ಹುಬ್ಬಳ್ಳಿ:ಹುಬ್ಬಳ್ಳಿಯ ಹೋಟೆಲ್​ನಲ್ಲಿ ಸರಳವಾಸ್ತು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿರುವ ಆರೋಪಿಗಳು ಇದೀಗ ತಾವು ಈ ರೀತಿ ಮಾಡಲು ಕಾರಣ ಏನು ಎಂಬ ಒಂದೊಂದೇ ಮಾಹಿತಿಯನ್ನು ಹೊರಕ್ಕೆ ಹಾಕುತ್ತಿದ್ದಾರೆ. ಪೊಲೀಸ್​ ವಿಚಾರಣೆ ತೀವ್ರಗೊಳ್ಳುತ್ತಲೇ ಒಂದೊಂದೇ ಸ್ಫೋಟಕ ರಹಸ್ಯಗಳು ಹೊರಬರುತ್ತಿವೆ.
ಆರೋಪಿಗಳಲ್ಲಿ ಪ್ರಮುಖನಾಗಿರುವ ಮಹಾಂತೇಶ್​ ಕೊಲೆಗೆ ಪ್ಲ್ಯಾನ್​ ಮಾಡಿದ್ದು ಹೇಗೆ? ಏಕೆ ಎಂಬ ವಿಷಯವನ್ನು ಹೇಳಿದ್ದಾನೆ. ಗುರೂಜಿ ಬಲಗೈ ಬಂಟನೆಂದೇ ಪ್ರಸಿದ್ಧನಾಗಿದ್ದ ಮಹಾಂತೇಶ್​ ಈ ನಿರ್ಧಾರ ತೆಗೆದುಕೊಳ್ಳಲು ಗುರೂಜಿ ಮಾಡಿದ ಮೋಸವಂತೆ.
‘ಚಂದ್ರಶೇಖರ ಗುರೂಜಿ ಸಂಸ್ಥೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಶ್ರಮಿಸಿದ್ದವ ನಾನು. ವೈಸ್ ಪ್ರೆಸಿಡೆಂಟ್ ಆಗಿ ಕೆಲಸ‌ ಮಾಡಿ ಯುವಕರ ತಂಡ ಕಟ್ಟಿ ಸಂಸ್ಥೆ ಬೆಳೆಸಿದ್ದೇನೆ. ಸಂಸ್ಥೆಯಲ್ಲಿ ಗುರೂಜಿ ಬಲಗೈ ಬಂಟನಾಗಿ‌ ಕೆಲಸ‌ಮಾಡಿದ್ದೆ. ಆದರೆ ನನ್ನನ್ನು ಸಂಸ್ಥೆಯಿಂದ ದೂರ ಮಾಡಿ, ಲಾಭ ಮಾಡಿಕೊಳ್ಳುತ್ತಿದ್ದರು. ಇದು ನನ್ನಿಂದ ಸಹಿಸಲು ಆಗಲಿಲ್ಲ ಎಂದು ಮಹಾಂತೇಶ್​ ಹೇಳಿದ್ದಾನೆ.
ಬೇನಾಮಿ ಆಸ್ತಿಗಳ ಕುರಿತಾಗಿಯೂ ಇನ್ನಷ್ಟು ಮಾಹಿತಿಗಳು ಹೊರಬಂದಿವೆ. ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಮಹಾಂತೇಶ್​ ಸೂಚಿಸಿದ ವ್ಯಕ್ತಿಗಳ ಹೆಸರಲ್ಲಿ ಬೆನಾಮಿ‌ ಆಸ್ತಿಯನ್ನು ಗುರೂಜಿ ಮಾಡಿದ್ದರು. ಈ ಆಸ್ತಿಗಳು ಸರಳವಾಸ್ತು ಸಂಸ್ಥೆಯ ನೌಕರರ ಹೆಸರಲ್ಲಿ ಮಾಡಲಾಗಿದೆ. ಮಹಾಂತೇಶ್ ಸೂಚಿಸಿರುವ ವ್ಯಕ್ತಿಗಳ ಹೆಸರಲ್ಲಿ ಆಸ್ತಿ ಮಾಡಲಾಗಿತ್ತು. ಅದನ್ನೆಲ್ಲಾ ತಮಗೆ ಮರಳಿ ಕೊಡಿಸುವಂತೆ ಗುರೂಜಿ ಮಹಾಂತೇಶ್​ಗೆ ಹೇಳಿದ್ದರು. ಅದರಂತೆ ಒಂದೊಂದೇ ಆಸ್ತಿ ಮರಳಿ ಕೊಡಿಸುವ ಕೆಲಸ ಮಹಾಂತೇಶ್​ ಮಾಡಿದ್ದ. ಇದರ ಮಧ್ಯೆ ಒಂದೆರಡು ಆಸ್ತಿಗಳನ್ನು ಗುರೂಜಿ ಗೊತ್ತಾಗದಂತೆ ಮಹಾಂತೇಶ್​ ಮಾರಾಟ ಸಹ ಮಾಡಿದ್ದ‌!
ಬೆನಾಮಿ ಆಸ್ತಿಗಳನ್ನು ಮರಳಿ‌ ಕೊಟ್ಟರೆ ಹಣ ನೀಡುವುದಾಗಿ ಗುರೂಜಿ ಮಹಾಂತೇಶ್​ಗೆ ಹೇಳಿದ್ದರು. ಪ್ರತಿ ತಿಂಗಳು 50 ಸಾವಿರ ರೂಪಾಯಿ ಹಾಗೂ ಒಂದು ಫ್ಲ್ಯಾಟ್​ ಕೊಡಿಸುವುದಾಗಿ ಹೇಳಿದ್ದರು. ಆದರೆ ಕೊನೆಗೆ ಚೂರೇ ಚೂರು ಹಣ ಕೊಟ್ಟು ಬೇರೇನೂ ನೀಡಲಿಲ್ಲ ಎನ್ನಲಾಗಿದೆ. ಮಾತಿನಂತೆ ಹಣ ಕೊಡಿ ಎಂದು ಹೇಳಿದಾಗ ಗುರೂಜಿ ನಿಂದಿಸಿದ್ದೂ ಅಲ್ಲದೇ, ಬೇನಾಮಿ ಆಸ್ತಿ‌ ಮರಳಿ ಕೊಡಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಗದರಿಸಿ ಕಳಿಸಿದ್ದಾರೆ ಎನ್ನಲಾಗಿದೆ.
ಕೊನೆಯ ಅವಕಾಶ ನೀಡುವ ಉದ್ದೇಶದಿಂದ ಜುಲೈ 4 ರಂದು ಗುರೂಜಿ ಜತೆಗೆ ಆರೋಪಿಗಳು ಸಂಧಾನದ ಮಾತುಕತೆ ನಡೆಸಿದ್ದರು. ಆದರೆ, ಇದು ಸಫಲತೆ ಕಾಣಲಿಲ್ಲ! ಅಂತಿಮವಾಗಿ ಕೊಲೆ ನಡೆದು ಹೋಗಿದೆ.
ಗುರೂಜಿ ಹತ್ಯೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶಿಫ್ಟ್​: ಮೃತಪಟ್ಟ ಮೊಮ್ಮಗನಿಂದಾಗಿ ಉಳಿದಿತ್ತು ಜೀವ!

ಚಂದ್ರಶೇಖರ ಗುರೂಜಿ ಹತ್ಯೆಯಾದ ಹೋಟೆಲ್​ನಲ್ಲಿ ಹೋಮ-ಹವನ! ದೇವರ ಮೊರೆ ಹೋದ ಸಿಬ್ಬಂದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 1 =
Remember me
