ವಾಷಿಂಗ್ಟನ್:ಅಮೆರಿಕದ ಪ್ರಸಿದ್ಧ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ಗಮನ ಸೆಳೆದದ್ದು ಒಂದು ಬೆಕ್ಕು. ಇದರ ಹೆಸರು ಸುಕಿ. ಇದು ತನ್ನ ಒಡತಿ ಫ್ರಾನ್ಸೆಸ್ಕಾ ಬೋರ್ಡಿಯರ್ ಜತೆ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದೆ.
ಪದವಿ ಪ್ರದಾನ ಸಮಾರಂಭದಲ್ಲಿ ಅದಕ್ಕೆ ಪದವೀಧರರಿಗೆ ನೀಡುವ ಹ್ಯಾಟ್‌ ಮತ್ತು ಕೋಟ್‌ ನೀಡಿ ಗೌರವಿಸಲಾಗಿದೆ. ಅಷ್ಟಕ್ಕೂ ಇದಕ್ಕೆ ಇಂಥದ್ದೊಂದು ಗೌರವ ಸಂದಲು ಕಾರಣ ಏನೆಂದರೆ, ಇದು ಪ್ರತಿ ಆನ್‌ಲೈನ್‌ (ಜೂಮ್) ಕ್ಲಾಸ್ ಮಿಸ್ ಮಾಡದೆ ಹಾಜರಾಗುತ್ತಿತ್ತಂತೆ!
ಆದ್ದರಿಂದ ಪದವಿ ಪ್ರದಾನ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಧ್ಯೆ ಬೆಕ್ಕಿಗೂ ಪದವಿ ನೀಡಲಾಗಿದೆ. ಈ ಕುರಿತು ಅದರ ಒಡತಿ ಫ್ರಾನ್ಸೆಸ್ಕಾ ಬೋರ್ಡಿಯರ್ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾಳೆ.
ಪದವಿ ಪ್ರದಾನ ಸಮಾರಂಭದಲ್ಲಿ ನಾನು ಒಂಟಿಯಾಗಿರಲಿಲ್ಲ. ಈ ರೀತಿಯ ಮೈಲಿಗಲ್ಲನ್ನು ಸಾಧಿಸುವಲ್ಲಿ ನನ್ನ ಮುದ್ದಿನ ಬೆಕ್ಕು ಸುಕಿಯೂ ನನ್ನ ಜೊತೆ ಇತ್ತು ಎಂದು ಕ್ಯಾಪ್ಷನ್‌ ಕೊಟ್ಟಿದ್ದಾಳೆ. ನನ್ನ ಬೆಕ್ಕು ನಾನು ಹಾಜರಾಗುತ್ತಿದ್ದ ಪ್ರತಿಯೊಂದು ಜೂಮ್ ಉಪನ್ಯಾಸಕ್ಕೂ ಬರುತ್ತಿತ್ತು. ಆದ್ದರಿಂದ ನಾವಿಬ್ಬರೂ ಆಸ್ಟಿನ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಒಟ್ಟಿಗೆ ಪದವಿ ಪಡೆಯುತ್ತೇವೆ ಎಂದಿದ್ದಾಳೆ.
ಅಮ್ಮಾ.. ಹಠ ಮಾಡಿ ಮದ್ವೆಯಾದೆ, ಅದೇ ಹಠದಲ್ಲೇ ಸಾಯ್ತಿದ್ದೇನೆ: ನಿಗೂಢವಾಗಿದೆ ಬೆಂಗಳೂರಿನ ಇಂಜಿನಿಯರ್ ಡೆತ್‌ನೋಟ್‌!

ದೇವೇಗೌಡರು ಬಿತ್ತನೆ ಕಾಳು… ಮೋದಿಯವರು ಮಕ್ಕಳು ಮಾಡದಿದ್ರೆ ಅದು ನಮ್‌ ತಪ್ಪಾ ಎಂದ ಇಬ್ರಾಹಿಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
