ಚಿಕ್ಕಬಳ್ಳಾಪುರ: ಪೊಲೀಸ್​ ಇಲಾಖೆಯಲ್ಲಿ ನಾಯಿಗಳಿಗೆ ಭಾರಿ ಡಿಮಾಂಡ್​. ಪೊಲೀಸರಿಂದಲೂ ಕಂಡುಹಿಡಿಯಲು ಸಾಧ್ಯವಾಗದ ಎಷ್ಟೋ ಕೇಸ್​ಗಳನ್ನು ನಾಯಿಗಳೇ ಬಗೆಹರಿಸುವುದು ಇದೆ. ಆದರೆ ಇಲ್ಲೊಂದು ಕುತೂಹಲದ ಪ್ರಕರಣದಲ್ಲಿ ನಾಯಿಯ ಬದಲು ಬೆಕ್ಕು ಸಾಕಲಾಗಿದೆ.
ಬೆಕ್ಕುಗಳನ್ನು ಸಾಕಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸರು. ಇದಕ್ಕೆ ಕಾರಣ, ಇಲಿಗಳ ಕಾಟ! ಇಲಿಗಳ ಕಾಟದಿಂದ ಹೈರಾಣಾದ ಪೊಲೀಸರು ಬೆಕ್ಕಿನ ಮೊರೆ ಹೋಗಿದ್ದಾರೆ.
ಗೌರಿಬಿದನೂರು ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಪೊಲೀಸ್ ಠಾಣೆಯಲ್ಲಿನ ದಾಖಲೆಗಳನ್ನು ತಿಂದು ತೇಗಿ ಹಾಳು ಮಾಡುತ್ತಿವೆ. ಇದರಿಂದ ಇಲಿಗಳ ಕಾಟಕ್ಕೆ ಹೈರಾಣಾದ ಪೊಲೀಸರು ಈಗ ಬೆಕ್ಕು ಸಾಕುತ್ತಿದ್ದಾರೆ. ಈ ಮೂಲಕ ಇಲಿಗಳನ್ನು ಮಟ್ಟಹಾಕಲು ಮುಂದಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆ ರಾಜಾರೋಷವಾಗಿ ಒಡಾಡುತ್ತಿರುವ ಬೆಕ್ಕು ಇಲಿಗಳ ಬೇಟೆ ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗ್ತಿದ್ದು, ಪೊಲೀಸರ ಪ್ಲಾನ್ ಸಕ್ಸಸ್ ಆಗಿದೆ ಇದರಿಂದ ಪೊಲಿಸರು ಖುಷಿಯಾಗಿದ್ದಾರೆ.
ಪೊಲೀಸರು ಕಳೆದ 1 ತಿಂಗಳ ಹಿಂದೆ ಅನಾಥವಾಗಿದ್ದ ಬೆಕ್ಕಿನ ಮರಿ ಒಂದನ್ನು ತಂದು ಸಾಕಲು ಪ್ರಾರಂಭಿಸಿದರು. ಇದೀಗ ಈ ಬೆಕ್ಕಿನ ಮರಿ ದೊಡ್ಡದಾಗಿದ್ದು ಇಲಿಗಳ ಬೇಟೆ ಶುರು ಮಾಡಿದೆ. ಈ ಮೂಲಕ ಪೊಲೀಸರಿಗೆ ಇದ್ದ ತಲೆನೋವು ದೂರ ಆಗಿದೆ. ಇಲಿಗಳ ಕಾಟಕ್ಕೆ ಬೇಸತ್ತು ಹೋಗಿದ್ದ ಪೊಲೀಸರಿಗೆ ಬೆಕ್ಕು ರಿಲೀಫ್ ಕೊಡುತ್ತಿದೆ.
ಮದ್ವೆಯಾಗಿ ಪತ್ನಿಯರನ್ನು ಮಾರಾಟ ಮಾಡುತ್ತಿದ್ದ ಭಯಾನಕ ಕ್ರಿಮಿನಲ್! 12 ಮಂದಿಗೆ ಮೋಸ ಮಾಡಿದ್ದವ ಕೊನೆಗೂ ಸಿಕ್ಕಿಬಿದ್ದ

ಅಗೆದಷ್ಟೂ, ಬಗೆದಷ್ಟೂ ಪತ್ತೆಯಾಗ್ತಿವೆ ಭ್ರೂಣಗಳ ಚರಿತ್ರೆ- ಬೆಳಗಾವಿಯ ಆಸ್ಪತ್ರೆಗಳ ಭಯಾನಕ ಕಥೆಗಳು ಬೆಳಕಿಗೆ..!

ಬೈಕ್​ ಆಕಾಂಕ್ಷಿಗಳಿಗೆ ಬಿಗ್​ ಶಾಕ್​: ಜುಲೈ 1ರಿಂದ ಬೆಲೆ ಹೆಚ್ಚು ಮಾಡಿದ ‘ಹೀರೋ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + four =
Remember me
