ಬೆಳಗಾವಿ:ಜಾಧವನಗರ ಹಾಗೂ ಗಾಲ್ಫ್ ಕ್ಲಬ್ ಮೈದಾನದಲ್ಲಿ 19 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಇಂದು ಬೆಳ್ಳಂ‌ಬೆಳಗ್ಗೆ (ಸೋಮವಾರ) ನಡು ರಸ್ತೆಯಲ್ಲೇ ಕಂಡಿದೆ.
ಬೆಳಗಾವಿ ಹಿಂಡಲಗಾ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಬಳಿಯ ಡಬಲ್ ರೋಡ್ ನಲ್ಲಿ ಸೋಮವಾರ ಬೆಳಿಗ್ಗೆ 6.15ಕ್ಕೆ ಪ್ರತ್ಯಕ್ಷವಾಗಿದೆ.
ಬಸ್ ಚಾಲಕರೊಬ್ಬರು ನಡು ರಸ್ತೆಯಲ್ಲಿ ಚಿರತೆ ಹೋಗುತ್ತಿದ್ದ ದೃಶ್ಯ ಕಂಡು, ಮೊಬೈಲ್ ನಲ್ಲಿ ಚಿತ್ರ ಸೆರೆಹಿಡಿದಿದ್ದಾರೆ. ರಸ್ತೆ ಪಕ್ಕದ ಗಿಡಗಂಟಿಗಳಿಂದ ಬಂದ ಚಿರತೆ ರಸ್ತೆ ದಾಟಿ ಓಡಿಹೋಗುತ್ತಿರುವ ದೃಶ್ಯವನ್ನು ಬಸ್ ಚಾಲಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರು ಚಿರತೆ ಕಂಡಿರುವುದನ್ನು ಖಚಿತಪಡಿಸಿದ್ದಾರೆ.
ಇತ್ತ ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಭರ್ಜರಿಯಾಗಿ ಆರಂಭಿಸಿದ್ದರೂ ಸುಳಿವು ಸಿಕ್ಕಿಲ್ಲ. ಆಗಸ್ಟ್ 5ರ ಮಧ್ಯಾಹ್ನ ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು.
ಇಂದು ಬೆಳಗ್ಗೆ ಚಿರತೆ ಮತ್ತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಿಣ ಭಾಗದ 22 ಶಾಲೆಗಳಿಗೆ ಇಂದು (ಸೋಮವಾರ) ಮತ್ತೆ ರಜೆ ಘೋಷಿಸಲಾಗಿದೆ. ಈ ಹಿಂದೆ ಚಿರತೆ ಪ್ರತ್ಯಕ್ಷವಾದಾಗಲೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಚಿರತೆಗೆ ಶೋಧ ಕಾರ್ಯ ನಡೆದಿತ್ತು. ಆದರೆ ಚಿರತೆ ಎಲ್ಲಿಯೂ ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುನಃ ಶಾಲೆಯನ್ನು ಆರಂಭಿಸಲಾಗಿತ್ತು. ಈಗ ಮತ್ತೆ ಪ್ರತ್ಯಕ್ಷ ಆಗಿರುವ ಕಾರಣ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಆಘಾತ: ಪಿಎಸ್​ಐ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಬಯಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
