ಬೆಂಗಳೂರು:ಕಳೆದ ಅನೇಕ ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್​ ಜಾರಕೀಹೊಳಿ ಅವರ ಸಿಡಿ ಪ್ರಕರಣ ನಾಳೆ ಅಂತ್ಯ ಕಾಣುವ ಸಾಧ್ಯತೆ ಇದೆ. ಏಕೆಂದರೆ ನ್ಯಾಯಾಧೀಶರ ಮುಂದೆ ಸಿಡಿಯಲ್ಲಿರುವ ಯುವತಿ ಹಾಜರಾಗುವ ಸಾಧ್ಯತೆ ಇದೆ.
ಈ ಕುರಿತು ಯುವತಿಯ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಫೇಸ್​ಬುಕ್​ ಲೈವ್​ನಲ್ಲಿ ಬಂದು ಹೇಳಿಕೆ ನೀಡಿರುವ ವಕೀಲ ಜಗದೀಶ್​ ಅವರು, ನ್ಯಾಯಾಧೀಶರು ಅನುಮತಿ ನೀಡಿದ್ರೆ ನಾಳೆ ಯುವತಿ ಹಾಜರು ಮಾಡಲಾಗುವುದು ಎಂದು ಹೇಳಿದ್ದಾರೆ.
ಪೊಲೀಸರು, ತನಿಖಾಧಿಕಾರಿಗಳ ಮೇಲೆ ಆರೋಪಿಯ ಪ್ರಭಾವ ಹೆಚ್ಚಾಗಿದೆ. ಈ ಕೇಸ್​​ನಲ್ಲಿ ಸರಿಯಾದ ತನಿಖೆ ಸಾಧ್ಯನೇ ಇಲ್ಲ. ಪೊಲೀಸರು ತನಿಖೆ ಸಂಪೂರ್ಣ ದಿಕ್ಕು ತಪ್ಪಿಸಿದ್ದಾರೆ. ಆದ್ದರಿಂದ ಇದಕ್ಕೆ ತಾರ್ಕಿಕ ಅಂತ್ಯವಾಗಬೇಕು ಎಂದರೆ ಯುವತಿ ಕೋರ್ಟ್​ ಮುಂದೆ ಹಾಜರಾಗಬೇಕು, ಆರೋಪಿಗೂ ಸಹ ಮೆಡಿಕಲ್​ ಟೆಸ್ಟ್​ ಮಾಡಲೇಬೇಕು ಎಂದು ವಕೀಲ ಜಗದೀಶ್​ ಹೇಳಿದ್ದಾರೆ.
ಒಬ್ಬ ಕಾಮನ್​ ಮ್ಯಾನ್​ ಹೀಗೆ ಮಾಡಿದ್ರೆ ಸುಮ್ನೆ ಇರ್ತಿದ್ರಾ? ಆದರೆ ಇಲ್ಲಿ ಏನೇನೋ ನಡೆಯುತ್ತಿದೆ. ಎಲ್ಲವೂ ಬಹಿರಂಗವಾಗಬೇಕು ಎಂದರೆ ಕೋರ್ಟ್​ ಮುಂದೆ ಯುವತಿ ಹಾಜರು ಆಗಬೇಕು. ಆದ್ದರಿಂದ ನ್ಯಾಯಾಧೀಶರು ಅನುಮತಿ ನೀಡಿದರೆ ಅವರನ್ನು ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸದ್ಯ ಎಲ್ಲರ ಚಿತ್ತ ನಾಳೆಯತ್ತ ಹರಿದಿದೆ. ಅದೇ ಇನ್ನೊಂದೆಡೆ, ಯುವತಿಯೇನಾದರೂ ಸತ್ಯ ಬಹಿರಂಗಪಡಿಸಿದರೆ, ಈ ಪ್ರಕರಣದಲ್ಲಿ ನಿಜವಾದ ಕಳ್ಳರು ಯಾರಿದ್ದಾರೆ ಅವರು ಸಿಲುಕಿಕೊಳ್ಳುವ ಸಾಧ್ಯತೆ ಇದ್ದು, ಸದ್ಯ ಅವರ ಎದೆಯಲ್ಲಿ ಡವಡವ ಶುರುವಾಗಿರುವುದಂತೂ ನಿಜ.
ಡಿಕೆಶಿಗಾಗಿಯೇ ಗೋವಾಕ್ಕೆ ಹೋಗಿದ್ದೆ ಎಂದ ಸಿಡಿ ಲೇಡಿ: ಯಾರ್ರಿ ಅವಳು ಅಂದ್ರು ‘ಬಂಡೆ’

ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ

ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
