ಬಳ್ಳಾರಿ:ಮನೆ‌ ನಿರ್ಮಾಣಕ್ಕೆ ಲೈಸೆನ್ಸ್​ ನೀಡಲು ಲಂಚ ಕೇಳಿರುವ ಬಳ್ಳಾರಿ ತಾಲೂಕಿನ ಶ್ರೀಧರ್‌ ಗಡ್ಡೆ ಗ್ರಾ‌.ಪಂ. ಪಿಡಿಒ, ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
80 ಸಾವಿರ ಲಂಚ ಪಡೆಯುವಾಗ ಪಿಡಿಒ ಸಿದ್ದಲಿಂಗಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯಲಾಗಿದೆ. ಪಿಡಿಒ ಜೊತೆ ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ಬಳ್ಳಾರಿಯ‌ ಗುಡಾರ್ ನಗರದ ಮಾಜಿ‌ ತಾ.ಪಂ ಸದಸ್ಯೆ ಮಹಾಲಕ್ಷ್ಮಿ ಪತಿ ಜಂಬಣ್ಣ ಕೂಡ ಬಲೆಗೆ ಬಿದ್ದಿದ್ದಾರೆ.
ನಾಗಾರ್ಜುನ್ ಎನ್ನುವವರ ಮನೆ‌ ನಿರ್ಮಾಣಕ್ಕೆ ಪರವಾನಗಿ ನೀಡಲು ಸಿದ್ದಲಿಂಗಪ್ಪ 80 ಸಾವಿರ ಲಂಚ ಕೇಳಿದ್ದರು. ಜಂಬಣ್ಣ ಮೂಲಕ ಡೀಲ್ ಮಾಡಲಾಗಿತ್ತು. ಈ ಬಗ್ಗೆ ನಾಗಾರ್ಜುನ್ ಅವರು ಎಸಿಬಿಗೆ ದೂರು ದಾಖಲು ಮಾಡಿದ್ದರು.
ಮೊದಲೇ ಯೋಜನೆ ರೂಪಿಸಿರುವಂತೆ ಲಂಚ ಪಡೆಯುವ ವೇಳೆ ಎಸಿಬಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸಿದೆ. ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.(ದಿಗ್ವಿಜಯ ನ್ಯೂಸ್​)
ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೇ ‘ಅಪ್ಪನ ದಿನ’ದ ಶುಭಾಶಯ ಪತ್ರ! ಭಾವುಕರಾದ ಜಡ್ಜ್​- ಜಾಮೀನು ಮಂಜೂರು

‘ಮಹಾ’ ಸರ್ಕಾರವನ್ನೇ ಅಲ್ಲಾಡಿಸಿರೋ ಶಿಂಧೆಗೆ ಬಿಗ್​ ಶಾಕ್​: ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
