ಬೆಂಗಳೂರು:ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ನಾಳೆ (ಜುಲೈ 30) ಪ್ರಕಟಿಸಲಾಗುವುದು. ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿದ್ದು, ಅದರ ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಈಗಾಗಲೇ ಪಿಯುಸಿ ಅಥವಾ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಈ ಎಲ್ಲ ಅಂಕಗಳ ಆಧಾರದಲ್ಲಿ ಅಂತಿಮ ರ‍್ಯಾಂಕ್‌ ಪಟ್ಟಿಯನ್ನು ಸಿದ್ಧಪಡಿಸಿ ನಾಳೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದು ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಫಲಿತಾಂಶವನ್ನು ಸಿಇಟಿಯ ಅಧಿಕೃತ ವೆಬ್​ಸೈಟ್​http://kea.kar.nic.inನಲ್ಲಿ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಈ ವೆಬ್​ಸೈಟ್​ಗೆ ಅದನ್ನು ಅಪ್​ಲೋಡ್​ ಮಾಡಲಾಗುತ್ತದೆ. ಈ ಲಿಂಕ್​ ಕ್ಲಿಕ್ ಮಾಡಿ ಹೋಮ್​ ಪೇಜ್​ಗೆ ಹೋಗಿ ಅಲ್ಲಿ ತಿಳಿಸಿರುವ ಸೂಚನೆಯಂತೆ ಮಾಹಿತಿಗಳನ್ನು ತುಂಬಿ, ಫಲಿತಾಂಶವನ್ನು ನೋಡಬಹುದಾಗಿದೆ.
ಸಿಇಟಿಯ ತಾತ್ಕಾಲಿಕ ಉತ್ತರ ಕೀಯನ್ನುಜೂನ್ 22 ರಂದೇ ಬಿಡುಗಡೆ ಮಾಡಲಾಗಿದೆ. KCET ಪರೀಕ್ಷೆಯನ್ನು ಜೂನ್ 16 ಮತ್ತು ಜೂನ್ 17 ರಂದು ರಾಜ್ಯಾದ್ಯಂತ ನಡೆಸಲಾಯಿತು. 2.2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಸಿಇಟಿ 2022 ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.
ಸಚಿವೆ ಸ್ಮೃತಿ ಇರಾನಿ ಮಗಳ ಸುದ್ದಿಗೆ ಹೋಗಿ ಪೇಚಿಗೆ ಸಿಲುಕಿದ ‘ಕೈ’ ನಾಯಕರು: ಹೈಕೋರ್ಟ್​​ನಿಂದ ಸಮನ್ಸ್​​

VIDEO: ಪಿಸ್ತೂಲ್​ ಹಿಡಿದು ಬಂದ ಕಳ್ಳನನ್ನು ಕ್ಲೀನ್​ ಮಾಡೋ ಬಟ್ಟೆಯಿಂದ್ಲೇ ಓಡಿಸಿದಳು! ಇಲ್ಲಿದೆ ನೋಡಿ ಅಚ್ಚರಿಯ ವಿಡಿಯೋ

ಶಾಲೆ ಪ್ರವೇಶಿಸ್ತಿದ್ದಂತೆಯೇ ವಿದ್ಯಾರ್ಥಿನಿಯರ ಮೈಮೇಲೆ ಬರ್ತಿದೆ ‘ದೆವ್ವ’! ಕಿರುಚುತ್ತಾ, ಕೂದಲು ಕೆದರಿಕೊಳ್ತಿರೋ ಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
