ಬೆಂಗಳೂರು:ಮಾಜಿ ಸಚಿವ ರಮೇಶ್‌ ಜಾರಕೀಹೊಳಿಯವರ ಅಶ್ಲೀಲ ಸಿಡಿ ಕೇಸ್‌ನಲ್ಲಿ ಇರುವ ಯುವತಿಗೆ ರಕ್ಷಣೆ ಕೊಡುವುದಾಗಿ ಇದಾಗಲೇ ಕಾಂಗ್ರೆಸ್‌ನ ಹಲವಾರು ಶಾಸಕಿಯರು ಮುಂದೆ ಬಂದಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕೂಡ ರಕ್ಷಣೆ ನೀಡಲು ಮುಂದಾಗಿದ್ದಾರೆ.
ನಮ್ಮ ಸರ್ಕಾರ ಸಿಡಿ ಪ್ರಕರಣದ ’ಸಂತ್ರಸ್ತೆ’ಗೆ ರಕ್ಷಣೆ ನೀಡುವುದಾಗಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಹೆಣ್ಣುಮಗಳಿಗೆ ಅನ್ಯಾಯ ಆಗಿದೆಯೇ ಎಂಬುದು ತನಿಖೆ ಆದಮೇಲೆ ಗೊತ್ತಾಗುತ್ತದೆ. ಆದರೆ, ಅವರಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತೇವೆ ಎಂದರು.
ಸಿಡಿಯಲ್ಲಿರುವ ಯುವತಿಯಿಂದ ಮತ್ತೊಂದು ವೀಡಿಯೋ ಬಿಡುಗಡೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಈ ಬಗ್ಗೆ ನನಗೆ ಗೊತ್ತಿಲ್ಲ. ಎರಡನೆಯ ವಿಡಿಯೋದಲ್ಲಿ ಆ ಯುವತಿ ಏನು ಹೇಳಿದ್ದಾರೆ ನೋಡಿಲ್ಲ. ಗೃಹ ಸಚಿವ ಬೊಮ್ಮಾಯಿ ಅವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಆ ಮಹಿಳೆಗೆ ರಕ್ಷಣೆ ಕೊಡುವುದಾಗಿ ಸದನದಲ್ಲಿ ಹೇಳಿದ್ದಾರೆ.
ಈಗ ನಮ್ಮಿಂದ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಹೆಣ್ಣುಮಗಳಿಗೆ ರಕ್ಷಣೆ ಕೊಡುವುದುನಮ್ಮ ಕರ್ತವ್ಯ ಎಂದರು.
ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…

ಆಗ ಸಿಡಿ ಕೇಸ್‌ ಅಂದ್ರು… ಈಗ ಒಂದೇ ಹೆಂಡ್ತಿ ಅಂದ್ರು… ಒಟ್ನಲ್ಲಿ ಪಲಾಯನ ಮಾಡಲು ಏನೋ ಒಂದ್‌ ಬೇಕು…

ಅತ್ತ ವರ.. ಇತ್ತ ವಧು… ಮಧ್ಯೆ ಪ್ರವಾಹ… ಹಾರಿಬಂದು ಮದುಮಗನಿಗೆ ಕಿಸ್‌ ಕೊಟ್ಟಳು ಮದುಮಗಳು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 12 =
Remember me
