ಬೆಂಗಳೂರು:ಜನರು, ಪಕ್ಷದ ಕಾರ್ಯಕರ್ತರ ಅಭಿಲಾಷೆಯಂತೆ ವಿಧಾನ ಮಂಡಲದ ಅಧಿವೇಶನದ ಬಳಿಕ ರಾಜ್ಯ ಪ್ರವಾಸ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಮ್ಮ ಜನ್ಮದಿನದ ನಿಮಿತ್ತ ಕಾವೇರಿ ನಿವಾಸದಲ್ಲಿ ಅಭಿಮಾನಿಗಳು ಭಾನುವಾರ ಆಯೋಜಿಸಿದ್ದ ಪಕ್ಷದ ರೈತ ಕಾರ್ಯಕರ್ತರ ಕುಟುಂಬಗಳಿಗೆ ಟ್ರ್ಯಾಕ್ಟರ್ ಉಚಿತವಾಗಿ ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಕ್ಷದ ಸಂಘಟನೆ ಬಲಪಡಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರುವುದು ತಮ್ಮ ಸಂಕಲ್ಪವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕೆಲಸಗಳು, ಅಭಿವೃದ್ಧಿ ಯೋಜನೆಗಳನ್ನು ಗಮನಿಸಿರುವ ಜನರು ಬಿಜೆಪಿಗೆ ಮತ್ತೆ ಆಶೀರ್ವದಿಸಿ ಬಹುಮತ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ನವರ ಯಾವುದೇ ಬೂಟಾಟಿಕೆ ನಡೆಯುವುದಿಲ್ಲ ಎಂದರು.
ಅಧಿಕಾರದಲ್ಲಿ ಇಲ್ಲದಿದ್ದರೂ ಮಠಾಧೀಶರು, ಬೆಂಬಲಿಗರು ಅಭಿಮಾನಿಗಳು, ಜನರು ಆಶೀರ್ವಾದ ಮಾಡಿ ಪ್ರೋತ್ಸಾಹಿಸಿದ್ದಾರೆ ಎಂದ ಬಿಎಸ್ ವೈ, ಉಕ್ರೇನ್ ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿಯನ್ನು ಕೇಂದ್ರ, ರಾಜ್ಯ ಸರ್ಕಾರ ಹೊತ್ತುಕೊಂಡಿದ್ದು ಅತಂತ್ರರಾಗಿರುವವರು‌ ಚಿಂತಿಸುವುದು‌ ಬೇಡವೆಂದು ಅಭಯ ನೀಡಿದರು.
ಸಂಕಲ್ಪ ದಿನಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾತನಾಡಿ 2023ರ ವಿಧಾನಸಭೆ ಚುನಾವಣೆಯನ್ನು ಬಿಎಸ್ ವೈ ಮಾರ್ಗದರ್ಶನದಲ್ಲಿ ಎದುರಿಸುವ ಸಂಕಲ್ಪ ದಿನವಾಗಿದೆ. ಏಕಾಂಗಿ ಹೋರಾಟ, ಕಷ್ಟಪಟ್ಟು ಪಕ್ಷವನ್ನು ಬೆಳೆಸಿ, ಇಡೀ ರಾಜ್ಯ ವ್ಯಾಪಿಸುವಂತೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಹಾರ ಬದಲಾಯಿಸುವಾಗ ವಧುವಿಗೆ ತಿಳಿದೇ ಬಿಡ್ತು ವರನ ಆ ಗುಟ್ಟು! ಮೂರ್ಛೆ ಹೋದಳು, ಮದ್ವೆ ಕ್ಯಾನ್ಸಲ್‌!

ಪಕ್ಕಾ ಲೆಕ್ಕ ಕೊಟ್ಟು ಪೆಟ್ರೋಲ್‌ ಬಂಕ್‌ ಮಾಲೀಕನಿಗೆ 44 ಲಕ್ಷ ರೂ. ಟೋಪಿ ಹಾಕಿದ ಖದೀಮ- ಇದ್ಹೇಗೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
