ಬೆಂಗಳೂರು:ಜಾರಕಿಹೊಳಿ ಹಾಗೂ ಸಿಡಿ ಲೇಡಿಯ ವಿವಾದ ಸದ್ಯ ಮುಗಿಯುವಂತೆ ಕಾಣುತ್ತಿಲ್ಲ. ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಸದ್ಯಕ್ಕಂತೂ ಈ ಪ್ರಕರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಬುಡಕ್ಕೆ ಬಂದಿದ್ದು, ಕ್ಷಣಕ್ಕೊಂದು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.
ಈ ನಡುವೆ ಒಂದರ ಮೇಲೊಂದರಂತೆ ವಿಡಿಯೋ ಬಿಡುಗಡೆ ಮಾಡುತ್ತಿರುವ ಸಿಡಿ ಲೇಡಿ, ಡಿ.ಕೆ.ಶಿವಕುಮಾರ್​ ಅವರ ಹೆಸರು ಪ್ರಸ್ತಾಪ ಮಾಡಿರುವುದು ಸದ್ಯ ಕಾಂಗ್ರೆಸ್​ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಲು ಶುರು ಮಾಡಿದೆ.
ವಿಡಿಯೋದಲ್ಲಿ ಡಿ.ಕೆ.ಶಿವಕುಮಾರ್​ ಅವರು ನನಗೆ ಗೊತ್ತು. ಮಾರ್ಚ್ 2ರಂದು ಅವರ ಭೇಟಿಗಾಗಿ ಗೋವಾಗೆ ಹೋಗಿದ್ದೆ ಎಂದು ಸಿಡಿ ಲೇಡಿ ವಿಡಿಯೋದಲ್ಲಿ ಹೇಳಿದ್ದಾಳೆ. ಆದರೆ ಇತ್ತ ಇನ್ನೊಂದೆಡೆ, ಡಿ.ಕೆ.ಶಿವಕುಮಾರ್​, ನನಗೆ ಆ ಯುವತಿ ಯಾರು ಎಂದು ಗೊತ್ತೇ ಇಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ.
ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯ ತನಿಖಾಧಿಕಾರಿಗಳಿಗೂ ಇದು ತಲೆನೋವಾಗಿದೆ.
ಆದರೆ ಇಬ್ಬರ ಹೇಳಿಕೆಯಲ್ಲಿಯೂ ಈ ಇಡೀ ಪ್ರಕರಣದ ಮಾಸ್ಟರ್​ಮೈಂಡ್​ ನರೇಶ್​ ಹೆಸರು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಸಿಡಿ ಹಿಂದಿರುವ ಸಂಪೂರ್ಣ ತಲೆ ಅವನದ್ದೇ ಎನ್ನುವ ಬಗ್ಗೆ ಗುಮಾನಿ ಶುರುವಾಗಿದೆ. ನಿನ್ನೆ ಟೆಕ್ನಿಕಲ್ ಸೆಲ್​ಗೆ ವಿಚಾರಣೆಗೆ ಹಾಜರಾದ ಯುವತಿಯ ಸಹೋದರನಿಂದಲೂ ನರೇಶ್ ಹೆಸರು ಪ್ರಸ್ತಾಪವಾಗಿತ್ತು. ನರೇಶ್ ಅಣತೆಯಂತೆ ವಿಡಿಯೋ ಮಾಡಿ ಸಿಡಿಲೇಡಿ ಬಿಡುಗಡೆ ಮಾಡುತ್ತಿರುವ ಸಂದೇಹ ಶುರುವಾಗಿದೆ. ಸಿಡಿ ಲೇಡಿ ಮತ್ತು ಶಿವಕುಮಾರ್​ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವ ಸಂದೇಹವೂ ವ್ಯಕ್ತವಾಗಿದೆ.
ಸಿಡಿ ಲೇಡಿ ಹೊಸ ವಿಡಿಯೋ ರಿಲೀಸ್​! ಇವರ ರಹಸ್ಯ ಬಿಚ್ಚಿಡ್ತೀನಿ, ಹೆಲ್ಪ್ ಮಾಡಿ ಎಂದ ಸಂತ್ರಸ್ತೆ!

ಸಿಡಿ ಲೇಡಿ ಇಲ್ಲೇ ಇದ್ದಾಳೆ! ಸುಮ್ಮನೆ ಎಲ್ಲೆಲ್ಲೋ ಹುಡುಕ್ತಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + five =
Remember me
