ಬೆಂಗಳೂರು:ಸಾರಿಗೆ ಸಿಬ್ಬಂದಿ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೇ 4ರ ಬಳಿಕ ಮಾತುಕತೆಗೆ ಸಿದ್ಧವಿದೆ.‌ ಹೀಗಾಗಿ ಸಾರಿಗೆ ನೌಕರರು ಯಾವುದೇ ರಾಜಕೀಯ ಆಟದ ದಾಳವಾಗಬಾರದು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋರಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೇ ವಸ್ತುಸ್ಥಿತಿ ವಿವರಿಸಿ, ಚುನಾವಣೆ ನೀತಿ ಸಂಹಿತೆ ತೆರವಾದ ಬಳಿಕ ವೇತನ ಪರಿಷ್ಕರಣೆಗೆ ಸಿದ್ಧವೆಂದಿದ್ದಾರೆ. ಬೇಡಿಕೆ ಕುರಿತು ಚರ್ಚೆಗೂ ಸಮ್ಮತಿಸಿದ್ದು, ಅವರ ಮಾತಿನ ಮೇಲೆ ವಿಶ್ವಾಸವಿಟ್ಟು, ಮುಷ್ಜರದಿಂದ ಹಿಂದೆ ಸರಿದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿ.ಟಿ.ರವಿ ಸಲಹೆ ನೀಡಿದರು.
ರಾಜಿಸಂಧಾನ ಗೊತ್ತಿಲ್ಲಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸದ ವೇಳೆ ಸಿಎಂ ಬಿಎಸ್ ವೈ ಹಾಗೂ ಸಚಿವ ಈಶ್ವರಪ್ಪ ನಡುವೆ ರಾಜಿಸಂಧಾನದ ಮಾತುಕತೆ ನಡೆಸಲಿದ್ದಾರೆಯೆ ಎನ್ನುವುದು ಗೊತ್ತಿಲ್ಲ. ಈಶ್ವರಪ್ಪ ವರಿಷ್ಠರಿಗೆ ಮತ್ತೊಂದು ಪತ್ರ ಬರೆಯಲಿದ್ದಾರೆ ಎಂಬ ಊಹಾಪೋಹದ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಿ.ಟಿ.ರವಿ ನಿರಾಕರಿಸಿದರು.
3 ಕ್ಷೇತ್ರಗಳ ಉಪ ಚುನಾವಣೆಗೆ ಎಲ್ಲ ಸಚಿವರು, ಮುಖಂಡರಿಗೆ ನಿರ್ದಿಷ್ಟವಾದ ಜವಾಬ್ದಾರಿ ನೀಡಿದ್ದು, ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಪ್ರಚಾರದಿಂದ ದೂರವಿರುವ ಬಗ್ಗೆ ವೈಯಕ್ತಿಕ ಮಾಹಿತಿಯಿಲ್ಲ. ತಮಿಳಿನಾಡಿನಿಂದ ನಿನ್ನೆಯಷ್ಟೇ ವಾಪಸ್ಸಾಗಿರುವೆ ಎಂದು ಸಿ.ಟಿ.ರವಿ ಉತ್ತರಿಸಿದರು.
ಒಂದೇ ದಿನ 33 ಸಾವಿರ ಹಾಸಿಗೆ, 10 ಸಾವಿರಕ್ಕೂ ಅಧಿಕ ಆಕ್ಸಿನೇಟೇಡ್ ಬೆಡ್ ರೆಡಿ ಮಾಡಿದ ಸರ್ಕಾರ

ಚಿತ್ರಮಂದಿರ ಭರ್ತಿಯಾಗತ್ತಾ ಅಥವಾ ಶಾಕ್‌ ಕೊಡತ್ತಾ? ಈ ವಿಚಾರದಲ್ಲಿ ಸರ್ಕಾರದ ನಿಲುವೇನು?

ರಾಜ್ಯದಲ್ಲಿ ಶುರುವಾಗಲಿದೆ ಮಳೆ- ಎಲ್ಲಿ? ಯಾವಾಗ? ಹವಾಮಾನ ಇಲಾಖೆ ಏನು ಹೇಳಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 17 =
Remember me
