ಹುಬ್ಬಳ್ಳಿ:ಖಾಸಗಿ ಬಸ್ ಹಾಗೂ ಕ್ರೂಜರ್​ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ.
ಮೃತರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಿ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.
ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರು. ಆಸ್ಪತ್ರೆಯಲ್ಲಿ ಕ್ರೂಜರ್ ಚಾಲಕ ಮಾರುತಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿಯೇ ಮೃತಪಟ್ಟವರನ್ನು ಶಿವನಗೌಡ ಮತ್ತು ಅಮೃತ ಎಂದು ಗುರುತಿಸಲಾಗಿದೆ. ಕ್ರೂಜರ್ ನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು.
ಇವರು ಹುಬ್ಬಳ್ಳಿಗೆ ಮೃತ ದೇಹವನ್ನು ತರಲು ಹೊರಟಿದ್ದರು. ಕಲಘಟಗಿಯ ರಾಯನಾಳ ಬಳಿ ಸೀ ಬರ್ಡ್ ಬಸ್ ಡಿಕ್ಕಿಯಾಗಿತ್ತು.(ದಿಗ್ವಿಜಯ ನ್ಯೂಸ್​)
ಬೆಳಗಾವಿಯಲ್ಲಿ ಚಿರತೆಯ ಕಣ್ಣು-ಮುಚ್ಚಾಲೆ! ಅರಣ್ಯ ಇಲಾಖೆಯ ಕೈಗೆ ಸಿಗದೇ ಪುನಃ ಪ್ರತ್ಯಕ್ಷ : ಶಾಲೆಗಳಿಗೆ ಮತ್ತೆ ರಜೆ

ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಆಘಾತ: ಪಿಎಸ್​ಐ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಬಯಲು!

ಹನಿಟ್ರ್ಯಾಪ್ ಸುಳಿಯಲ್ಲಿ ಮಂಡ್ಯದ ಬಿಜೆಪಿ ಮುಖಂಡ? ಡ್ರಾಪ್​ ನಿಡೋ ನೆಪದಲ್ಲಿ ಲಾಡ್ಜ್​ಗೆ ಕರೆದೊಯ್ದು ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
