ಬೆಂಗಳೂರು:ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ನಾಲ್ಕು ದಿನಗಳ ಅಂತರದಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
‍ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರ ಉಸ್ತುವಾರಿಯಲ್ಲಿದ್ದ ಬೀದರ್​ ಜಿಲ್ಲೆಯನ್ನು ಅರಣ್ಯ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಇದೇ 2ನೇ ತಾರೀಖು ನೀಡಲಾಗಿತ್ತು. ಆದರೆ ಇದೀಗ ಬದಲಾವಣೆಯಾಗಿರುವ ಅಧಿಸೂಚನೆ ಪ್ರಕಾರ, ಈ ಜಿಲ್ಲೆಯ ಉಸ್ತುವಾರಿಯನ್ನು ಪುನಃ ಚವ್ಹಾಣ್‌ ಅವರಿಗೇ ನೀಡಲಾಗಿದೆ.
ಸಚಿವ ಅರವಿಂದ ಲಿಂಬಾವಳಿ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್​. ಶಂಕರ್ ಅವರಿಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.
ಮೇ 2ರಂದು ಹೊರಟಿದ್ದ ಅಧಿಸೂಚನೆ ಪ್ರಕಾರ, ಯಾದಗಿರಿ ಜಿಲ್ಲೆ ಉಸ್ತುವಾರಿಯನ್ನು ಪ್ರಭು ಚವ್ಹಾಣ ಅವರಿಗೆ, ಬೀದರ್​ ಜಿಲ್ಲೆಯನ್ನು ಅರವಿಂದ ಲಿಂಬಾವಳಿ ಅವರಿಗೆ ಮತ್ತು ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ಎಂಟಿಬಿ ನಾಗರಾಜು ಅವರಿಗೆ ನೀಡಲಾಗಿತ್ತು. ಇದೀಗ ಬದಲಾವಣೆಯಾಗಿದೆ.
ಆಶ್ರಮಕ್ಕೆ ಸೇವೆ ಸಲ್ಲಿಸಲು ಹೋದ ನಾಲ್ವರು ಮಹಿಳೆಯರ ಮೇಲೆ ‘ದೇವಮಾನವ’ನಿಂದ ಅತ್ಯಾಚಾರ

ಅಗಲಿದ ನಟನ ಶೋಕಾಚರಣೆ ವೇಳೆ ಸಭೆಯ ನಡುವೆ ಅಧ್ಯಕ್ಷನ ನೆಕ್ಕಿದ ನಾಯಿಗಳು- ವಿಡಿಯೋ ವೈರಲ್‌

ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆಗೆ ಮೀನಮೀಷ: ಕೇಂದ್ರದ ವಿರುದ್ಧ ಸುಪ್ರೀಂ ಗರಂ- ಕೂಡಲೇ ಬಿಡುಗಡೆಗೆ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twenty =
Remember me
