ಚಾಮರಾಜನಗರ:ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಹಿಳೆಗೆ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.
ಮದುವೆಯಾಗಿ ಮಗಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಹನೂರು ತಾಲೂಕಿನ ಚಿಕ್ಕಮಾಲಾಪುರದ ಚಂದ್ರಮ್ಮ, ಈ ಸಂಬಂಧದಿಂದ ಹುಟ್ಟಿದ ಮಗುವನ್ನು ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿದ್ದಳು!
ತಾಯಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತನ್ನ ತಾಯಿ ಮಾಡಿರುವ ಬರ್ಬರ ಕೃತ್ಯದ ಬಗ್ಗೆ ಖುದ್ದು ಮಗಳೇ ಸಾಕ್ಷಿ ನೀಡಿದ್ದಳು.
ಇದನ್ನೂ ಓದಿ:ಮೈಸೂರು: ರಿಮೋಟ್‌ ಕಂಟ್ರೋಲ್‌ ಸೆಲ್‌ ನುಂಗಿ ಮಗು ಸಾವು
2015ರಲ್ಲಿ ಈ ಘಟನೆ ನಡೆದಿದೆ. ಐದು ವರ್ಷಗಳಿಂದ ಚಾಮರಾಜನಗರದ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಇದೀಗ ಆದೇಶ ಹೊರಬಿದ್ದಿದೆ. ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆಯ ಜತೆಗೆ 15 ಸಾವಿರ ರೂಪಾಯಿಗಳ ದಂಡವನ್ನು ಕೋರ್ಟ್‌ ವಿಧಿಸಿದೆ.
ಅಕ್ರಮ ಸಂಬಂಧದಿಂದ ಚಂದ್ರಮ್ಮಾ 2015ರಲ್ಲಿ ಗರ್ಭಿಣಿಯಾಗಿದ್ದಳು. ಚಿಕಿತ್ಸೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. ಗಂಡು ಮಗು ಹುಟ್ಟಿತ್ತು. ಮಗುವನ್ನು ಎಲ್ಲರಿಗೂ ತೋರಿಸಲು ಭಯಪಟ್ಟಿದ್ದ ಈಕೆ, ಅಲ್ಲಿಯೇ ಇದ್ದ ಬ್ಲೇಡ್‌ ಜತೆ ಮಗುವನ್ನು ತೆಗೆದುಕೊಂಡು ಎಸ್ಕೇಪ್‌ ಆಗಿದ್ದಳು.
ನಂತೆ ಅದೇ ಬ್ಲೇಡ್‌ನಿಂದ ಮಗುವನ್ನು ಕೊಲೆ ಮಾಡಿ ಕೆರೆಗೆ ಎಸೆದು ಪರಾರಿಯಾಗಿದ್ದಳು. ಮಗುವಿನ ಶವ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ತನ್ನ ತಾಯಿಯ ಅಕ್ರಮದ ಬಗ್ಗೆ ಅರಿವಿದ್ದ ಮಗಳೇ ತಾಯಿಯ ವಿರುದ್ಧ ಸಾಕ್ಷಿ ನುಡಿದಿದ್ದಳು.
ಗೌರಿ‌ ಹತ್ಯೆ ಆರೋಪಿಯಿಂದ ಪಿಐಎಲ್‌: ಕರೊನಾ ಮಾಹಿತಿ ಕೇಳಿದ ಹೈಕೋರ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + sixteen =
Remember me
