ಬೆಂಗಳೂರು:ಪೊಲೀಸ್​ ಇಲಾಖೆಯಲ್ಲಿ ಅಮೋಘ ಸೇವೆ ಸಲ್ಲಿಸುವವರಿಗೆ ನೀಡಲಾಗುವ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಸಮಯದಲ್ಲಿಯೂ ಸಿಡಿ ವಿಚಾರ ಪ್ರಸ್ತಾಪವಾಯಿತು.
ಕಾರ್ಯಕ್ರಮದಲ್ಲಿ ಹಾಜರು ಇದ್ದ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಅವರಿಗೆ ಸಿಡಿ ವಿಚಾರವಾಗಿ ಪ್ರಶ್ನೆ ಕೇಳಲಾಯಿತು. ಎಸ್​ಐಟಿ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ಇನ್ನೂ ಬಂಧಿಸಿಲ್ಲವೇಕೆ ಎಂಬಿತ್ಯಾದಿಯಾಗಿ ಪ್ರಶ್ನೆ ಕೇಳಲಾಯಿತು.
ಎಸ್ ಐಟಿ ಅಧಿಕಾರಿಗಳು ಅವರ ಕೆಲಸ ಮಾಡುತ್ತಾ ಇದ್ದಾರೆ. ಅವರ ಮೇಲೆ ಯಾರೂ ಒತ್ತಡ ಹಾಕುತ್ತಿಲ್ಲ. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಸೂದ್​ ಹೇಳಿದರು. ಇನ್ನು ಬಂಧನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ ಐಟಿ ತನಿಖೆ ಇನ್ನೂ ಆರಂಭದಲ್ಲಿ ಇದೆ. ಈಗಲೇ ಬಂಧಿಸಬೇಕು ಎನ್ನುವುದು ಸರಿಯಲ್ಲ. ಸಂಪೂರ್ಣ ಪ್ರಕರಣ ಮುಕ್ತಾಯವಾದ ಮೇಲೆ ಆಗ ಬಂಧನ ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ತನಿಖಾಧಿಕಾರಿಗಳು ಹಂತ ಹಂತವಾಗಿ ತನಿಖೆ ಮಾಡುತ್ತಿದ್ದಾರೆ. ಎಲ್ಲಿಯೂ ನ್ಯಾಯಾಂಗ ನಿಂದನೆ ಆಗಿಲ್ಲ. ನ್ಯಾಯಾಲಯ ನೀಡಿರುವ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿಲ್ಲ. ಎಸ್​ಐಟಿಯಲ್ಲಿ ಇರುವವರು ಹಿರಿಯ ಅಧಿಕಾರಿಗಳು. ಹಂತ ಹಂತವಾಗಿ ತನಿಖೆ ಮುಂದುವರಿಸುತ್ತಿದ್ದಾರೆ. ಯಾರ ಮೇಲೂ ಒತ್ತಡವಾಗಿಲ್ಲ. ಎಸ್​ಐಟಿ ತನಿಖೆ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಹೇಳಿದರು.
ಇದೇ ವೇಳೆ ಈ ಪ್ರಕರಣದ ಕುರಿತು ಪ್ರತಿದಿನ ಕರೆ ಮಾಡಿ ತನಿಖೆ ಯಾವ ಹಂತದಲ್ಲಿ ಇದೆ ಎಂದು ಕೇಳುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಪ್ರತಿದಿನ ಕೇಳುವುದು ತಪ್ಪು ಎಂದು ಹೇಳಿದರು. ಜತೆಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯುವ ಭರವಸೆ ಇದ್ದು, ಸತ್ಯ ಹೊರಬರಲಿದೆ ಎಂದರು.
ಯುವತಿ ಹೇಳಿಕೆ ಕೊಟ್ಟು 3 ದಿನ ಕಳೆದ್ರು ರಮೇಶ್ ಜಾರಕಿಹೊಳಿ ಮೌನ: ಇಂದು ಕಾಣಿಸಿಕೊಳ್ತಾರಾ ಸಾಹುಕಾರ್?

ಬಾಯ್​ಫ್ರೆಂಡ್​ಗೆ ಕರೊನಾ ಬಂದ ಬೆನ್ನಲ್ಲೇ ಬಾಲಿವುಡ್​ ಬೆಡಗಿ ಆಲಿಯಾ ಭಟ್​ಗೂ ತಗುಲಿದ ಸೋಂಕು

ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
