ಬೆಂಗಳೂರು:ಅತ್ಯಾಚಾರ ಕೇಸ್​ನಲ್ಲಿ ಸಿಲುಕಿ ನಂತರ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿ ತನ್ನದೇ ಕೈಲಾಸ ಸೃಷ್ಟಿಸಿಕೊಂಡಿರುವ ಕುತೂಹಲದ ವ್ಯಕ್ತಿ ಎಂದರೆ ನಿತ್ಯಾನಂದ. ಈತನಿಗೆ ಶಿಷ್ಯ ವರ್ಗ ಅದರಲ್ಲಿಯೂ ಶಿಷ್ಯೆಯಂದಿರು ಅಪಾರ ಪ್ರಮಾಣದಲ್ಲಿದ್ದು, ಕೈಲಾಸದಲ್ಲಿಯೂ ಹಲವಾರು ಶಿಷ್ಯೆಯರನ್ನು ಹೊಂದಿದ್ದಾನೆ ಎನ್ನಲಾಗಿದೆ.
ಆಗಾಗ್ಗೆ ಕೈಲಾಸದಿಂದಲೇ ಚಿತ್ರ- ವಿಚಿತ್ರ ವೇಷ ಭೂಷಣದೊಂದಿಗೆ ಸಂದೇಶವನ್ನೂ ಕಳಿಸುತ್ತಿರುವ ಈ ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಈಗ ಮತ್ತೆ ಅತ್ಯಾಚಾರದ ಆರೋಪ ಕೇಳಿಬಂದಿದೆ. ಅದೂ ಕೈಲಾಸದಿಂದಲೇ ಈ ಆರೋಪ ಕೇಳಿಬಂದಿದೆ!
ಕೈಲಾಸದಲ್ಲಿ ಈತ ಕಳ್ಳಾಟ ಆಡುತ್ತಿದ್ದಾನೆ ಎಂದು ಆತನ ವಿದೇಶಿ ಶಿಷ್ಯೆಯೊಬ್ಬಳು ಇಮೇಲ್ ಮೂಲಕವೇ ರಾಮನಗರದ ಬಿಡದಿ ಠಾಣೆ ಪೊಲೀಸರಿಗೆ ದೂರನ್ನೂ ದಾಖಲು ಮಾಡಿದ್ದು, ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿಯೂ ಬರೆದುಕೊಂಡಿದ್ದಾಳೆ.
ಸಾರಾ ಲಾಂದ್ರಿ ಎಂಬಾಕೆ ಈ ಆರೋಪ ಮಾಡಿದ್ದು, ಕೈಲಾಸದಲ್ಲಿ ನಿತ್ಯಾನಂದ ಹಾಗೂ ಆತನ ಶಿಷ್ಯವೃಂದದವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಇದ್ದಾರೆ ಅಂತ ಸಾರಾ ಲಾಂದ್ರಿ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಡದಿ ಪೊಲೀಸರು, ಈ ರೀತಿ ಇ-ಮೇಲ್​ ದೂರನ್ನು ಪಡೆದುಕೊಳ್ಳಲು ಆಗದು. ಆದ್ದರಿಂದ ದಯವಿಟ್ಟು ಯಾವುದೇ ಭಯ, ಅಂಜಿಕೆ ಇಲ್ಲದೇ ಭಾರತದ ಯಾವುದಾದರೂ ಪೊಲೀಸ್ ಠಾಣೆಗೆ ಖುದ್ದಾಗಿ ಹೋಗಿ ದೂರು ದಾಖಲಿಸುವಂತೆ ಹೇಳಿರುವ ಪತ್ರವೂ ವೈರಲ್​ ಆಗುತ್ತಿದೆ.

ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ

The Kashmir Files: ಉಗ್ರರ ಕಣ್ಣುತಪ್ಪಿಸಿ ಅಕ್ಕಿ ಡ್ರಮ್​ನಲ್ಲಿ ಬಚ್ಚಿಟ್ಟುಕೊಂಡ ನನ್ನ ಅಣ್ಣನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − seven =
Remember me
