾಷನಲ್ ಸ್ಕೂಲ್, ಎಬೆನೆಜರ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಇನ್ವೆಂಚರ್ ಅಕಾಡೆಮಿ ಇವುಗಳಿಗೆ ಬೆದರಿಕೆ ಮೇಲ್‌ ಬಂದಿದ್ದವು.
ಅದರಲ್ಲಿ A Very power full bomb has been planted in your school, attention is not a joke. this is not a joke, a very powerfull bomb has been planted in your school, immediatly call the police and sappers hundreds of lives may suffer, including yours , do not deleay. now every thing is only in your hands ಎಂದು ಬರೆಯಲಾಗಿತ್ತು
ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 8 =
Remember me
