ಚಾಮರಾಜನಗರ:ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜನಾಯಕ್ ಇಂದು ಮೃತಪಟ್ಟಿದ್ದಾರೆ.
ಕಾಡುಗಳ್ಳ ವೀರಪ್ಪನ ಜತೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್‌ ಅವರು ಬದುಕುಳಿದಿದ್ದರು. 1992ರಲ್ಲಿ ಎಸ್ಪಿ‌ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ ಏಳು ಗುಂಡುಗಳು ದೇಹ ಹೊಕ್ಕಿದ್ದವು. ಇದರ ಹೊರತಾಗಿಯೂ ಸಿದ್ದರಾಜನಾಯಕ್ ಬದುಕುಳಿದಿದ್ದರು. ನಂತರ ನಾಲ್ಕು ಗುಂಡುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಾಗಿತ್ತು. ಇನ್ನೂ ಮೂರು ಗುಂಡುಗಳು ತಲೆಯಲ್ಲಿಯೂ ಉಳಿದುಕೊಂಡಿದ್ದವರು.
ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಹೆಮ್ಮೆ ಇವರದ್ದು. ಕೇವಲ 5 ದಿ‌ನದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಬೇಕಿದ್ದ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿದ್ದರಾಜನಾಯಕ್ ಸಾವಿಗೆ ಚಾಮರಾಜನಗರ ಪೊಲೀಸರಿಂದ ಸಂತಾಪ ಸೂಚಿಸಿದ್ದಾರೆ.
ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ: ದಶಕಗಳ ಕಾಲ ನೆಮ್ಮದಿಯಿಂದಿದ್ದ ನೀರವ್‌ ಮೋದಿ ಮಾವನೂ ಎಸ್ಕೇಪ್‌!

ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌

ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
