ಬೆಂಗಳೂರು:ಹಿಂದು ಧರ್ಮ ಹಾಗೂ ರಾಮನ ವಿರುದ್ಧ ಅವಹೇಳನ ಮಾಡುವಂಥ ಹೇಳಿಕೆ ನೀಡಿದ್ದರಿಂದ ವಕೀಲೆ ಮೀರಾ ರಾಘವೇಂದ್ರ ಅವರಿಂದ ಮುಖಕ್ಕೆ ಮಸಿ ಬಳಿಸಿಕೊಂಡಿರುವ ಸಾಹಿತಿ ಭಗವಾನ್​ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಗೌರಿ ಲಂಕೇಶ್​ ಹಾಗೂ ಸಾಹಿತಿ ಕಲ್ಬುರ್ಗಿಯಂತೆಯೇ ನನ್ನ ಹತ್ಯೆಯನ್ನು ಮಾಡುವುದಾಗಿ ಮೀರಾ ಹೇಳಿದ್ದಾರೆ ಎಂದು ದೂರಿನಲ್ಲಿ ಭಗವಾನ್​ ಉಲ್ಲೇಖಿಸಿದ್ದಾರೆ.
ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂಬ ಹೇಳಿಕೆ ನೀಡಿದ್ದರು ಭಗವಾನ್​. ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದು‌ ಪದವನ್ನೇ ತೆಗೆದು ಹಾಕಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದು ಭಗವಾನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೀರಾ ಅವರು ದೂರು ದಾಖಲು ಮಾಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕಳೆದ ವಾರ ಭಗವಾನ್​ ಹಾಗೂ ಮೀರಾ ಹಾಜರಾಗಿದ್ದರು. ಭಗವಾನ್​ ಅವರ ಹೇಳಿಕೆಯನ್ನು ಕೇಳಿ ಆಕ್ರೋಶಗೊಂಡಿದ್ದ ಮೀರಾ ಅವರ ಮುಖಕ್ಕೆ ಕೋರ್ಟ್​ ಆವರಣದಲ್ಲಿಯೇ ಮಸಿ ಬಳಿದಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮೀರಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅದರಲ್ಲಿ ಇರುವ ಅಂಶ ಹೀಗಿದೆ:ಮೀರಾ ರಾಘವೇಂದ್ರ ಏಕಾಏಕಿ ತಮ್ಮನ್ನು ಅಡ್ಡಗಟ್ಟಿ ತಮ್ಮ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಮುಖಕ್ಕೆ ಮಸಿಬಳಿದು ಅವಾಚ್ಯ ಶಬ್ದಗಳಿಂದ ನಿಂತಿಸಿದ್ದಾರೆ. ನಿನ್ನನ್ನು ಇಷ್ಟಕ್ಕೇ ಸುಮ್ಮನೇ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ ಎಂದು ಕೂಗಾಡಿದ್ದಾರೆ. ಸುಮ್ಮನೇ ಮಸಿ ಬಳಿದು ಬಿಡುವುದಿಲ್ಲ. ನಿನ್ನ ಸ್ನೇಹಿತರಾದ ಗೌರಿ ಹಾಗೂ ಕಲ್ಬುರ್ಗಿ ಅವರ ಜತೆಗೆ ನಿನ್ನನ್ನೂ ಕಳಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಮೀರಾ ರಾಘವೇಂದ್ರ ಹಾಗೂ ಮಸಿ ಬಳಿಯುತ್ತಿದ್ದ ವಿಡಿಯೋ ಮಾಡುತ್ತಿದ್ದ ಅವರ ಪತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಎಫ್​ಐಆರ್​ನಲ್ಲಿ ದಾಖಲು ಮಾಡಲಾಗಿದೆ.
ಸದ್ಯ ಮೀರಾ ಅವರನ್ನು ಪೊಲೀಸರು ಬಂಧಿಸಿಲ್ಲ ಎಂದು ತಿಳಿದುಬಂದಿದೆ.
‘ಪುಣ್ಯಕ್ಕೆ ಭಗವಾನ್​ ಭಾರತದಲ್ಲಿ ಹುಟ್ಟಿದ್ದಾರೆ- ಪಾಕ್​ನಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಅವರ ತಲೆ ಹೋಗ್ತಿತ್ತು’

ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?

ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
