ಬೆಂಗಳೂರು:ಮಕ್ಕಳಿಗೆ ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ಎಲ್ಲವನ್ನೂ ಕೊಡ್ತೀವಿ. ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡ್ತೀವಿ. ಎಲ್ಲ ಶಾಲೆಗಳ ಪರವಾಗಿ ಮಕ್ಕಳನ್ನು ಸ್ವಾಗತಿಸುತ್ತೇನೆ.
ಹೀಗೆಂದವರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌. ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ಪ್ರವಾಸಕ್ಕೆ ಸೋಮವಾರ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಪುನಾರಂಭವಾಗಿವೆ. ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಶಾಲೆಗಳಲ್ಲಿ ಕಲಿಕೆ ಉತ್ತಮ ಪರಿಣಾಮಬೀರುತ್ತದೆ. ಕರೊನಾ ಕಾರಣಕ್ಕೆ ಹಿಂದಿನ ಎರಡು ಶೈಕ್ಷಣಿಕ ವರ್ಷಗಳು ಅನುಭವಿಸಿದ ಅನಿಶ್ಚಿತತೆ ದೂರವಾಗಿರುವುದು ಸಮಾಧಾನಕರ ಎಂದು ಬೊಮ್ಮಾಯಿ‌ ಸಂತಸ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಮೂಲ ಸವಲತ್ತು ಅಭಿವೃದ್ಧಿ, ಹೊಸ ಕೊಠಡಿ, ಕಟ್ಟಡಗಳ ನಿರ್ಮಾಣ, ದುರಸ್ತಿಯಿಂದ ಹಿಡಿದು ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ಎಲ್ಲವನ್ನೂ ಪೂರೈಸುವುದಕ್ಕೆ ಸರ್ಕಾರ ಬದ್ಧವಾಗಿದೆ.
ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಮಕ್ಕಳ ಕಲಿಕೆ ಸುಸೂತ್ರವಾಗಿ ಸಾಗುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.
ಸಮವಸ್ತ್ರವಿಲ್ಲ, ಪಠ್ಯವಿಲ್ಲ, ಕಟ್ಟಡ ದುರಸ್ತಿ ಇಲ್ಲ: ಇಲ್ಲಗಳ ನಡುವೆ ಇಂದು ಶಾಲೆಗಳ ಪ್ರಾರಂಭ; ಸಂಭ್ರಮಕ್ಕೆ ಮೂಲಸೌಕರ್ಯಗಳೇ ಅಡ್ಡಿ

ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

ಅಮ್ಮನ ದಿನ ಸಾಕೆ? ಪತ್ನಿಯ ದಿನವೂ ಇರಲಿ ಎಂದ ‘ನ್ಯಾಯ‘ ಸಚಿವರು ಕೊಟ್ಟದ್ದು ಈ ಕಾರಣ…

ಲವರ್‌ ಜತೆಗೂಡಿ ತಮ್ಮನನ್ನೇ ಕೊಲೆ ಮಾಡಿ ಶವದ ಮುಂದೆ ಗೋಳೋ ಎಂದು ಅತ್ತ ಹುಬ್ಬಳ್ಳಿ ಹೆಣ್ಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
