ಬೆಂಗಳೂರು:ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಳಪಾಡ್ ಉಪಟಳ ಮುಂದುವರೆದಿದೆ. ಇದೀಗ ಅವರು ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೇ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ.
ಕರೊನಾ ನಿರ್ವಹಣೆಗೆ ಪಕ್ಷದ ಕಚೇರಿಯಲ್ಲಿ ತಯಾರಿ ಚಟುವಟಿಕೆ ನಡೆಯುತ್ತಿದ್ದ ವೇಳೆ ಏಕಾಏಕಿ 15 ಸಹಚರರೊಂದಿಗೆ ಆಗಮಿಸಿದ ನಳಪಾಡ್, ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಕೈ ಎತ್ತಿ ಹೊಡೆಯಲೂ‌ ಮುಂದಾಗಿದ್ದಾರೆ.
ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ನಲಪಾಡ್ ಹಾಗೂ ಇತರರು ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಜತೆಗೆ ಭದ್ರತೆ ನೀಡುವಂತೆ ಕೋರಿದ್ದಾರೆ. ಹಾಗೆಯೇ ಉಪಚುನಾವಣೆ ಸಂದರ್ಭದಲ್ಲೂ ನಳಪಾಡ್ ಕಿರಿಕಿರಿ ಉಂಟು ಮಾಡಿದ್ದ ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ನಳಪಾಡ್ ಗುಂಪು ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಮತ್ತೆ ಐದು ಜನರು ಬಂದು ನಮ್ಮ ಬಾಸ್ ನಳಪಾಡ್ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಈ ಹಿಂದೆ ತನ್ನ ಸ್ನೇಹಿತನಿಗೆ ಮುಖಮೂತಿ ನೋಡದೆ ಚಚ್ಚಿ ಸುದ್ದಿಯಾಗಿದ್ದ ನಳಪಾಡ್ ಹಲವು ತಿಂಗಳು‌ ಜೈಲುಪಾಲಾಗಿದ್ದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಳಪಾಡ್‌ಗೆ ಚುನಾವಣೆಯಲ್ಲಿ‌ಹೆಚ್ಚಿನ ಮತ ಬಂದಿತ್ತು. ಆದರೆ ಆತನ ಹಿನ್ನೆಲೆಯನ್ನು ಗಮನಿಸಿ ಪಕ್ಷ ಅಧ್ಯಕ್ಷ ಸ್ಥಾನ ನಿರಾಕರಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರರಿಗೆ ವಿವಿಧ ಜವಾಬ್ದಾರಿ ನೀಡಲಾಗಿತ್ತು.
ನಿತ್ಯಾನಂದನ ‘ಕೈಲಾಸ’ದಿಂದ ಭಾರತೀಯರಿಗೆ ಬಂತು ಶಾಕಿಂಗ್‌ ನ್ಯೂಸ್‌- ಬೇಸರದಲ್ಲಿ ಭಕ್ತರು…

ಏರುತ್ತಲೇ ಸಾಗಿದೆ ಸಾವಿನ ಸಂಖ್ಯೆ! ಸೋಂಕಿಗೆ ಭಾರತದಲ್ಲಿ 1.85 ಲಕ್ಷ ಮಂದಿ ಬಲಿ

ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
