ಬೆಂಗಳೂರು:ಮನೆ ಮನೆ ಮಾತಾಗಿದ್ದ ಧಾರಾವಾಹಿಗಳಲ್ಲಿ “ರಾಧಾ ಕಲ್ಯಾಣ” ಕೂಡ ಒಂದು. ಈ ಧಾರಾವಾಹಿ ನೋಡಿದವರಿಗೆ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡಿರುವ ವಿಶಾಖಾ ಬಹುತೇಕ ಮಹಿಳೆಯರಿಗೆ ಆಪ್ತಳು. ಈ ನಟಿಯ ಮೂಲ ಹೆಸರು ಚೈತ್ರಾ ರೈ.
ಇತ್ತೀಚೆಗೆ ಮದುವೆಯಾಗಿದ್ದ ನಟಿ ಚೈತ್ರಾ ಈಗ ತುಂಬು ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯ ನೆರವೇರಿಸಿಕೊಂಡಿದ್ದಾರೆ. ಅದರ ಫೋಟೋವನ್ನು ಇನ್‍ಸ್ಟಾಗ್ರಾಮನ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದ ಚೈತ್ರಾ ರೈ ಹಾಗೂ ಪ್ರಸನ್ನ ಶೆಟ್ಟಿ ಅವರಿಗೆ ಇದು ಮೊದಲ ಮಗುವಾಗಿದೆ. ಕೋವಿಡ್‍ನಿಂದಾಗಿ ಚೈತ್ರಾ ರೈ ಅವರ ಸೀಮಂತಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಿದ್ದು ಅಭಿಮಾನಿಗಳಿಗಾಗಿ ಇದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.
ಕನ್ನಡ ಮಾತ್ರವಲ್ಲದೇ ಚೈತ್ರಾ ರೈ ತೆಲುಗು ಕಿರುತೆರೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ. ಪ್ರಸನ್ನ ಶೆಟ್ಟಿ ಅವರು ಕತಾರ್​ನಲ್ಲಿ ಉದ್ಯೋಗದಲ್ಲಿದ್ದಾರೆ.
A post shared by Chaithra Rai (@chaithrarai17)

A post shared by Chaithra Rai (@chaithrarai17)
ಇದು ‘ಮುತ್ತಿನ’ ಕಥೆ: ಸಾರ್ವಜನಿಕ ಸ್ಥಳದಲ್ಲೇ ಕಿಸ್​ ಮಾಡಿ ವೈರಲ್​ ಆದ್ಲು ಶ್ರುತಿ ಹಾಸನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
