ಚಿಕ್ಕಬಳ್ಳಾಪುರ:ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ದಾರುಣವಾಗಿ ಮೃತಪಟ್ಟಿರುವ ಘಟನೆ .ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದಲ್ಲಿ ನಡೆದಿದೆ. ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ಗ್ರಾಮದ ಕೆರೆ ಕೋಡಿ ಹರಿದಿತ್ತು. ಇದನ್ನು ನೋಡಲು ಹೋದ ಬಾಲಕರಿಗೆ ಈಜುವ ಆಸೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕೋಡೇಗಂಡ್ಲು ಗ್ರಾಮದ ವೆಂಕಟೇಶ್- ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್ (9) ಮೃತಪಟ್ಟವರು. ಇವರೆಲ್ಲರೂ ಕೋಡೆಗಂಡ್ಲು ಗ್ರಾಮದ ನಿವಾಸಿಗಳು.ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋಗಿದ್ದ ಬಾಲಕರು ದುರಂತ ಸಾವು ಕಂಡಿದ್ದಾರೆ.
ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಉತ್ತರ ಪ್ರದೇಶದ ಸರ್ಕಾರಿ ವಕೀಲರಿಗೆ ಬಿಗ್​ ಶಾಕ್​! ಸಾವಿರಾರು ಮಂದಿ ಸೇವೆಯಿಂದ ವಜಾ…
ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು! ಅವರು ಕೊಟ್ಟ ಕಾರಣ ಹೀಗಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
