ರಾಮನಗರ: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಗೆ ನಿನ್ನೆ (ಬುಧವಾರ) ಸಂಜೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ರಾಮನಗರ, ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ದಾಳಿ ಮಾಡಿದ ಅಧಿಕಾರಿಗಳು ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಇರುವ ಡಿಕೆಶಿ ಮನೆಯ ಗೇಟ್​ಗೆ ಇಂದು ಬೀಗ ಜಡಿದು ಡಿಕೆಶಿ ತಾಯಿ ಕುಳಿತುಕೊಂಡಿರುವ ದೃಶ್ಯ ಕಂಡುಬಂದಿದೆ. ಪತ್ರಿಕೆ ಓದುತ್ತಾ ಮನೆಯ ಹೊರಾಂಗಣದಲ್ಲಿ ಡಿಕೆಶಿ ತಾಯಿ ಗೌರಮ್ಮ ಕುಳಿತಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್​, ‘ಸಿಬಿಐನವರು ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ’ ಎಂದು ಹೇಳಿದರು. ‘ಏನ್ಮಾಡ್ತಿರಾ ಯಾರ ಮೇಲೆ ಪ್ರೀತಿ ಇರುತ್ತಾ ಅವರ ಮನೆ ದಾಳಿ ಮಾಡುತ್ತಾರೆ. ನಾನು ಈ ಕೆಲಸದಲ್ಲಿದ್ದೇನೆ. ಅವರು ಅಲ್ಲಿ ದಾಳಿ ಮಾಡಿದ್ದಾರೆ. ಜಮೀನು ನೋಡಿದ್ದಾರೆ, ಮನೆ ನೋಡಿದ್ದಾರೆ. ಇನ್ನು ಏನೇನ್​ ಮಾಡಿದ್ದಾರೋ ಗೊತ್ತಿಲ್ಲ. ನನ್ನ ತಾಯಿಗೆ ವಯಸ್ಸಾಗಿದೆ. ಮರೆವು ಜಾಸ್ತಿ ಆಗಿದೆ. ಸಿಬಿಐ ಅಂದಕೂಡಲೇ ನಮ್ಮ ಜನ ಗಡಗಡ ಅಂತಾರೆ. ನಾವು ಗಡಗಡ ಅಂತೀವಿ. ಹೀಗಾಗಿ ಅಲ್ಲಿ ಏನಾಗಿದೆ ಅಂತಾ ಯಾರಿಗೂ ಗೊತ್ತಾಗಿಲ್ಲ, ಸಿಬಿಐ ಅಂದ್ರೆ ಯಾರಿಗೆ ಹೆದರಿಕೆ ಆಗಲ್ಲ ಹೇಳಿ? ನಮ್​ ಅಮ್ಮನಿಗೂ ಹೆದರಿಕೆ ಆಯಿತು’ ಎಂದಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ ಒಂದು ದಿನದ ಬಳಿಕ ಪಿಎಫ್​ಐ ತವರು ಕೇರಳದಿಂದ ಹೊರಟಿತು ಈ ಆದೇ
VIDEO: ಮಕ್ಕಳಿಗೆ ಪ್ಯಾಡ್ ಕೊಡಬಹುದೆ ಎಂದ ಬಾಲಕಿಗೆ ಲೇಡಿ ಐಎಎಸ್​ ಅಧಿಕಾರಿಯಿಂದ ಥೂ ಇದೆಂಥ ಕೀಳು ಮಾತು!
VIDEO: ಗೋಡೆ ಕುಸಿದು ಆಸ್ಪತ್ರೆಯಲ್ಲಿ ನರಳುತ್ತಿದ್ದ ಬಾಲಕನನ್ನು ನೋಡಲಾಗದೇ ಬಿಕ್ಕಿಬಿಕ್ಕಿ ಅತ್ತ ಕಮಿಷನರ್​
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × one =
Remember me
