ಹೊಸಕೋಟೆ:ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿಯ ಆಸುಪಾಸಿನ ಮನೆಗಳಲ್ಲಿನ ಕೇಬಲ್‌ ವೈರ್‌ಗಳನ್ನು ಕದ್ದು ಅವುಗಳನ್ನು ನಾರಾಯಣ ಕೆರೆಯಲ್ಲಿ ಸುಟ್ಟು ಹಾಕುತ್ತಿದ್ದ ಖದೀಮರು ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕದ್ದ ಬೋರ್ವೆಲ್ ಕೇಬಲ್ ಗಳನ್ನು ಸುಟ್ಟು ತಾಮ್ರ ಸಂಗ್ರಹಿಸುತ್ತಿದ್ದ ಖದೀಮರ ಗ್ಯಾಂಗ್ ಇದಾಗಿದ್ದು, ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದೆ. ಗುರುವಾರ ಸಂಜೆ ಆಟೋವೊಂದರಲ್ಲಿ ಬಂದ ನಾಲ್ವರು ಬಂಡಲುಗಟ್ಟಲೆ ಕೇಬಲ್ ವೈರ್‌ಗಳನ್ನು ಸುಡುತ್ತಿದ್ದರು. ನಾರಾಯಣ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಖದೀಮರ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳೀಯರಿಂದ ತರಾಟೆ:ಸ್ಥಳೀಯರು ವಿಚಾರಿಸಿದಾಗ ದೊಡ್ಡಬಳ್ಳಾಪುರ ಸಮೀಪದ ಮಾರಸಂದ್ರ ನಿವಾಸಿಗಳು ಎಂದು ತಿಳಿಸಿದ್ದಾರೆ. ಹಳೇಯ ವೈರ್ ಗಳನ್ನು ಸುಟ್ಟು ಕಾಫರ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಸ್ಥಳದಲ್ಲಿ ಬಂಡಲುಗಟ್ಟಲೆ ಬೋರ್‌ವೆಲ್‌ಗಳಿಗೆ ಬಳಸುವ ಕೇಬಲ್ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಜಮೀನುಗಳಲ್ಲಿ ಬೋರ್‌ ವೈರ್‌ಗಳನ್ನು ಕಳವು ಮಾಡಿ ತಾಮ್ರ ಪಡೆಯಲು ಈ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು ಮತ್ತೊಮ್ಮೆ ಈ ಭಾಗದಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.ಹೊಸಕೋಟೆ ತಾಲೂಕಿನ ಸುತ್ತ ಮುತ್ತಲ ಕೆರೆ ಅಂಗಳದಲ್ಲಿ ಈ ರೀತಿ ಕೃತ್ಯ ಸಾಮಾನ್ಯವಾಗಿದೆ. ಕೇಬಲ್ ಕಳವು ಪ್ರಕರಣಗಳು ಕಂಡುಬರುತ್ತಿವೆ. ವೈರ್ ಸುಡುವುದರಿಂದ ದಟ್ಟ ಹೊಗೆ ಹೊರಬರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾಗಿರುವ ಶಿವಶಂಕರ್‌ ಹೇಳಿದ್ದಾರೆ.
ಕಳ್ಳನನ್ನು ಹಿಡಿದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ…
https://www.facebook.com/VVani4U/videos/497186014661451/
ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?

ಸೋಂಕಿತರ ಶವ ಪಡೆಯಲು ಕುಟುಂಬಸ್ಥರೇ ಹೆದರುವಾಗ, ಉಚಿತ ಸೇವೆಯಲ್ಲಿ ತೊಡಗಿದ್ದಾರೆ ಈ ಮಹಿಳೆ…

ನಮ್ಮಮ್ಮ ಕ್ಯಾಟ್‌ವಾಕ್‌ ಮಾಡುತ್ತಿದ್ದಾರೆ- ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟಿ ರಾಖಿ ಸಾವಂತ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
